
ಶಿಂಧೆ ಮತ್ತೆ ಮೇಲುಗೈ ; 66 ಥಾಣೆ ಮಹಾನಗರ ಪಾಲಿಕೆ ಸದಸ್ಯರ ಬೆಂಬಲ
Team Udayavani, Jul 7, 2022, 7:36 PM IST

ಥಾಣೆ: ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಗುಂಪಿಗೆ ಮತ್ತೆ ಹಿನ್ನಡೆಯಾಗಿದ್ದು, ಥಾಣೆ ಮಹಾನಗರ ಪಾಲಿಕೆಯ (ಟಿಎಂಸಿ) ಪಕ್ಷದ 67 ಮಾಜಿ ಕಾರ್ಪೊರೇಟರ್‌ಗಳ ಪೈಕಿ 66 ಮಂದಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಬಣಕ್ಕೆ ಬೆಂಬಲ ನೀಡಿದ್ದಾರೆ. ಶಿವಸೇನೆಯ ಭದ್ರಕೋಟೆಯಾಗಿದ್ದ 131 ಸದಸ್ಯ ಬಲದ ಟಿಎಂಸಿಯ ಅಧಿಕಾರಾವಧಿಯು ಸ್ವಲ್ಪ ಸಮಯದ ಹಿಂದೆ ಕೊನೆಗೊಂಡಿತ್ತು, ಈಗ ಅದರ ಚುನಾವಣೆಗಳು ನಡೆಯಲಿವೆ.
ಮಾಜಿ ಮೇಯರ್ ನರೇಶ್ ಮ್ಹಾಸ್ಕೆ ನೇತೃತ್ವದ 66 ಮಾಜಿ ಸೇನಾ ಕಾರ್ಪೊರೇಟರ್‌ಗಳು ಬುಧವಾರ ರಾತ್ರಿ ಮುಂಬಯಿಯ ‘ನಂದನವನ’ ಬಂಗಲೆಯಲ್ಲಿ ಸಿಎಂ ಶಿಂಧೆ ಅವರನ್ನು ಭೇಟಿ ಮಾಡಿ ಅವರಿಗೆ ಬೆಂಬಲವನ್ನು ನೀಡಿದರು ಎಂದು ಶಿಂಧೆ ಅವರ ಕಚೇರಿಯ ಪ್ರಕಟಣೆ ತಿಳಿಸಿದೆ.
ಕಳೆದ ತಿಂಗಳು, ಶಿಂಧೆ ಅವರು ಸೇನೆಯ ವಿರುದ್ಧ ಬಂಡಾಯವನ್ನು ಪ್ರಾರಂಭಿಸಿದ್ದರು ಮತ್ತು ಪಕ್ಷದ ಬಹುಪಾಲು ಶಾಸಕರು ಅವರ ಪರವಾಗಿ ನಿಂತಿದ್ದರು, ಇದು ಉದ್ಧವ್ ಠಾಕ್ರೆ ನೇತೃತ್ವದ ರಾಜ್ಯದಲ್ಲಿ ಮಹಾ ವಿಕಾಸ್ ಅಘಾಡಿ ಸರ್ಕಾರ ಪತನಕ್ಕೆ ಕಾರಣವಾಗಿತ್ತು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Chennai ದೊರೆಯಲಿದೆ ನಗರ ಪ್ರವಾಹ ನಿಯಂತ್ರಣ ವ್ಯವಸ್ಥೆ :ದೇಶದಲ್ಲಿಯೇ ಮೊದಲ ಬಾರಿಗೆ

Politics: ಶೋಭಾ ಕರಂದ್ಲಾಜೆ, ರಾಜೀವ್ ಚಂದ್ರಶೇಖರ್,ಅರ್ಜುನ್ ಮುಂಡಾಗೆ ಹೆಚ್ಚುವರಿ ಖಾತೆ

China: ದೇಶಕ್ಕೆ ಚೀನ ಸೋಂಕು?- ದಿಲ್ಲಿ ಏಮ್ಸ್‌ನಲ್ಲಿ ಏಳು ಮಾದರಿ ಪಾಸಿಟಿವ್

Deepfake ರತನ್ ಟಾಟಾ ಫೋಟೋ ಬಳಕೆ

Sugar factory; ಎಥೆನಾಲ್‌ಗೆ ಕಬ್ಬಿನ ರಸ ಬಳಸದಿರಿ: ಕೇಂದ್ರ ಸರಕಾರ ನಿರ್ದೇಶನ
MUST WATCH
ಹೊಸ ಸೇರ್ಪಡೆ

Chennai ದೊರೆಯಲಿದೆ ನಗರ ಪ್ರವಾಹ ನಿಯಂತ್ರಣ ವ್ಯವಸ್ಥೆ :ದೇಶದಲ್ಲಿಯೇ ಮೊದಲ ಬಾರಿಗೆ

South Africa Tour; ಭಾರತೀಯ ತಂಡ ಡರ್ಬಾನ್‌ಗೆ ಆಗಮನ

Politics: ಶೋಭಾ ಕರಂದ್ಲಾಜೆ, ರಾಜೀವ್ ಚಂದ್ರಶೇಖರ್,ಅರ್ಜುನ್ ಮುಂಡಾಗೆ ಹೆಚ್ಚುವರಿ ಖಾತೆ

ಬೆಳಗಾವಿ ಕಲಾಪದಲ್ಲಿ BJP ಗಲಿಬಿಲಿ!- ಅಶೋಕ್, ವಿಜಯೇಂದ್ರ ನಡುವೆ ಧರಣಿ, ಸಭಾತ್ಯಾಗ ಗೊಂದಲ

China: ದೇಶಕ್ಕೆ ಚೀನ ಸೋಂಕು?- ದಿಲ್ಲಿ ಏಮ್ಸ್‌ನಲ್ಲಿ ಏಳು ಮಾದರಿ ಪಾಸಿಟಿವ್