ಗಡಿಯಲ್ಲಿ ಪಾಕ್ ಹೊಸ ತಂತ್ರ ಬಯಲು, AK 47, 80ಕೆಜಿ ಮದ್ದುಗುಂಡು ಬೀಳಿಸಿದ ಡ್ರೋಣ್!

Team Udayavani, Sep 25, 2019, 11:49 AM IST

ಚಂಡೀಗಢ್: ಪಂಜಾಬ್ ನ ಟಾರನ್ ಟಾರನ್ ಜಿಲ್ಲೆಯ ಖಾಲ್ರಾ ಸಮೀಪದ ರಾಜೋಕೆ ಗ್ರಾಮದ ಬಳಿ ಪಾಕಿಸ್ತಾನ ಹಲವು ಡ್ರೋಣ್ ಮೂಲಕ ಎಕೆ 47, ಸೆಟಲೈಟ್ ಫೋನ್ ಹಾಗೂ ಹ್ಯಾಂಡ್ ಗ್ರೆನೇಡ್ಸ್ ಗಳನ್ನು ಬೀಳಿಸುತ್ತಿರುವ ಮಾಹಿತಿಯನ್ನು ಪಂಜಾಬ್ ಪೊಲೀಸರು ಬಹಿರಂಗಗೊಳಿಸಿದ್ದಾರೆ.

ಗಡಿಯಲ್ಲಿ ಹಲವು ಡ್ರೋಣ್ ಮೂಲಕ ಶಸ್ತ್ರಾಸ್ತ್ರಗಳನ್ನು ಎಸೆಯುತ್ತಿರುವ ಈ ಘಟನೆ ಬಗ್ಗೆ ತನಿಖೆ ನಡೆಸಬೇಕೆಂದು ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಮನವಿ ಮಾಡಿಕೊಂಡಿದ್ದಾರೆ.

ಪಂಜಾಬ್ ಪೊಲೀಸರು ರಾಜೋಕೆ ಗ್ರಾಮದಲ್ಲಿ ಐದು ಎಕೆ 47, ಸೆಟಲೈಟ್ ಫೋನ್, ಕೈ ಬಾಂಬ್ ಗಳನ್ನು ವಶಪಡಿಸಿಕೊಂಡಿರುವುದಾಗಿ ವರದಿ ತಿಳಿಸಿದೆ. ಉನ್ನತ ಮಾದರಿಯ ಡ್ರೋಣ್ ಗೆ ಜಿಪಿಎಸ್ ಬಳಸಿಕೊಂಡು ಪಾಕಿಸ್ತಾನ ಉಗ್ರರಿಗೆ ಶಸ್ತ್ರಾಸ್ತ್ರ ನೀಡುವ ತಂತ್ರಕ್ಕೆ ಮೊರೆ ಹೋಗಿದೆ ಎಂದು ವರದಿ ವಿವರಿಸಿದೆ.

ವಿಷಯ ಬಯಲಾಗಿದ್ದು ಹೇಗೆ?

ಪಂಜಾಬ್ ಪೊಲೀಸರು ಸೆಪ್ಟಂಬರ್ 22ರಂದು ಟಾರನ್ ಟಾರನ್ ಪ್ರದೇಶದಲ್ಲಿ ಖಾಕಿಸ್ತಾನ್ ಜಿಂದಾಬಾದ್ ಫೋರ್ಸ್(ಕೆಝಡ್ ಎಫ್) ನ ನಾಲ್ವರು ಉಗ್ರರನ್ನು ಬಂಧಿಸಿ ವಿಚಾರಣೆ ನಡೆಸಿದ ವೇಳೆ ಈ ಮಾಹಿತಿ ಬಾಯ್ಬಿಟ್ಟಿದ್ದರು. ಶಸ್ತ್ರಾಸ್ತ್ರಗಳನ್ನು ಎಸೆದ ಡ್ರೋಣ್ ಅನ್ನು ಸುಟ್ಟುಹಾಕಲು ಪ್ರಯತ್ನಿಸಿದ್ದರು, ಆದರೆ ಅದು ವಿಫಲವಾಗಿತ್ತು ಎಂಬುದು ವಿಚಾರಣೆ ವೇಳೆ ತಿಳಿಸಿದ್ದರು. ಇದೀಗ ಡ್ರೋಣ್ ಅನ್ನು ವಿಧಿವಿಜ್ಞಾನ ಪರೀಕ್ಷೆ ಕಳುಹಿಸಲಾಗಿದೆ. ಈ ಡ್ರೋಣ್ ರಾಡಾರ್ ಕಣ್ತಪ್ಪಿಸಿ ಕಾರ್ಯನಿರ್ವಹಿಸುತ್ತಿದೆ ಎಂಬುದನ್ನು ಪತ್ತೆ ಹಚ್ಚಬೇಕಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ