ಬಸ್ ಹರಿದು ಮೂವರು ಮಕ್ಕಳು ಸೇರಿದಂತೆ ಏಳು ಜನರ ದಾರುಣ ಸಾವು
Team Udayavani, Oct 11, 2019, 9:15 AM IST
ಬುಲಂದ್ ಶಹರ್: ಬಸ್ ಹರಿದು ನಾಲ್ವರು ಮಹಿಳೆಯರು, ಮೂರು ಮಕ್ಕಳು ಸೇರಿದಂತೆ ಏಳು ಜನರು ಮೃತಪಟ್ಟ ದಾರುಣ ಘಟನೆ ಉತ್ತರಪ್ರದೇಶದ ಬುಲಂದ್ ಶಹರ್ ನಲ್ಲಿ ನಡೆದಿದೆ.
ತೀರ್ಥಯಾತ್ರೆಗೆಂದು ಗಂಗಾಘಾಟ್ ಗೆ ಬಂದಿದ್ದ ಜನರು ಪಾದಚಾರಿ ಮಾರ್ಗದಲ್ಲಿ ಮಲಗಿದ್ದರು. ಈ ವೇಳೆ ಖಾಸಗಿ ಬಸ್ಸೊಂದು ಅವರ ಮೇಲೆ ಹರಿದು ಏಳು ಜನರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತರೆಲ್ಲರೂ ಉತ್ತರಪ್ರದೇಶದ ಹತ್ರಾಸ್ ಮೂಲದವರು ಎಂದು ತಿಳಿದುಬಂದಿದೆ. ಅಪಘಾತದ ನಂತರ ಬಸ್ ಚಾಲಕ ಪರಾರಿಯಾಗಿದ್ದು ಉತ್ತರ ಪ್ರದೇಶ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.