ಹೆಣ್ಣು ಮಗು ಮಾರಿ ಮೊಬೈಲ್‌ ಖರೀದಿ

Team Udayavani, Nov 23, 2019, 5:38 AM IST

ತಿರುನೆಲ್ವೆಲಿ: ಹೆಣ್ಣು ಮಗು ಜನಿಸಿದ್ದಕ್ಕೆ ಬೇಸರಗೊಂಡ ಪಾಪಿ ತಂದೆ, ಪತ್ನಿಗೆ ಗೊತ್ತಿಲ್ಲದಂತೆ ಮಗು ಮಾರಾಟ ಮಾಡಿ ಬಂಗಾರ ,ಮೊಬೈಲ್‌ ಖರೀದಿಸಿದ್ದಾನೆ.

ತಮಿಳುನಾಡಿನ ತಿರುನೆಲ್ವೇಲಿ ಜಿಲ್ಲೆಯ ಯೆಸೈರುದ್ಯಾರಾಜ್‌ ಹಾಗೂ ಪುಷ್ಪಲತಾ ದಂಪತಿಗೆ ಈಗಾಗಲೇ ಇಬ್ಬರು ಪುತ್ರಿಯರು ಹಾಗೂ ಪುತ್ರನಿದ್ದಾನೆ.

ಇತ್ತೀಚೆಗೆ ಈ ದಂಪತಿಗೆ ಗಂಡು, ಹೆಣ್ಣು ಅವಳಿ ಮಗು ಜನಿಸಿತ್ತು. ಇಬ್ಬರು ಬಾಲಕಿಯರು ಇದ್ದರಿಂದ ಅಸಮಾಧಾನಗೊಂಡ ನೌಕರ ಪತಿ, ಪತ್ನಿಗೆ ತಿಳಿಯದಂತೆ ಹೆಣ್ಣು ಮಗುವನ್ನು 1.80 ಲಕ್ಷ ರೂ.ಗೆ ಮಾರಾಟ ಮಾಡಿದ್ದಾನೆ.

ಈ ಹಣದಲ್ಲಿ ತನಗೆ ಮೊಬೈಲ್‌ ಹಾಗೂ ತನ್ನ ಗಂಡು ಮಗುವಿಗೆ ಚಿನ್ನ ಖರೀದಿಸಿದ್ದಾನೆ. ಇದೀಗ ಈತ ಪೊಲೀಸರ ಅತಿಥಿಯಾಗಿದ್ದಾನೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ