ಮೋದಿ ಪಕೋಡಾ ಭಾರಿ ಜನಪ್ರಿಯ!

ಆಗ್ರಾದಲ್ಲಿ ಮೂವರು ಮಧ್ಯವಯಸ್ಕರ ಪಕೋಡಾ ಅಂಗಡಿ

Team Udayavani, Jul 19, 2019, 5:00 AM IST

ಆಗ್ರಾ: ಹಿಂದೊಮ್ಮೆ ಪ್ರಧಾನಿ ನರೇಂದ್ರ ಮೋದಿ ಪಕೋಡಾ ಮಾರಿ ಕೂಡ ಬದುಕು ಸಾಗಿಸಬಹುದು ಎಂಬರ್ಥದ ಹೇಳಿಕೆ ನೀಡಿದ್ದನ್ನು ಜನರು ಕಟುವಾಗಿ ವಿರೋಧಿಸಿದ್ದರು. ಆದರೆ ಅವರ ಹೇಳಿಕೆಯನ್ನೇ ಸ್ಫೂರ್ತಿಯಾಗಿ ತೆಗೆದುಕೊಂಡ ಉತ್ತರ ಪ್ರದೇಶದ ಆಗ್ರಾದ ಮೂವರು ಮಧ್ಯವಯಸ್ಕರು ‘ಮೋದಿ ಪಕೋಡಾ ಭಂಡಾರ’ ಎಂಬ ಅಂಗಡಿಯನ್ನು ಶುರು ಮಾಡಿದ್ದಾರೆ.

ಕೇವಲ 5 ಸಾವಿರ ರೂಪಾಯಿ ಬಂಡವಾಳ ಹಾಕಿ ಶುರುಮಾಡಿದ ಅವರ ಪಕೋಡಾ ಅಂಗಡಿ ನಾಲ್ಕೇ ದಿನದಲ್ಲಿ ಭಾರೀ ಜನಪ್ರಿಯ ಆಗಿದೆ. ನಮ್ಮ ಪಕೋಡಾಗಳನ್ನು ಇಷ್ಟಪಟ್ಟರೆ ಮುಂದಿನ ಕೆಲವೇ ದಿನಗಳಲ್ಲಿ ನಮ್ಮ ಬಂಡವಾಳ ವಾಪಸಾಗುತ್ತದೆ ಎಂದು ಶ್ರೀಗೋಪಾಲ ಅಗರ್‌ವಾಲ್ ಹೇಳುತ್ತಾರೆ. ಏನೂ ಕೆಲಸ ಇಲ್ಲದೇ ಕುಳಿತುಕೊಳ್ಳುವುದಕ್ಕಿಂತ ಪಕೋಡಾ ಮಾರಿ ದಿನಕ್ಕೆ 200 ರೂ. ಗಳಿಸುವುದು ಒಳ್ಳೆಯದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. ಆದರೆ ನಾವು ದಿನಕ್ಕೆ 200 ರೂ.ಗಿಂತ ಹೆಚ್ಚು ಗಳಿಕೆ ಮಾಡುತ್ತಿದ್ದೇವೆ ಎಂದು ಅಂಗಡಿ ಸ್ಥಾಪಕರಲ್ಲಿ ಒಬ್ಬರಾದ ಅಶೋಕ್‌ ಕುಮಾರ್‌ ಹೇಳಿದ್ದಾರೆ.

ದಿನಗೂಲಿ ಮಾಡುತ್ತಿದ್ದ ಇವರು, ಕೆಲಸ ಇಲ್ಲದಂಥ ದಿನಗಳಲ್ಲಿ ಇಂಥದ್ದೊಂದು ಯೋಚನೆ ಮಾಡಿ ಅಂಗಡಿ ಶುರು ಮಾಡಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ