ಆಧಾರ್‌ ವಿಳಾಸ ಬದಲಾವಣೆ ಸುಲಭ

Team Udayavani, Nov 15, 2019, 6:15 AM IST

ಹೊಸದಿಲ್ಲಿ: ಆಧಾರ್‌ ಕಾರ್ಡ್‌ನಲ್ಲಿನ ತಮ್ಮ ವಿಳಾಸವನ್ನು ಬದಲಾಯಿಸಲು ಇಚ್ಚಿಸುವ ನಾಗರಿಕರು ಹೊಸ ವಿಳಾಸದ ಬಗ್ಗೆ ಒಂದು ಸ್ವಯಂ ದೃಢೀಕರಣ ಪತ್ರವೊಂದನ್ನು ನೀಡಿ ವಿಳಾಸವನ್ನು ಬದಲಾವಣೆ ಮಾಡಿಕೊಳ್ಳಬಹುದು ಎಂಬ ಮಹತ್ವದ ಪ್ರಕಟನೆಯನ್ನು ಕೇಂದ್ರ ಸರಕಾರ ಹೊರಡಿಸಿದೆ. ಇದಕ್ಕಾಗಿ ಅಕ್ರಮ ಹಣ ವರ್ಗಾವಣೆ ನಿಯಮಗಳಲ್ಲೂ ತಿದ್ದುಪಡಿ ತರಲಾಗಿದೆ ಎಂದು ಕೇಂದ್ರ ಸರಕಾರ ತಿಳಿಸಿದೆ.

ಒಂದು ಊರಿನಿಂದ ಮತ್ತೂಂದು ಊರಿಗೆ ಬರುವ ಜನಸಾಮಾನ್ಯರಿಗೆ ಹೊಸ ಬ್ಯಾಂಕ್‌ ಖಾತೆಗಳನ್ನು ತೆರೆಯಲು ಅಥವಾ ಯಾವುದೇ ಸವಲತ್ತುಗಳನ್ನು ಪಡೆಯುವುದನ್ನು ಸುಲಭಗೊಳಿಸಲು ಈ ಅವಕಾಶ ಮಾಡಿಕೊಡಲಾಗಿದೆ ಎಂದು ಹೇಳಲಾಗಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ