ತೈಲ ಸೋರಿಕೆಯಿಂದ ಕಪ್ಪಾದ ಸುಂದರ ಗೋವಾ ಬೀಚ್ : ಓಡಾಡುವುದೇ ಕಷ್ಟಕರ
Team Udayavani, May 18, 2022, 8:52 PM IST
ಪಣಜಿ: ಸುಂದರವಾದ ಮರಳನ್ನು ಹೊಂದಿದ ಬೀಚ್‍ನಿಂದಾಗಿ ಪ್ರಸಿದ್ಧಿ ಪಡೆದಿದ್ದ ಬಾಣಾವಲಿಯಿಂದ ಕೆಳಶಿ ವರೆಗಿನ ಬೀಚ್ ತೈಲ ಸೋರಿಕೆಯಿಂದಾಗಿ ಕಪ್ಪಾಗಿದೆ. ಇದರಿಂದಾಗಿ ಈ ಬೀಚ್‍ಗಳಲ್ಲಿ ಸದ್ಯ ಓಡಾಡುವುದೇ ಕಷ್ಟಕರ ಎಂಬಂತಾಗಿದೆ. ಇದರಿಂದಾಗಿ ಈ ಬೀಚ್‍ಗಳಿಗೆ ಪ್ರವಾಸಿಗರು ತೆರಳಲು ಹಿಂದೇಟು ಹಾಕುತ್ತಿದ್ದಾರೆ.
ಆಳ ಸಮುದ್ರದಲ್ಲಿ ಹಡಗು ಮತ್ತು ಬೋಟ್‍ಗಳಿಂದಾಗಿ ಭಾರಿ ಪ್ರಮಾಣದಲ್ಲಿ ತೈಲ ಸೋರಿಕೆಯಾಗುತ್ತಿರುವುದು ಇದರಿಂದ ಸ್ಪಷ್ಟವಾದಂತಾಗಿದೆ. ಇದರಿಂದಾಗಿ ಸಮುದ್ರದಲ್ಲಿರುವ ಜಲಚರಗಳಿಗೆ ಹೆಚ್ಚಿನ ತೊಂದರೆಯುಂಟಾಗಲಿದೆ ಎಂದು ಪರಿಸರ ಪ್ರೇಮಿಗಳು ಅಭಿಪ್ರಾಯಪಟ್ಟಿದ್ದಾರೆ.
ಸದ್ಯ ಪ್ರವಾಸೀ ಸೀಜನ್ ಆಗಿದ್ದರೂ ಕೂಡ ಈ ಬೀಚ್‍ಗಳಲ್ಲಿ ಹಡಗುಗಳ ತೈಲ ಸೋರಿಕೆಯ ಪರಿಣಾಮ ಪ್ರವಾಸಿಗರ ಮೇಲೆ ಬೀಳುವಂತಾಗಿದೆ.
ಇದನ್ನೂ ಓದಿ : ಶಿವಲಿಂಗದ ಕುರಿತು ಅವಹೇಳನಕಾರಿ ಟ್ವೀಟ್ : ಎಐಎಂಐಎಂ ನಾಯಕ ಅರೆಸ್ಟ್
ಈ ಕುರಿತು ಗೋವಾ ಶಾಕ್ ಮಾಲೀಕರ ಸಂಘದ ಅಧ್ಯಕ್ಷ ಕ್ರೂಜ್ ಕಾರ್ದೋಜ್ ಪ್ರತಿಕ್ರಿಯೆ ನೀಡಿ, ಕಳೆದ ಕೆಲವು ವರ್ಷಗಳಿಂದ ಕರಾವಳಿಗೆ ಕರಾವಳಿಗೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದ್ದು ತೈಲಸೋರಿಕೆ ಘಟನೆಯು ಪ್ರವಾಸೋದ್ಯಮದ ಮೇಲೆ ವ್ಯತಿರಿಕ್ತ ಪರಿಣಾಮ ಬೀಳಲಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಜುಲೈ 8ರವರೆಗೂ ಮುಂಬೈನಲ್ಲಿ ಧಾರಾಕಾರ ಮಳೆ, ತಗ್ಗು ಪ್ರದೇಶ ಜಲಾವೃತ; NDRF ರವಾನೆ
ಗೋವಾ : ರೈಲ್ವೆ ಹಳಿ ಮೇಲೆ ಮರ ಬಿದ್ದು ವಾಸ್ಕೊ-ಕುಳೆ ರೈಲು ಸಂಚಾರ ಹಲವು ಗಂಟೆಗಳ ಕಾಲ ಸ್ಥಗಿತ
ಭಾರತದ ಸಂವಿಧಾನ ತುಂಬಾ ಸುಂದರ…ಆದರೆ…ಕೇರಳ ಸಚಿವ ಸಾಜಿ ಹೇಳಿದ್ದೇನು?
ಚೆನ್ನೈ: ಒಟಿಪಿಗಾಗಿ ಜಗಳ- ಪತ್ನಿ, ಮಕ್ಕಳ ಎದುರೇ ಟೆಕ್ಕಿಯನ್ನು ಕೊಂದ ಓಲಾ ಚಾಲಕ
ಪ್ರತಿಕೂಲ ಹವಾಮಾನ; ಅಮರನಾಥ ಯಾತ್ರೆ ತಾತ್ಕಾಲಿಕ ಸ್ಥಗಿತ, 3,000 ಯಾತ್ರಾರ್ಥಿಗಳು ಅತಂತ್ರ