ಪ್ರೀತಿಗೆ ಲಾಕ್ ಡೌನ್ ಗೊತ್ತಿಲ್ಲ: ಪ್ರೇಮಿಯನ್ನು ಸೇರಲು 60 ಕಿ.ಮೀ. ನಡೆದ ಪ್ರಿಯತಮೆ!
Team Udayavani, Apr 11, 2020, 7:36 AM IST
ಹುಡುಗಿಯೊಬ್ಬಳು ಬರೋಬ್ಬರಿ 60 ಕಿ.ಮೀ ನಡೆದು ತಾನು ಪ್ರೀತಿಸಿದ ಹುಡುಗನನ್ನು ಮದುವೆಯಾಗಿದ್ದಾಳೆ. ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯಯ ಹನುಮಾನ್ ಜಂಕ್ಷನ್ ನಿವಾಸಿ ಚಿತ್ಕಲಾ ಭವಾನಿ (19) ನಾಲ್ಕು ವರ್ಷಗಳಿಂದ ಸಾಯಿ ಪೊನ್ನಯ್ಯ ಎಂಬ ವ್ಯಕ್ತಿಯನ್ನು ಪ್ರೀತಿಸುತ್ತಿದ್ದಳು.
ಅವರ ಮದುವೆಗೆ ಮನೆಯವರಿಂದ ವಿರೋಧ ವ್ಯಕ್ತವಾಗಿತ್ತು. ಅದಾದ ಬಳಿಕ ಲಾಕ್ ಡೌನ್ ಜಾರಿಯಾಗಿದ್ದು, ಇಬ್ಬರ ಓಡಾಟಕ್ಕೂ ಬ್ರೇಕ್ ಬಿದ್ದಿತ್ತು. ಭಯ ಬಿದ್ದ ಯುವತಿ ಪ್ರಿಯಕರನ ಮನೆಗೆ ನಡೆದುಕೊಂಡೇ ಹೋಗಿ ಆತನ ಕೈಹಿಡಿಯುವಲ್ಲಿ ಯಶಸ್ವಿಯಾಗಿದ್ದಾಳೆ
ಲಾಕ್ ಡೌನ್ ಇರುವಾಗಲೇ ಮದುವೆ
ಲಾಕ್ ಡೌನ್ ಹೊರತಾಗಿಯೂ ಮುಂಬಯಿನ 28 ವರ್ಷ ವಯಸ್ಸಿನ ವ್ಯಕ್ತಿ ಮೊದಲೇ ನಿಶ್ಚಯವಾದ ದಿನದಂದೇ ಮದುವೆಯಾಗಬೇಕು ಎಂದು ಗುರುವಾರ ಮದುವೆಯಾಗಿದ್ದಾರೆ. ಅವರ ಮದುವೆಗೆ ಬಂಧುಗಳು, ಸ್ನೇಹಿತರ ಅನು ಪಸ್ಥಿತಿಯಲ್ಲಿ ಸರಳವಾಗಿ ಮದುವೆಯಾಗಿದ್ದಾರೆ.
ರಿಯಲ್ ಎಸ್ಟೇಟ್ ಉದ್ಯಮಿ ರಾಮ್ಕಿಶನ್ ಚವಾಣ್ ಮತ್ತು ರೀಮಾ ಸಿಂಗ್ 5 ವರ್ಷಗಳಿಂದ ಪ್ರೀತಿಸುತ್ತಿದ್ದರು. ಲಾಕ್ಡೌನ್ ಇರುವುದರಿಂದ ಮದುವೆಯನ್ನು ಮುಂದೂಡಲಿಲ್ಲ. ಸ್ಥಳೀಯ ಆಡಳಿತದ ಅನುಮತಿ ತೆಗೆದುಕೊಂಡು ದೇವಸ್ಥಾನದಲ್ಲಿ ಮದುವೆಯಾದೆವು ಎಂದು ರಾಮ್ ಕಿಶನ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು
Odisha: ಎನ್ಕೌಂಟರ್; ಇಬ್ಬರು ನಕ್ಸಲರ ಹತ್ಯೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್