ಇದೆಂಥಹಾ ಕ್ರೌರ್ಯ; ಒಂಟಿಯಾಗಿದ್ದ ಮಹಿಳೆಯ ತಲೆ ಕತ್ತರಿಸಿ, ಹೊಟ್ಟೆ ಸೀಳಿ ಬರ್ಬರ ಹತ್ಯೆ

ಅಪಾರ್ಟ್ ಮೆಂಟ್ ನಲ್ಲಿ ತನ್ನ ಇಬ್ಬರು ಮಕ್ಕಳೊಂದಿಗೆ ವಾಸವಾಗಿದ್ದರು

Team Udayavani, Dec 13, 2019, 10:23 AM IST

ಕೋಲ್ಕತಾ: ಬಾಡಿಗೆ ಅಪಾರ್ಟ್ ಮೆಂಟ್ ನಲ್ಲಿ ವಾಸವಾಗಿದ್ದ 60 ವರ್ಷದ ಮಹಿಳೆಯ ತಲೆಕತ್ತರಿಸಿ, ಹೊಟ್ಟೆಯನ್ನು ಸೀಳಿ ಬರ್ಬರವಾಗಿ ಹತ್ಯೆಗೈದಿರುವ ಘಟನೆ ದಕ್ಷಿಣ ಕೋಲ್ಕತಾದಲ್ಲಿ ನಡೆದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಮೂಲತಃ ಪಂಜಾಬ್ ಮೂಲದ ಉರ್ಮಿಳಾ ಕುಮಾರಿ (60ವರ್ಷ) ದಕ್ಷಿಣ ಕೋಲ್ಕತಾದ ಬಾಡಿಗೆ ಅಪಾರ್ಟ್ ಮೆಂಟ್ ನಲ್ಲಿ ತನ್ನ ಇಬ್ಬರು ಮಕ್ಕಳೊಂದಿಗೆ ವಾಸವಾಗಿದ್ದರು. ಘಟನೆ ನಡೆದ ವೇಳೆ ಮಕ್ಕಳು ಮದುವೆ ಸಮಾರಂಭದ ಹಿನ್ನೆಲೆಯಲ್ಲಿ ದೆಹಲಿಯಿಂದ ಹೊರಗೆ ಹೋಗಿರುವುದಾಗಿ ಪೊಲೀಸರು ವಿವರಿಸಿದ್ದಾರೆ.

ಎರಡು ದಿನಗಳಿಂದ ಮನೆಯಲ್ಲಿ ಈಕೆ ಒಬ್ಬರೇ ವಾಸವಾಗಿದ್ದರು. ನಾವು ಮಕ್ಕಳನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದೇವೆ. ಇದೊಂದು ಲಾಭದ ಅಥವಾ ಸೇಡಿನ ಹಿನ್ನೆಲೆಯಲ್ಲಿ ನಡೆದ ಕೊಲೆಯಾಗಿದೆ. ನಾವು ಯಾವುದೇ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ ಎಂದು ಜಂಟಿ ಪೊಲೀಸ್ ಆಯುಕ್ತ ಮುರಳೀಧರ್ ಶರ್ಮಾ ತಿಳಿಸಿದ್ದಾರೆ.

ಮಹಿಳೆಯ ಮೈಮೇಲೆ ಇದ್ದ ಚಿನ್ನಾಭರಣಗಳನ್ನು ಹಂತಕರು ಮುಟ್ಟಿಲ್ಲ, ಅಲ್ಲದೇ ನಗದನ್ನು ಕೂಡಾ ಕೊಂಡೊಯ್ದಿಲ್ಲ. ಆದರೆ ಎರಡು ಕೋಣೆಗಳಲ್ಲಿರುವ ವಾರ್ಡ್ ರೋಬ್ಸ್ ಅನ್ನು ಜಾಲಾಡಿರುವುದಾಗಿ ಶರ್ಮಾ ಹೇಳಿದರು. ಮಹಿಳೆಯ ತಲೆ ಕತ್ತರಿಸಿ, ಹೊಟ್ಟೆಗೆ ಹಲವು ಬಾರಿ ಚುಚ್ಚಿ ಸೀಳಿ ಹಾಕಿರುವ ಭೀಬತ್ಸ ಘಟನೆ ಇದಾಗಿದೆ ಎಂದರು.

ಸ್ಥಳೀಯ ನಿವಾಸಿಗಳ ಆರೋಪದ ಪ್ರಕಾರ, ಸಂತ್ರಸ್ತೆ ವಾಸಿಸುತ್ತಿರುವ ಅಪಾರ್ಟ್ ಮೆಂಟ್ ನಂತರ ವೈನ್ ಶಾಪ್ ವೊಂದು ತೆರೆದಿದ್ದು, ಈಕೆ ದಿನಂಪ್ರತಿ ಕುಡಿದು ರಸ್ತೆಯಲ್ಲಿ ತೂರಾಡುತ್ತಾ, ಅರೆನಗ್ನಾವಸ್ಥೆಯಲ್ಲಿ ತಿರುಗಾಡುತ್ತಿದ್ದು ಈ ಬಗ್ಗೆ ಗಾರಿಯಾಹಾತ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವುದಾಗಿ ತಿಳಿಸಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ