ಕಲ್ಲೆಸೆದು ಕಳ್ಳರ ಓಡಿಸಿದ ವೃದ್ಧ

Team Udayavani, Jul 16, 2019, 5:56 AM IST

ಸಾಂದರ್ಭಿಕ ಚಿತ್ರ.

ಔರಂಗಾಬಾದ್‌: ಇಲ್ಲಿನ ಪಡೇಗಾಂವ್‌ ಪ್ರಾಂತ್ಯದ ಮಿಸ್ಬಾ ಕಾಲನಿಯಲ್ಲಿದ್ದ ಎಟಿಎಂ ಯಂತ್ರವನ್ನು ದೋಚಲು ಬಂದಿದ್ದ ಕಳ್ಳರ ತಂಡವೊಂದನ್ನು 73 ವರ್ಷದ ವೃದ್ಧರೊ ಬ್ಬರು ಏಕಾಂಗಿಯಾಗಿ ಓಡಿಸಿರುವ ಘಟನೆ ಭಾನುವಾರ ನಸುಕಿನಲ್ಲಿ ನಡೆದಿದೆ.

ಎಟಿಎಂ ದೋಚಲು ಬಂದಿದ್ದ ಕಳ್ಳರು, ಗ್ಯಾಸ್‌ ಕಟರ್‌ನಿಂದ ಮಷೀನ್‌ನ ಹೊರ ಹೊದಿಕೆ ಕತ್ತರಿಸಿದಾಗ ಸದ್ದಾಗಿದೆ. ಆಗ ಹತ್ತಿರದ ಕಟ್ಟಡವೊಂದರ ವಾಚ್‌ಮನ್‌ ಶೇಖ್‌ ಸಮದ್‌ ಅಹ್ಮದ್‌ (73) ಎಚ್ಚರಗೊಂಡಿದ್ದು ಕಳ್ಳತನ ಅರಿವಿಗೆ ಬಂದಿದೆ. ತಕ್ಷಣವೇ 100 ಸಂಖ್ಯೆಗೆ ಡಯಲ್‌ ಮಾಡಿದ್ದಾರೆ. ಪಕ್ಕದವರನ್ನು ಎಬ್ಬಿಸಲು ಯತ್ನಿಸಿದ್ದಾರೆ. ಆದರೆ, ಪ್ರಯೋಜನವಾಗಿಲ್ಲ.

ಆಗ, ತಾವಿದ್ದ ಕಟ್ಟಡದ ಬಾಲ್ಕನಿ ಯಿಂದಲೇ ಕಳ್ಳರ ಮೇಲೆ ಕಲ್ಲು ಎಸೆಯಲು ಆರಂಭಿಸಿದ್ದಾರೆ. ಇದರಿಂದ ಗಲಿಬಿಲಿಗೊಂಡ ಕಳ್ಳರು, ತಮ್ಮ ಕೆಲಸ ಅಲ್ಲಿಗೇ ಬಿಟ್ಟು ಪರಾರಿಯಾಗಿದ್ದಾರೆ. ಇದರಿಂದ ಎಟಿಎಂನಲ್ಲಿದ್ದ 25.41 ಲಕ್ಷ ರೂ. ಕಳ್ಳರ ಪಾಲಾಗುವುದು ತಪ್ಪಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ