10ಲಕ್ಷ ಜನಸಂಖ್ಯೆಗೆ 505 ಸಾವು
Team Udayavani, Jul 8, 2020, 9:29 AM IST
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ/ಮುಂಬಯಿ: ಭಾರತದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ 7 ಲಕ್ಷ ಹಾಗೂ ಮೃತರ ಸಂಖ್ಯೆ 20 ಸಾವಿರ ದಾಟಿದ್ದರೂ, ಜಗತ್ತಿನ ಇತರೆ ದೇಶಗಳಿಗೆ ಹೋಲಿಸಿದರೆ ಪ್ರತಿ 10 ಲಕ್ಷ ಜನಸಂಖ್ಯೆಗೆ ಸೋಂಕಿತರ ಸಂಖ್ಯೆ ಮತ್ತು ಸಾವಿನ ಸಂಖ್ಯೆ ಭಾರತದಲ್ಲಿ ಕನಿಷ್ಠ ಪ್ರಮಾಣದಲ್ಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ವರದಿ ಉಲ್ಲೇಖೀಸಿ ಕೇಂದ್ರ ಆರೋಗ್ಯ ಸಚಿವಾಲಯ ಮಂಗಳವಾರ ಹೇಳಿದೆ.
ಪ್ರತಿ 10 ಲಕ್ಷ ಜನಸಂಖ್ಯೆಗೆ ಸೋಂಕಿತರ ಸಂಖ್ಯೆ ಜಾಗತಿಕವಾಗಿ ಸರಾಸರಿ 1,453.25 ಆಗಿದ್ದರೆ, ಭಾರತದಲ್ಲಿ ಇದು 505.37 ಆಗಿದೆ. ಚಿಲಿಯಲ್ಲಿ ಈ ಪ್ರಮಾಣ 15,459.8, ಪೆರುವಿನಲ್ಲಿ 9,070.8 ಇದೆ. ಅಮೆರಿಕದಲ್ಲಿ 10 ಲಕ್ಷ ಜನರಲ್ಲಿ 8,560.5 ಮಂದಿ, ಬ್ರೆಜಿಲ್‌ನಲ್ಲಿ 7,419 ಮಂದಿ, ಸ್ಪೇನ್‌ನಲ್ಲಿ 5,358, ರಷ್ಯಾದಲ್ಲಿ 4,713,ಯು.ಕೆ.ಯಲ್ಲಿ 4,203, ಇಟಲಿಯಲ್ಲಿ 3,996 ಮತ್ತು ಮೆಕ್ಸಿಕೋದಲ್ಲಿ 1,955 ಮಂದಿಗೆ ಸೋಂಕು ದೃಢಪಟ್ಟಿದೆ ಎಂದೂ ಅಧಿಕಾರಿಗಳು ಹೇಳಿದ್ದಾರೆ. ಇನ್ನು, ಸಾವಿನ ವಿಚಾರಕ್ಕೆ ಬಂದರೆ, ಭಾರತದಲ್ಲಿ ಪ್ರತಿ 10 ಲಕ್ಷ ಜನರಲ್ಲಿ 14.27 ಮಂದಿ ಸಾವಿಗೀಡಾಗುತ್ತಿದ್ದಾರೆ. ಜಾಗತಿಕವಾಗಿ ಈ ಸಂಖ್ಯೆ 4 ಪಟ್ಟು ಹೆಚ್ಚಿದ್ದು, 68.29 ಮಂದಿ ಸೋಂಕಿಗೆ ಬಲಿಯಾಗುತ್ತಿದ್ದಾರೆ. ಭಾರತವು ತನ್ನ ಆಸ್ಪತ್ರೆಗಳ ಮೂಲಸೌಕರ್ಯ ಹೆಚ್ಚಳ ಮಾಡಿ, ಕೊರೊನಾ ಪ್ರಕರಣಗಳನ್ನು ಪರಿಣಾಮಕಾರಿಯಾಗಿ ಎದುರಿಸುತ್ತಿರುವುದರಿಂದ ಹೆಚ್ಚಿನ ಸಾವು-ನೋವು ಸಂಭವಿಸಿಲ್ಲ ಎಂದಿದ್ದಾರೆ.
ಚೀನ ಮೀರಿಸಿದ ಮುಂಬಯಿ: ಮುಂಬಯಿನಲ್ಲಿ ಈವರೆಗೆ ಕೊರೊನಾದಿಂದ 4,938 ಮಂದಿ ಮೃತಪಟ್ಟಿದ್ದಾರೆ. 85,724 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. 2019ರ ಡಿಸೆಂಬರ್‌ನಲ್ಲಿ ಮೊದಲ ಬಾರಿಗೆ ಕೋವಿಡ್ ಸೋಂಕು ಕಾಣಿಸಿಕೊಂಡ ಚೀನದಲ್ಲಿ ಈವರೆಗೆ 4,634 ಮಂದಿ ಮೃತಪಟ್ಟರೆ, 83,565 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಈಗ ಮುಂಬಯಿ ಚೀನ ಮೀರಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೈದರಾಬಾದ್ ಅತ್ಯಾಚಾರಿಗಳ ಎನ್ ಕೌಂಟರ್ ‘ಪೊಲೀಸರ ಪೂರ್ವಯೋಜಿತ ಕೃತ್ಯ’: ಸುಪ್ರೀಂ ಗೆ ವರದಿ
ಏರ್ ಇಂಡಿಯಾ ವಿಮಾನದ ಎಂಜಿನ್ ಸ್ಥಗಿತ !: ಮುಂಬೈಯಲ್ಲಿ ತುರ್ತು ಭೂಸ್ಪರ್ಶ
ಹಲ್ಲೆ ಪ್ರಕರಣ: ಶರಣಾಗಲು 2 ವಾರಗಳ ಕಾಲಾವಕಾಶ ಕೊಡಿ: ಸುಪ್ರೀಂಕೋರ್ಟ್ ಗೆ ಸಿಧು
ತಮಿಳುನಾಡು: ಮಾನಸಿಕ ಅಸ್ವಸ್ಥ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ..!
ಜಮ್ಮುವಿನ ಹೆದ್ದಾರಿಯಲ್ಲಿ ಸುರಂಗ ಕುಸಿತ : 9 ಮಂದಿ ಅವಶೇಷಗಳ ಅಡಿ ; ರಕ್ಷಣಾ ಕಾರ್ಯ