ಅಂಚೆ ಖಾತೆಯಲ್ಲೂ 500 ರೂ. ಬ್ಯಾಲೆನ್ಸ್ ಕಡ್ಡಾಯ
Team Udayavani, Nov 30, 2020, 7:45 AM IST
ಹೊಸದಿಲ್ಲಿ: ಇನ್ನು ಮುಂದೆ ಅಂಚೆ ಕಚೇರಿ ಉಳಿತಾಯ ಖಾತೆಯಲ್ಲೂ ಕನಿಷ್ಠ ಬ್ಯಾಲೆನ್ಸ್ ಕಾಯ್ದುಕೊಳ್ಳುವುದು ಕಡ್ಡಾಯ.
ಹೀಗೆಂದು ಸ್ವತಃ ಭಾರತೀಯ ಅಂಚೆ ಇಲಾಖೆಯೇ ಟ್ವೀಟ್ ಮಾಡಿದೆ. ಕನಿಷ್ಠ ಮೊತ್ತವನ್ನು 500 ರೂ. ಎಂದು ನಿಗದಿಪಡಿಸಲಾಗಿದೆ. ಅದರಂತೆ, ಡಿ.11 ರೊಳಗೆ ಖಾತೆದಾರರೆಲ್ಲರೂ ತಮ್ಮ ಪೋಸ್ಟ್ ಆಫೀಸ್ ಖಾತೆಗಳಲ್ಲಿ ಕನಿಷ್ಠ 500 ರೂ.ಗಳಿರುವಂತೆ ನೋಡಿಕೊಳ್ಳಬೇಕು. ಇಲ್ಲದಿದ್ದರೆ, ಖಾತೆಯಿಂದ ನಿರ್ವಹಣ ವೆಚ್ಚ ಕಡಿತ ಗೊಳ್ಳುತ್ತದೆ ಎಂದು ಟ್ವೀಟ್ನಲ್ಲಿ ಹೇಳಲಾಗಿದೆ.
ವಿತ್ತೀಯ ವರ್ಷದ ಅಂತ್ಯದಲ್ಲಿ ಖಾತೆಯಲ್ಲಿ ಕನಿಷ್ಠ ಮೊತ್ತ 500 ರೂ.ಗಳು ಇಲ್ಲವೆಂದಾದಲ್ಲಿ, ಖಾತೆ ನಿರ್ವಹಣ ವೆಚ್ಚದ ರೂಪದಲ್ಲಿ 100 ರೂ.ಗಳನ್ನು ಕಡಿತ ಮಾಡಲಾಗುತ್ತದೆ. ಒಂದು ವೇಳೆ, ಉಳಿತಾಯ ಖಾತೆಯಲ್ಲಿ ಶೂನ್ಯ ಮೊತ್ತವಿದ್ದರೆ, ಆಗ ತನ್ನಿಂತಾನೇ ಆ ಖಾತೆ ರದ್ದಾಗಲಿದೆ.
ಇದಲ್ಲದೇ, ತಿಂಗಳ 10ನೇ ದಿನಾಂಕ ದಿಂದ ಕೊನೆಯ ದಿನಾಂಕದವರೆಗಿನ ಅವಧಿಯಲ್ಲಿ ಖಾತೆಯಲ್ಲಿ 500 ರೂ.ಗಳಿಗಿಂತ ಕಡಿಮೆ ಮೊತ್ತವಿದ್ದರೆ, ಆ ತಿಂಗಳ ಬಡ್ಡಿಯೂ ಸಿಗುವುದಿಲ್ಲ ಎಂದೂ ಅಂಚೆ ಇಲಾಖೆ ಸ್ಪಷ್ಟಪಡಿಸಿದೆ. ಪ್ರಸ್ತುತ ವೈಯಕ್ತಿಕ ಅಥವಾ ಜಂಟಿ ಉಳಿತಾಯ ಖಾತೆಗೆ ಶೇ.4ರ ಬಡ್ಡಿ ಒದಗಿಸಲಾಗುತ್ತಿದೆ.
Ad
ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
“ತಾಂಡವ’ ತಂಡಕ್ಕೆ ಮಧ್ಯಂತರ ರಕ್ಷಣೆ ನೀಡಲು ಸುಪ್ರೀಂ ಕೋರ್ಟ್ ನಕಾರ
ಹಿಂಸಾಚಾರದ ಎಫೆಕ್ಟ್: ಹೋರಾಟ ಇಬ್ಭಾಗ-ಪ್ರತಿಭಟನೆಯಿಂದ ಹಿಂದೆ ಸರಿದ 2 ಸಂಘಟನೆ
ಟ್ರ್ಯಾಕ್ಟರ್ ರಾಲಿ, ಹಿಂಸಾಚಾರ ಪ್ರಕರಣ: ಯಾದವ್, ಟಿಖಾಯತ್ ಸೇರಿ ಹಲವರ ವಿರುದ್ಧ ಕೇಸ್
ದೆಹಲಿ: ಟ್ರ್ಯಾಕ್ಟರ್ ರಾಲಿ ವೇಳೆ ಹಿಂಸಾಚಾರ; 200 ಮಂದಿ ದೆಹಲಿ ಪೊಲೀಸರ ವಶಕ್ಕೆ
ಭಾರತದ ಈ ನಗರದಲ್ಲಿ ‘100 ರೂ. ದಾಟಿದ ಪ್ರತಿ ಲೀಟರ್ ಪೆಟ್ರೋಲ್ ಬೆಲೆ .?’
MUST WATCH
ಹೊಸ ಸೇರ್ಪಡೆ
ಲಂಚದ ಹಣ ಪಡೆಯುವಾಗಲೇ ಎಸಿಬಿ ಬಲೆಗೆ ಬಿದ್ದ ಡಿಎಚ್ಓ ಕಛೇರಿ ವ್ಯವಸ್ಥಾಪಕ ಮನೋಹರ
ಅಲ್ಖೈದಾ ಜೊತೆ ಸೇರಿ ಹೊಸ ಉಗ್ರಸಂಘಟನೆ ಕಟ್ಟಲು ಹಖ್ಖಾನಿ ಸಂಚು?
“ತಾಂಡವ’ ತಂಡಕ್ಕೆ ಮಧ್ಯಂತರ ರಕ್ಷಣೆ ನೀಡಲು ಸುಪ್ರೀಂ ಕೋರ್ಟ್ ನಕಾರ
ಜೆಡಿಎಸ್ ನ ಹೊರಟ್ಟಿಗೆ ಸಭಾಪತಿ ಸ್ಥಾನ : ಬಿಜೆಪಿಯ ಪ್ರಾಣೇಶ್ ಉಪ ಸಭಾಪತಿ
ಬೇಬಿಬೆಟ್ಟದ ಸುತ್ತ ಮಾರ್ಚ್ 24ರವರೆಗೆ ಎಲ್ಲ ರೀತಿಯ ಗಣಿಗಾರಿಕೆ ನಿಷೇಧ