8 ಕೋಟಿ ಮಹಿಳೆಯರ ಜನಧನ ಖಾತೆಗೆ ಹಣ ಜಮೆ; ವಿವಿಧ ಹಂತಗಳಲ್ಲಿ ವಿಥ್ಡ್ರಾ ಮಾಡಲು ಸೂಚನೆ
ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಖಾತೆಗೇ ಜಮೆ
Team Udayavani, Apr 6, 2020, 7:10 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ನವದೆಹಲಿ: ಕೋವಿಡ್ 19 ವೈರಸ್ ಸಂಬಂಧಿತ ಲಾಕ್ ಡೌನ್ ನಿಂದ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವವರ ನೆರವಿಗೆ ಧಾವಿಸಿರುವ ಕೇಂದ್ರ ಸರ್ಕಾರ, ಈಗಾಗಲೇ ಜನಧನ ಖಾತೆ ಹೊಂದಿರುವ ಸುಮಾರು 20 ಕೋಟಿ ಮಹಿಳೆಯರ ಪೈಕಿ 8 ಕೋಟಿ ಮಂದಿಗೆ (ಅಂದರೆ ಶೇಕಡಾ 40 ಮಂದಿಗೆ) ತಲಾ 500 ರೂ.ಗಳನ್ನು ಒದಗಿಸಿದೆ. ಇದನ್ನು ಏ.3ರಂದೇ ನೇರವಾಗಿ ಅವರ ಜನಧನ ಖಾತೆಗೆ ಜಮೆ ಮಾಡಲಾಗಿದೆ.
ಬ್ಯಾಂಕು ಶಾಖೆಗಳು ಹಾಗೂ ಎಟಿಎಂಗಳಲ್ಲಿ ಜನಸಂದಣಿ ಹೆಚ್ಚಾಗಿ ಸಾಮಾಜಿಕ ಅಂತರದ ನಿಯಮ ಉಲ್ಲಂಘನೆ ಆಗಬಾರದು ಎಂಬ ಕಾರಣಕ್ಕೆ ನೇರವಾಗಿ ಜನಧನ ಖಾತೆಗೇ ಹಣ ಜಮೆ ಮಾಡಲು ನಿರ್ಧರಿಸಲಾಯಿತು ಎಂದು ಗ್ರಾಮೀಣಾಭಿವೃದ್ಧಿ ಸಚಿವಾಲಯ ತಿಳಿಸಿದೆ.
ಜತೆಗೆ, ಖಾತೆ ಸಂಖ್ಯೆಯ ಕೊನೆಯ ಅಂಕಿ 0 ಅಥವಾ 1 ಆಗಿರುವವರು ಏ.3ರಂದೇ ತಮ್ಮ ಖಾತೆಯಿಂದ ಹಣ ವಿತ್ ಡ್ರಾ ಮಾಡಬಹುದಾಗಿದ್ದು, 2 ಅಥವಾ 3 ಅಂಕಿ ಹೊಂದಿರುವವರು ಏ.4, 4 ಅಥವಾ 5 ಅಂಕಿ ಇರುವವರು ಏ.7, 6 ಅಥವಾ 7 ಅಂಕಿಯವರು ಏ.8ರಂದು ಮತ್ತು 8 ಅಥವಾ 9 ಅಂಕಿ ಇರುವವರು ಏ.9ರಂದು ವಿತ್ ಡ್ರಾ ಮಾಡಬಹುದು ಎಂದೂ ಸಚಿವಾಲಯ ಮಾಹಿತಿ ನೀಡಿದೆ.
ಇದರ ಜೊತೆಗೆ, ಉಜ್ವಲ ಯೋಜನೆಯ 8 ಕೋಟಿ ಫಲಾನುಭವಿಗಳ ಖಾತೆಗೆ ಒಟ್ಟಾರೆ 5 ಸಾವಿರ ಕೋಟಿ ರೂ.ಗಳನ್ನು ಜಮೆ ಮಾಡಲಾಗಿದೆ. ಈ ಹಣದಿಂದ ಅವರು 3 ತಿಂಗಳ ಕಾಲಕ್ಕೆ ಎಲ್.ಪಿ.ಜಿ. ಸಿಲಿಂಡರ್ ಖರೀದಿಸಬಹುದು. ಕಿಸಾನ್ ಸಮ್ಮಾನ್ ಯೋಜನೆಗಾಗಿ 16 ಸಾವಿರ ಕೋಟಿ ರೂ. ಬಿಡುಗಡೆ ಮಾಡಲಾಗಿದ್ದು, ರೈತರು ತಮ್ಮ ಬ್ಯಾಂಕ್ ಖಾತೆಯಲ್ಲಿ ಮುಂಗಡವಾಗಿ 2 ಸಾವಿರ ರೂ. ಪಡೆಯಲಿದ್ದಾರೆ. ಅಲ್ಲದೆ, ಹಿರಿಯ ನಾಗರಿಕರು, ವಿಧವೆಯರು ಹಾಗೂ ದಿವ್ಯಾಂಗರು ತಮ್ಮ ಖಾತೆಗಳಿಗೆ ತಲಾ 3 ಸಾವಿರ ರೂ. ಪಡೆಯಲಿದ್ದಾರೆ ಎಂದೂ ಸಚಿವಾಲಯ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Brahmos; ಫಿಲಿಪ್ಪೀನ್ಸ್ಗೆ ಬ್ರಹ್ಮೋಸ್: ಭಾರತದ ಮೊದಲ ರಫ್ತು
EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ
ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್ಗೆ ಕೇಜ್ರಿವಾಲ್ ಮಾಹಿತಿ
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು