ನಗದು ವಹಿವಾಟಿಗೆ ಪ್ಯಾನ್ ಬದಲು ಆಧಾರ್
Team Udayavani, Jul 7, 2019, 5:00 AM IST
ನವದೆಹಲಿ: ಬ್ಯಾಂಕ್ಗಳಲ್ಲಿ 50 ಸಾವಿರ ರೂ.ಗಳಿಗಿಂತ ಹೆಚ್ಚು ನಗದು ವಹಿವಾಟು ನಡೆಸುವುದಿದ್ದರೆ ಪ್ಯಾನ್ ಬದಲು ಆಧಾರ್ ಸಂಖ್ಯೆ ಬಳಕೆ ಮಾಡಬಹುದು ಎಂದು ಕಂದಾಯ ಕಾರ್ಯದರ್ಶಿ ಅಜಯ ಭೂಷಣ್ ಪಾಂಡೆ ಹೇಳಿದ್ದಾರೆ. ಬ್ಯಾಂಕ್ಗಳು ಮತ್ತು ಇತರ ಹಣಕಾಸು ಸಂಸ್ಥೆಗಳು ಆಧಾರ್ ಸ್ವೀಕಾರದ ಬಗ್ಗೆ ಸೂಕ್ತ ಬದಲಾವಣೆಗಳನ್ನು ಮಾಡಿಕೊಳ್ಳಲಿವೆ. ಸದ್ಯ 22 ಕೋಟಿ ಮಂದಿ ಪ್ಯಾನ್ ಹೊಂದಿದ್ದು, ಅವುಗಳನ್ನು ಆಧಾರ್ಗೆ ಲಿಂಕ್ ಮಾಡಲಾಗಿದೆ. ಆದರೆ ಆಧಾರ್ ಹೊಂದಿ ರುವವರ ಸಂಖ್ಯೆ 120 ಕೋಟಿ ಇದೆ.
ಪ್ಯಾನ್ ಹೊಂದಬೇಕು ಎಂದಾದರೆ ಮೊದಲು ಆಧಾರ್ ಹೊಂದಬೇಕು. ವಿತ್ತ ವ್ಯವಹಾರಗಳಲ್ಲಿ ಪ್ಯಾನ್ ಬದಲಿಗೆ ಆಧಾರ್ ಬಳಕೆ ಮಾಡುವುದರ ಮೂಲಕ ಅದನ್ನು ಹಂತ, ಹಂತವಾಗಿ ಹಿಂಪಡೆಯಲಾಗುತ್ತದೆಯೇ ಎಂಬುದಕ್ಕೆ ಉತ್ತರಿ ಸಿದ ಪಾಂಡೆ, ಅಂಥ ಬೆಳವಣಿಗೆ ಸಾಧ್ಯವಿಲ್ಲ ಎಂದಿದ್ದಾರೆ. ಪ್ಯಾನ್ ಮತ್ತು ಆಧಾರ್ ಲಿಂಕ್ ಆಗಿಯೇ ಇರಬೇಕಾಗುತ್ತದೆ ಎಂದಿದ್ದಾರೆ. ಬಜೆಟ್ ಭಾಷಣ ದಲ್ಲಿ ಶುಕ್ರ ವಾರ ರಿಟರ್ನ್ಸ್ ಸಲ್ಲಿಕೆ ಮಾಡಲು ಪ್ಯಾನ್ ಇಲ್ಲದವರು, ಆಧಾರ್ ಅನ್ನು ಬಳಕೆ ಮಾಡಲು ಅವಕಾಶ ನೀಡಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು
Lok Sabha 1 Phase: ನಿತಿನ್ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…
Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ