ಟೆಲಿಕಾಂ ಕಂಪೆನಿಗಳಿಗೆ ಪ್ಯಾಕೇಜ್‌?

Team Udayavani, Nov 16, 2019, 5:26 AM IST

ಹೊಸದಿಲ್ಲಿ: ದೂರ ಸಂಪರ್ಕ ಕ್ಷೇತ್ರದ ಕಂಪೆನಿಗಳಿಗೆ ಉತ್ತೇಜನ ಪ್ಯಾಕೆಜ್‌ ನೀಡಲು ಕೇಂದ್ರ ಸರಕಾರ ಮುಂದಾಗಿದೆ. ಅದಕ್ಕೆ ಪೂರಕವಾಗಿ ಮೊಬೈಲ್‌ ಕರೆ, ಇಂಟರ್‌ನೆಟ್‌ಗಳಿಗೆ ಕನಿಷ್ಠ ದರ ನಿಗದಿ ಮಾಡುವ ಸಾಧ್ಯತೆ ಇದೆ. ಸರಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌, ಎಂಟಿಎನ್‌ಎಲ್‌ ಸೇರಿಕೊಂಡಂತೆ ಎಲ್ಲ ದೂರಸಂಪರ್ಕ ಕಂಪೆನಿಗಳು ದೂರಸಂಪರ್ಕ ಇಲಾಖೆಗೆ ಹೊಂದಾಣಿಕೆ ಮಾಡಲಾಗಿರುವ ಒಟ್ಟು ಆದಾಯ (ಎಜಿಆರ್‌) ಪಾವತಿ ಮಾಡಬೇಕು ಎಂದು ಸುಪ್ರೀಂ ಕೋರ್ಟ್‌ ತೀರ್ಪು ಬೆಳವಣಿಗೆಗೆ ಕಾರಣ. ಕಾರ್ಯದರ್ಶಿಗಳ ಸಮಿತಿ (ಸಿಒಎಸ್‌) ಮೊಬೈಲ್‌ ಕರೆಗಳಿಗೆ, ಇಂಟರ್‌ನೆಟ್‌ಗೆ ಮೂಲ ದರ ನಿಗದಿ ಮಾಡಿದರೆ ಸಮಸ್ಯೆಗೆ ಪರಿಹಾರ ಕಾಣಬಹುದು ಎನ್ನುವುದು ಸಲಹೆಯಾಗಿದೆ.

ತೀರ್ಪಿನ ಬಳಿಕ ಏರ್‌ಟೆಲ್‌, ವೊಡಾಫೋನ್‌ಗೆ ಎರಡನೇ ತ್ತೈಮಾಸಿಕದಲ್ಲಿ 70 ಸಾವಿರ ಕೋಟಿ ರೂ. ನಷ್ಟವಾಗಿದೆ ಎಂದು ಹೇಳಿಕೊಂಡಿವೆ. ಸಿಒಎಸ್‌ ಸಿದ್ಧಪಡಿಸಿದ ಸಲಹಾ ಯೋಜನೆಗೆ ಹಲವು ಹಂತಗಳಿಂದ ಪ್ರತಿಕ್ರಿಯೆಗಳನ್ನು ಬಯಸಿದೆ.

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ