ಕುಮಾರ್‌, ಕೇಜ್ರಿವಾಲ್‌ ಮತ್ತೆ ಒಂದು; ಅಮಾನತುಲ್ಲಾ ಖಾನ್‌ ಅಮಾನತು

Team Udayavani, May 3, 2017, 3:21 PM IST

ಹೊಸದಿಲ್ಲಿ : ಎಲ್ಲ ಊಹಾಪೋಹಗಳಿಗೆ ಅಂತ್ಯ ಹೇಳುವ ರೀತಿಯಲ್ಲಿ ಕುಮಾರ್‌ ವಿಶ್ವಾಸ್‌ ಮತ್ತು ಅರವಿಂದ ಕೇಜ್ರಿವಾಲ್‌ ಅವರು ಇಂದಿಲ್ಲಿ  ನಡೆದ ಆಮ್‌ ಆದ್ಮಿ ಪಕ್ಷದ ರಾಜಕೀಯ ವ್ಯವಹಾರಗಳ ಸಮಿತಿಯ ಸಭೆಯ ಬಳಿಕ ತಮ್ಮೆಲ್ಲ ಭಿನ್ನಮತಗಳನ್ನು ಬದಿಗಿರಿಸಿ ಮತ್ತೆ ಒಂದಾಗಿದ್ದಾರೆ. 

ಇದೇ ವೇಳೆ ಆಪ್‌ ಶಾಸಕ ಅಮಾನತುಲ್ಲಾ ಖಾನ್‌ ಅವರನ್ನು ಪಕ್ಷದಿಂದ ಅಮಾನತು ಮಾಡಲಾಗಿದೆ. ಮಾತ್ರವಲ್ಲ ಕುಮಾರ್‌ ವಿಶ್ವಾಸ್‌ ವಿರುದ್ಧ  ಆತ ಮಾಡಿರುವ ಹೇಳಿಕೆಗಳು ಹಾಗೂ ಆತನ ವಿರುದ್ದದ ಆರೋಪಗಳ ಬಗ್ಗೆ ತನಿಖೆ ನಡೆಸಲು ಸಮಿತಿಯೊಂದನ್ನು ರೂಪಿಸಲಾಗಿದೆ.

ರಾಜಸ್ಥಾನದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗಳಿಗಾಗಿ ಕುಮಾರ್‌ ವಿಶ್ವಾಸ್‌ ಅವರಿಗೆ ರಾಜಸ್ಥಾನದ ಹೊಣೆಗಾರಿಕೆಗಳನ್ನು ವಹಿಸಿಕೊಡಲಾಗಿದೆ.

ಈ ಎಲ್ಲ ನಿರ್ಧಾರಗಳನ್ನು ಆಪ್‌ನ ಪಿಎಸಿ ಸಭೆಯಲ್ಲಿ ಕೈಗೊಳ್ಳಲಾಗಿದೆ. ಪಕ್ಷದೊಳಗಿನ ಜಗಳ, ಬಿಕ್ಕಟ್ಟು ಇತ್ಯಾದಿಗಳನ್ನು ಕೊನೆಗೊಳಿಸುವ ಕೆಲವೊಂದು ಮುಖ್ಯ ನಿರ್ಧಾರಗಳನ್ನು ಪಿಎಸಿ ಸಭೆಯಲ್ಲಿ ಕೈಗೊಳ್ಳಲಾಗಿದ್ದು ಪಕ್ಷದೊಳಗಿನ ಆತಂರಿಕ ಸಂರಚನೆಗೆ ಬದಲಾವಣೆಗಳನ್ನು ತರಲಾಗಿದೆ. 

ಕುಮಾರ್‌ ವಿಶ್ವಾಸ್‌ ಅವರಿಂದು ಪಕ್ಷದ ಹಿರಿಯ ನಾಯಕರು ತನ್ನ ವಿರುದ್ಧ ಷಡ್ಯಂತ್ರ ರೂಪಿಸುತ್ತಿದ್ದಾರೆ ಎಂದು ಆರೋಪಿಸಿದ ಕಾರಣ ಪಕ್ಷದೊಳಗಿನ ಬಿಕ್ಕಟ್ಟು ತೀವ್ರಗೊಂಡಿತ್ತು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ