ತಲಾಖ್‌ ಕಾಯ್ದೆ ವಿರುದ್ಧ ಅರ್ಜಿ

Team Udayavani, Oct 22, 2019, 12:25 AM IST

ಹೊಸದಿಲ್ಲಿ: ಏಕಕಾಲಕ್ಕೆ ತ್ರಿವಳಿ ತಲಾಖ್‌ ನೀಡುವುದು ಕ್ರಿಮಿನಲ್‌ ಅಪರಾಧ ಎಂದು ಪರಿಗಣಿಸಲಾದ ಕಾನೂನು ವಿರುದ್ಧ ಸುಪ್ರೀಂಕೋರ್ಟ್‌ನಲ್ಲಿ ಸೋಮವಾರ ಅರ್ಜಿ ಸಲ್ಲಿಕೆಯಾಗಿದೆ.

ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಅರ್ಜಿಯಲ್ಲಿ ಕಾನೂನಿಗೆ ಸಾಂವಿಧಾನಿಕವಾಗಿ ಯಾವ ಮಾನ್ಯತೆ ಇದೆ ಎಂದು ಪ್ರಶ್ನೆ ಮಾಡಲಾಗಿದೆ. ಅದು ಸಂವಿಧಾನದ 14, 15, 20 ಮತ್ತು 21ನೇ ವಿಧಿಯನ್ನು ಉಲ್ಲಂಘಿಸುತ್ತದೆ.

ಇಂಥ ಕ್ರಮ ಮುಸ್ಲಿಂ ಸಮುದಾಯದ ವೈಯಕ್ತಿಕ ಕಾನೂನುಗಳಲ್ಲಿ ಸರಕಾರ ಹಸ್ತಕ್ಷೇಪ ಮಾಡಿದಂತೆ ಆಗುತ್ತದೆ ಎಂದು ಅರ್ಜಿಯಲ್ಲಿ ಅರಿಕೆ ಮಾಡಲಾಗಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ