ಮಹಾಘಟಬಂಧನ್‌ಗೆ ಗೆಲುವು, ರಾಹುಲ್‌ರದ್ದು ಪ್ರಧಾನ ಪಾತ್ರ; ತೇಜಸ್ವಿ ಯಾದವ್‌

ರಾಹುಲ್‌ ಗಾಂಧಿ ಪ್ರಬುದ್ಧ ನಾಯಕ

Team Udayavani, May 16, 2019, 4:52 PM IST

ಪಾಟ್ನಾ: ವಿವಿಧ ಪಕ್ಷಗಳ ಮೈತ್ರಿಕೂಟವಾಗಿರುವ ಮಹಾಘಟಬಂಧನ್‌ ಲೋಕಸಭಾ ಚುನಾವಣೆಯಲ್ಲಿ ಬಹುಮತ ಪಡೆಯಲಿದ್ದು, ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಪ್ರಧಾನ ಪಾತ್ರ ವಹಿಸಲಿದ್ದಾರೆ ಎಂದು ಆರ್‌ಜೆಡಿ ಯುವನಾಯಕ ತೇಜಸ್ವಿಯಾದವ್‌ ಗುರುವಾರ ಹೇಳಿಕೆ ನೀಡಿದ್ದಾರೆ.

ಬಿಜೆಪಿ ತನ್ನ ಆಶ್ವಾಸನೆಗಳನ್ನು ಈಡೇರಿಸುವಲ್ಲಿ ವಿಫ‌ಲವಾಗಿದೆ. ಅಚ್ಛೇದಿನ್‌, ಕಪ್ಪು ಹಣ ವಾಪಾಸಾತಿ, ಬೇಟಿ ಬಚಾವೊ ಬೇಟಿ ಪಡಾವೊ ದಲ್ಲೂ ಯಶಸ್ವಿಯಾಗಿಲ್ಲ ಎಂದರು.

ಬಿಹಾರದಲ್ಲಿ ಆರ್‌ಜೆಡಿ,ಕಾಂಗ್ರೆಸ್‌, ಆರ್‌ಎಲ್‌ಎಸ್‌ಪಿ, ಹಿಂದುಸ್ಥಾನ್‌ ಅವಾಮ್‌ ಮೋರ್ಚಾ, ವೀಕಾಸ್‌ ಇನ್‌ಸಾನ್‌ ಪಕ್ಷ ದ ಮಹಾಘಟಬಂಧನ್‌ ಮೈತ್ರಿಕೂಟ ಭರ್ಜರಿ ಗೆಲುವು ಸಾಧಿಸಲಿದೆ ಎಂದರು.

ದೇಶದಲ್ಲಿ ಭಾರೀ ಪ್ರಮಾಣದ ಆಡಳಿತ ವಿರೋಧಿ ಅಲೆ ಇದ್ದು, ಪ್ರತಿ ರಾಜ್ಯದಲ್ಲೂ ಇದು ಲೆಕ್ಕಕ್ಕೆ ಬರಲಿದೆ ಎಂದರು.

ರಾಹುಲ್‌ ಗಾಂಧಿ ಅವರು ತನ್ನ ನಾಯಕತ್ವದಲ್ಲಿ ಪ್ರಬುದ್ಧತೆಯನ್ನು ತೋರಿದ್ದಾರೆ.ಅವರು ಮುಂದಿನ ಸರ್ಕಾರದಲ್ಲಿ ಪ್ರಧಾನ ಪಾತ್ರ ವಹಿಸುತ್ತಾರೆ ಎಂದು ನನಗನ್ನಿಸುತ್ತಿದೆ ಎಂದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ