ಪಟಾಕಿ ಸಿಡಿಸುತ್ತಿದ್ದ ಬಾಲಕಿ ಟೆರೇಸ್ನಿಂದ ಕೆಳಬಿದ್ದು ದಾರುಣ ಸಾವು
Team Udayavani, Nov 8, 2018, 12:43 PM IST
ಮುಜಫರನಗರ, ಉತ್ತರ ಪ್ರದೇಶ : ಮನೆಯ ಟೆರೇಸ್ ಮೇಲೆ ಪಟಾಕಿ ಉರಿಸುತ್ತಿದ್ದ ಐದು ವರ್ಷ ಪ್ರಾಯದ ಬಾಲಕಿ ಟೆರೇಸ್ನಿಂದ ಬಿದ್ದು ಮೃತ ಪಟ್ಟ ದಾರುಣ ಘಟನೆ ವರದಿಯಾಗಿದೆ.
ಬಾಲಕಿಯು ಭೋಪಾ ಪೊಲೀಸ್ ಠಾಣೆ ವ್ಯಾಪ್ತಿಯ ಭೋಕಾಹೇರಿ ಗ್ರಾಮದ ನಿವಾಸಿ ಎಂದು ಪೊಲೀಸರು ತಿಳಿಸಿದ್ದಾರೆ. ನಿನ್ನೆ ಬುಧವಾರ ಸಂಜೆ ದೀಪಾವಳಿ ಹಬ್ಬದ ಪ್ರಯುಕ್ತ ಮನೆಯ ಟೆರೇಸ್ ಮೇಲೆ ಆಕೆ ಪಟಾಕಿ ಸಿಡಿಸುತ್ತಿದ್ದಾಗ ಈ ದುರಂತ ಸಂಭವಿಸಿತು.
ಟೆರೇಸ್ನಿಂದ ಬಿದ್ದು ತೀವ್ರವಾಗಿ ಗಾಯಗೊಂಡಿದ್ದ ಬಾಲಕಿಯನ್ನು ಕೂಡಲೇ ಆಸ್ಪತ್ರೆಗೆ ಒಯ್ಯಲಾಯಿತು; ಆದರೆ ಅಷ್ಟರಲ್ಲೇ ಆಕೆ ಮೃತಪಟ್ಟಿದ್ದುದಾಗಿ ವೈದ್ಯರು ಪ್ರಕಟಿಸಿದರು.