ತಾಯಿಯ ಪ್ರಿಯಕರನೊಂದಿಗೆ ಪುತ್ರಿಯ ವಿವಾಹ: ಯುವತಿ ಆತ್ಮಹತ್ಯೆ
Team Udayavani, Mar 14, 2020, 9:00 PM IST
ಹೈದರಾಬಾದ್: ವಿವಾಹೇತರ ಸಂಬಂಧವನ್ನು ಮುಂದುವರಿಸುವ ದುರುದ್ದೇಶ ಹೊಂದಿದ್ದ ತಾಯಿ, ಸ್ವಂತ ಮಗಳ ವಿವಾಹವನ್ನು ತನ್ನ ಪ್ರಿಯತಮನೊಂದಿಗೆ ನೆರವೇರಿಸಿದ್ದು, ಇದರಿಂದ ನೊಂದ ಪುತ್ರಿ ಆತ್ಮಹತ್ಯೆಗೆ ಶರಣಾದ ಘಟನೆ ಹೈದರಾಬಾದ್ನಲ್ಲಿ ನಡೆದಿದೆ.
ಈ ಕುರಿತು ಮೃತಳ 17 ವರ್ಷದ ತಂಗಿ, ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ತನ್ನ ತಾಯಿ ಅನಿತಾ ಹಾಗೂ ಆಕೆಯ ಪ್ರಿಯಕರ ಪ್ರೇಮ್ ನವೀನ್ ಕುಮಾರ್ ವಿರುದ್ಧ ದೂರು ದಾಖಲಿಸಿದ್ದಾರೆ. ತಂದೆಯಿಂದ ದೂರಾದ ಬಳಿಕ, ಒಂದು ವರ್ಷದಿಂದೀಚೆಗೆ ಅನಿತಾ, ಪ್ರೇಮ್ ಜತೆ ಸಂಬಂಧ ಹೊಂದಿದ್ದಳು. ಆತ ಆಗಾಗ್ಗೇ ನಮ್ಮ ಮನೆಗೆ ಬಂದು ಹೋಗುತ್ತಿದ್ದ. ಈ ನಡುವೆ ತಮ್ಮ ಅಕ್ರಮ ಸಂಬಂಧ ಮುಂದುವರಿಸುವ ದುರುದ್ದೇಶದಿಂದ ತಾಯಿ ಅನಿತಾ, ನನ್ನ ಅಕ್ಕನ ವಿವಾಹವನ್ನು ಪ್ರೇಮ್ ಜೊತೆ ಮಾಡಿಸಿದ್ದಳು ಎಂದು ಯುವತಿ ದೂರಿನಲ್ಲಿ ಉಲ್ಲೇಖೀಸಿದ್ದಾರೆ.
“ಅಕ್ಕನಿಗೆ ಈ ವಿವಾಹ ಸ್ವಲ್ಪವೂ ಇಷ್ಟ ಇರಲಿಲ್ಲ. ಇತ್ತ ವಿವಾಹದ ನಂತರವೂ ಪ್ರೇಮ್ ನಮ್ಮ ತಾಯಿ ಜೊತೆಗಿನ ಸಂಬಂಧ ಮುಂದುವರಿಸಿದ್ದ. ಇದನ್ನು ಅಕ್ಕ ಆಕ್ಷೇಪಿಸಿದಾಗ, ಪತಿಯಿಂದ ಬೇರಾದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಾಯಿ ಅನಿತಾ ಬೆದರಿಕೆ ಹಾಕುತ್ತಿದ್ದಳು. ಇದರಿಂದ ಮನನೊಂದ ಅಕ್ಕ ನೇಣಿಗೆ ಶರಣಾಗಿದ್ದಾಳೆ’ ಎಂದು ಯುವತಿ ಆರೋಪಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹಳದಿ ಶಾಸ್ತ್ರದ ವೇಳೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿ ಮಧ್ಯೆ ಕೊನೆಯುಸಿರೆಳೆದ ವರ
ತಂಗಿ ಮದುವೆಗೆ ಟಿವಿ ಗಿಫ್ಟ್ ಕೊಟ್ಟದ್ದಕ್ಕೆ ಅಸಮಾಧಾನ: ಪತಿಯನ್ನು ಥಳಿಸಿ ಕೊಲ್ಲಿಸಿದ ಪತ್ನಿ
West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ
Amit Shah: 2024ರ ಚುನಾವಣೆಯಲ್ಲಿ ಎನ್ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ
Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ