ತಮಿಳುನಾಡಿಗೆ ಲಷ್ಕರ್ ಉಗ್ರರು ನುಸುಳಿರುವ ಶಂಕೆ ; ಎಲ್ಲೆಡೆ ಕಟ್ಟೆಚ್ಚರ

Team Udayavani, Aug 23, 2019, 3:09 PM IST

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಚೆನ್ನೈ: ಆರು ಜನ ಲಷ್ಕರ್ ಉಗ್ರರು ಶ್ರೀಲಂಕಾ ಮೂಲಕ ಕೊಯಂಬತ್ತೂರಿಗೆ ನುಸುಳಿದ್ದಾರೆ ಎಂಬ ಆಘಾತಕಾರಿ ಮಾಹಿತಿಯೊಂದು ಹೊರಬಿದ್ದಿದೆ. ಕೇಂದ್ರ ಗುಪ್ತಚರ ಇಲಾಖೆಯ ಮಾಹಿತಿಯನ್ನು ಆಧರಿಸಿ ತಮಿಳುನಾಡು ಪೊಲೀಸರು ಈ ವಿಷಯನ್ನು ಬಹಿರಂಗಪಡಿಸಿದ್ದಾರೆ ಮತ್ತು ಕೊಯಂಬತ್ತೂರಿನಲ್ಲಿ ಹೈ ಅಲರ್ಟ್ ಸ್ಥಿತಿ ನಿರ್ಮಾಣವಾಗಿದೆ.

ಐದು ಜನ ಲಂಕಾ ತಮಿಳರು ಮತ್ತು ಮತ್ತು ಓರ್ವ ಪಾಕಿಸ್ಥಾನಿ ನಾಗರಿಕ ಒಳಗೊಂಡಿರುವ ತಂಡ ನಗರಕ್ಕೆ ನುಸುಳಿದ್ದಾರೆ ಎಂಬ ಗುಪ್ತಚರ ಮಾಹಿತಿಯನ್ನು ಆಧರಿಸಿ ತಮಿಳುನಾಡು ಪೊಲೀಸರು ಎಲ್ಲೆಡೆ ಕಟ್ಟೆಚ್ಚರ ಸ್ಥಿತಿ ವಹಿಸುವಂತೆ ಸೂಚನೆ ನೀಡಿದ್ದಾರೆ.

ಈ ಸೂಚನೆಯನ್ನು ಆಧರಿಸಿ ಚೆನ್ನೈನಲ್ಲೂ ಸಹ ಪೊಲೀಸ್ ಗಸ್ತನ್ನು ಹೆಚ್ಚಿಸಲಾಗಿದೆ. ಇನ್ನು ತಮಿಳುನಾಡಿಗೆ ನುಸುಳಿರುವ ಶಂಕಿತರಿಬ್ಬರ ಭಾವಚಿತ್ರಗಳನ್ನು ಕೊಯಮುತ್ತೂರು ಪೊಲೀಸರು ಬಿಡುಗಡೆಗೊಳಿಸಿದ್ದಾರೆ.

ಇನ್ನು ರಾಜ್ಯಾದ್ಯಂತ ಈ ಕೆಳಗಿನ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಡಿಜಿಪಿ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

– ವಸತಿಗೃಹಗಳ ತಪಾಸಣೆ

– ಸ್ಪೋಟಕ ವಸ್ತುಗಳ ಸಾಗಾಟ ತಡೆಗೆ ವಾಹನಗಳ ತಪಾಸಣೆ

– ಪೊಲೀಸ್ ಗಸ್ತು ಮತ್ತು ತಪಾಸಣೆ

– ಕ್ರಿಮಿನಲ್ ಹಿನ್ನಲೆಯ ವ್ಯಕ್ತಿಗಳಿಗೆ ಲುಕ್ ಔಟ್ ನೋಟೀಸ್

– ರೈಲ್ವೇ ನಿಲ್ದಾಣಗಳು, ಬಸ್ ಸ್ಟ್ಯಾಂಡ್ ಗಳು ಮತ್ತು ವಿಮಾನ ನಿಲ್ದಾಣಗಳ ತಪಾಸಣೆ

– ಪ್ರಮುಖ ದೇವಸ್ಥಾನಗಳಲ್ಲಿ ಸುರಕ್ಷತಾ ಪರಿಶೀಲನೆ


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ