81 ವರ್ಷದ ಮುದುಕನಂತೆ ವೇಷ ಧರಿಸಿ ವಿಮಾನವೇರಲು ಬಂದ 32ರ ಯುವಕ

Team Udayavani, Sep 10, 2019, 10:13 AM IST

ಹೊಸದಿಲ್ಲಿ:  32ರ ಹರೆಯದ ಯುವಕನೋರ್ವ 81 ವರ್ಷದ ಮುದುಕನಂತೆ ವೇಷ ಧರಿಸಿ ನ್ಯೂಯಾರ್ಕ್‌ ನಗರಕ್ಕೆ ಪ್ರಯಾಣಿಸಲೆತ್ನಿಸಿ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ಘಟನೆ ಹೊಸದೆಹಲಿ ವಿಮಾನ ನಿಲ್ದಾಣದಲ್ಲಿ ನಡೆದಿದೆ.

ಜಯೇಶ್‌ ಪಟೇಲ್‌ ವಿಮಾನ ನಿಲ್ದಾಣ ಭಧ್ರತಾ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದವ. ಈತ 81 ವರ್ಷದ ಆರ್ಮಿಕ್‌ ಸಿಂಗ್‌ ನಂತೆ ವೇಷ ಧರಿಸಿ ವಿಮಾನ ನಿಲ್ದಾಣಕ್ಕೆ ಬಂದಿದ್ದ.

ವೃದ್ಧರ ರೀತಿ ಗಡ್ಡ- ಕೂದಲಿಗೆ ಬಿಳಿ ಬಣ್ಣ ಬಳಿದು, ತಲೆಗೆ ಮುಂಡಾಸು ಸುತ್ತಿ, ಅಶಕ್ತರಂತೆ ವ್ಹೀಲ್‌ ಚೇರ್‌ ನಲ್ಲಿ ಕುಳಿತುಕೊಂಡು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ. ನಕಲಿ ಪಾಸ್‌ ಪೋರ್ಟ್‌ ಬಳಸಿ ಅಮೇರಿಕಾದ ನ್ಯೂಯಾರ್ಕ್‌ ಗೆ ಹಾರಲೆತ್ನಿಸಿದ ಈತನನ್ನು ಅಧಿಕಾರಿಗಳು ತಮ್ಮ ವಶಕ್ಕೆ ಪಡೆದಿದ್ದಾರೆ.

ವ್ಹೀಲ್‌ ಚೇರ್‌ ನಲ್ಲಿ ಬಂದ ಆಸಾಮಿಯನ್ನು ಪರಿಶೀಲನೆಗಾಗಿ ನಿಲ್ಲುವಂತೆ ಅಧಿಕಾರಿಗಳು ಹೇಳಿದಾಗ ಆತ ನಿರಾಕರಿಸಿದ್ದ.  ಪಾಸ್‌ ಪೋರ್ಟ್‌ ಪ್ರಕಾರ ಆತನ ಹುಟ್ಟಿದ ದಿನಾಂಕ 1 ಫೆಬ್ರವರಿ 1938. ಆದರೆ ಆತನ ಚರ್ಮದಲ್ಲಿ ಯಾವುದೇ ಸುಕ್ಕು ಇರಲಿಲ್ಲ ಮತ್ತು ಧ್ವನಿ ಕೂಡಾ ವೃದ್ಧರಂತೆ ಇರಲಿಲ್ಲ. ಇದರಿಂದ ಅನುಮಾನಗೊಂಡು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ ಎಂದು ವಿಮಾನ ನಿಲ್ದಾಣ ಅಧಿಕಾರಿಗಳು ತಿಳಿಸಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ