ರಾಜ್ಯಸಭೆ ಉಪಾಧ್ಯಕ್ಷ ಹುದ್ದೆ ಯಾರಿಗೆ ಒಲಿಯಲಿದೆ? ಮನೋಜ್ V/s ಹರಿವಂಶ್ ನಾರಾಯಣ್

ಎನ್ ಡಿಎ ಅಭ್ಯರ್ಥಿಯಾಗಿ ರಾಜ್ಯಸಭಾ ಸಂಸದ ಹರಿವಂಶ್ಅವರು ನಾಮಪತ್ರ ಸಲ್ಲಿಸಿದ್ದರು.

Team Udayavani, Sep 14, 2020, 6:41 PM IST

ರಾಜ್ಯಸಭೆ ಉಪಾಧ್ಯಕ್ಷ ಹುದ್ದೆ ಯಾರಿಗೆ ಒಲಿಯಲಿದೆ? ಮನೋಜ್ V/s ಹರಿವಂಶ್ ನಾರಾಯಣ್

ನವದೆಹಲಿ: ರಾಜ್ಯಸಭೆಯ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಆರ್ ಜೆಡಿಯ ಮನೋಜ್ ಝಾ ಅವರಿಗೆ ಆಮ್ ಆದ್ಮಿ ಪಕ್ಷ ಬೆಂಬಲ ನೀಡಲಿದೆ ಎಂದು ಆಮ್ ಆದ್ಮಿ ಪಕ್ಷದ ಸಂಜಯ್ ಸಿಂಗ್ ಸೋಮವಾರ (ಸೆ.14, 2020) ತಿಳಿಸಿದ್ದಾರೆ.

ರಾಜ್ಯಸಭಾ ಉಪ ಸಭಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ವಿರೋಧ ಪಕ್ಷದ ಅಭ್ಯರ್ಥಿ ಮನೋಜ್ ಝಾ ಅವರನ್ನು ಆಮ್ ಆದ್ಮಿ ಪಕ್ಷ ಬೆಂಬಲಿಸಲಿದೆ ಎಂದು ಹೇಳಿದರು.

18 ದಿನಗಳ ಮಳೆಗಾಲದ ಸಂಸತ್ ಅಧಿವೇಶನ ಸೋಮವಾರ (ಸೆಪ್ಟೆಂಬರ್ 14, 2020) ಆರಂಭಗೊಂಡಿದ್ದು, ಬೆಳಗ್ಗೆ ಕಲಾಪದಲ್ಲಿ ಮಾಜಿ ರಾಷ್ಟ್ರಪತಿ ದಿ.ಪ್ರಣಬ್ ಮುಖರ್ಜಿ ಹಾಗೂ ಹಾಲಿ ಸಂಸದ, ನಿಧನರಾಗಿದ್ದ 13 ಮಂದಿ ಮಾಜಿ ಸಂಸದರಿಗೆ ಶ್ರದ್ದಾಂಜಲಿ ಅರ್ಪಿಸಲಾಗಿತ್ತು.

ಸೆಪ್ಟೆಂಬರ್ 9ರಂದು ರಾಜ್ಯಸಭಾ ಉಪಾಧ್ಯಕ್ಷ ಸ್ಥಾನಕ್ಕೆ ಎನ್ ಡಿಎ ಅಭ್ಯರ್ಥಿಯಾಗಿ ರಾಜ್ಯಸಭಾ ಸಂಸದ ಹರಿವಂಶ್ಅವರು ನಾಮಪತ್ರ ಸಲ್ಲಿಸಿದ್ದರು. ವಿರೋಧ ಪಕ್ಷದ ಅಭ್ಯರ್ಥಿಯಾಗಿ ಆರ್ ಜೆಡಿಯ ಮನೋಜ್ ಝಾ ನಾಮಪತ್ರ ಸಲ್ಲಿಸಿರುವುದಾಗಿ ವರದಿ ತಿಳಿಸಿದೆ. ನಾಮಪತ್ರ ಸಲ್ಲಿಸಲು ಸೆಪ್ಟೆಂಬರ್ 11 ಕೊನೆಯ ದಿನಾಂಕವಾಗಿತ್ತು.

ರಾಜ್ಯಸಭೆಯಲ್ಲಿ ಎನ್ ಡಿಎ 245 ಸದಸ್ಯರ ಬಲವನ್ನು ಹೊಂದಿದೆ. ಈ ಹಿನ್ನೆಲೆಯಲ್ಲಿ ಹರಿವಂಶ್ ಅವರು ಯಾವುದೇ ಅಡೆತಡೆ ಇಲ್ಲದೇ ಉಪಾಧ್ಯಕ್ಷ ಸ್ಥಾನ ಗೆಲ್ಲಲಿದ್ದಾರೆ. ಅಲ್ಲದೇ ಟಿಆರ್ ಎಸ್, ವೈಎಸ್ ಆರ್, ಎಐಎಡಿಎಂಕೆ ಎನ್ ಡಿಎ ಅಭ್ಯರ್ಥಿಯನ್ನು ಬೆಂಬಲಿಸಲಿವೆ.

ದೇಶಾದ್ಯಂತ ಕೋವಿಡ್ 19 ಸೋಂಕು ಹರಡಿದ ನಂತರ ಇದೇ ಮೊದಲ ಬಾರಿಗೆ ಲೋಕಸಭೆ ಕಲಾಪ ಆರಂಭಗೊಂಡಿದೆ. ಅಧಿವೇಶನ ಆರಂಭದ ಹಿನ್ನೆಲೆಯಲ್ಲಿ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ವರದಿ ತಿಳಿಸಿದೆ.

ಇದನ್ನೂ ಓದಿ: ‘ಝೀರೋ’ದಿಂದ ಬದುಕು ಪ್ರಾರಂಭಿಸಿದ ಸುಗಾ ಇದೀಗ ಅಬೆಯ ಉತ್ತರಾಧಿಕಾರಿ

ಹರಿವಂಶ್ ಆಯ್ಕೆ:

ರಾಜ್ಯಸಭೆ ಉಪಾಧ್ಯಕ್ಷ ಸ್ಥಾನಕ್ಕೆ ಸೋಮವಾರ ನಡೆದ ಚುನಾವಣೆಯಲ್ಲಿ ಎನ್ ಡಿಎ ಬೆಂಬಲಿತ ಹರಿವಂಶ್ ನಾರಾಯಣ್ ಅವರು ಆಯ್ಕೆಯಾಗಿದ್ದಾರೆ. ಮೇಲ್ಮನೆಯಲ್ಲಿ ನಡೆದ ಧ್ವನಿಮತದ ಚುನಾವಣೆಯಲ್ಲಿ ಹರಿವಂಶ್ ಗೆಲುವು ಸಾಧಿಸಿದ್ದಾರೆ.

ಹರಿವಂಶ್ ನಾರಾಯಣ್ ಅವರು ರಾಜ್ಯಸಭೆಯ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ನಾನು ಘೋಷಿಸುತ್ತಿದ್ದೇನೆ ಎಂದು ರಾಜ್ಯಸಭಾ ಅಧ್ಯಕ್ಷ ಎಂ.ವೆಂಕಯ್ಯ ನಾಯ್ಡು ಅವರು ತಿಳಿಸಿದ್ದಾರೆ.

ಟಾಪ್ ನ್ಯೂಸ್

yogi

ರಾಮದ್ರೋಹಿಗಳು ರಾಜ್ಯವನ್ನು ಗಲಭೆಯ ಬೆಂಕಿಗೆ ನೂಕಿದರು : ಸಿಎಂ ಯೋಗಿ

ಭಾಗ್ಯವಂತರು ಮರು ಬಿಡುಗಡೆ

ಭಾಗ್ಯವಂತರು ಮರು ಬಿಡುಗಡೆ

ಡಾ.ಅಂಬೇಡ್ಕರ್ ಗೆ ಅಪಮಾನ ಮಾಡಿದ ಕಾಂಗ್ರೆಸ್ ಸೋಲಿಸಿ : ಕಾರಜೊಳ

ಡಾ.ಅಂಬೇಡ್ಕರ್ ಗೆ ಅಪಮಾನ ಮಾಡಿದ ಕಾಂಗ್ರೆಸ್ ಸೋಲಿಸಿ : ಕಾರಜೊಳ

ಸಾರ್ವತ್ರಿಕ ಚುನಾವಣೆಯಲ್ಲಿ ಅಭಿವೃದ್ಧಿಯೊಂದಿಗೆ ಮತದಾರರ ಮುಂದೆ ಬರುತ್ತೇನೆ : ಬೊಮ್ಮಾಯಿ

ಸಾರ್ವತ್ರಿಕ ಚುನಾವಣೆಯಲ್ಲಿ ಅಭಿವೃದ್ಧಿಯೊಂದಿಗೆ ಮತದಾರರ ಮುಂದೆ ಬರುತ್ತೇನೆ : ಬೊಮ್ಮಾಯಿ

8dharmasthala

ಡಾ. ವೀರೇಂದ್ರ ಹೆಗ್ಗಡೆಯವರ 54ನೇ ಪಟ್ಟಾಭಿಷೇಕ ವರ್ಧಂತ್ಯುತ್ಸವ

narendra-modi

ಕೋವಿಡ್ ಲಸಿಕೆಯ ಯಶಸ್ಸು ಭಾರತದ ಸಾಮರ್ಥ್ಯ ತೋರಿಸಿದೆ : ಪ್ರಧಾನಿ ಮೋದಿ

1221

ಶಾರುಖ್ ಖಾನ್ ಬಿಜೆಪಿ ಸೇರಿದರೆ ಡ್ರಗ್ಸ್ ಶುಗರ್ ಪೌಡರ್ ಆಗಲಿದೆ !





ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

yogi

ರಾಮದ್ರೋಹಿಗಳು ರಾಜ್ಯವನ್ನು ಗಲಭೆಯ ಬೆಂಕಿಗೆ ನೂಕಿದರು : ಸಿಎಂ ಯೋಗಿ

narendra-modi

ಕೋವಿಡ್ ಲಸಿಕೆಯ ಯಶಸ್ಸು ಭಾರತದ ಸಾಮರ್ಥ್ಯ ತೋರಿಸಿದೆ : ಪ್ರಧಾನಿ ಮೋದಿ

1221

ಶಾರುಖ್ ಖಾನ್ ಬಿಜೆಪಿ ಸೇರಿದರೆ ಡ್ರಗ್ಸ್ ಶುಗರ್ ಪೌಡರ್ ಆಗಲಿದೆ !

bfnbvcx

ಇಂದು ಭಾರತ-ಪಾಕ್‌ ಜಿದ್ದಾ ಜಿದ್ದಿ : ಮೇರೆ ಮೀರಿದೆ ಅಭಿಮಾನಿಗಳ ಉತ್ಸಾಹ  

ಕೋರ್ಟ್‌ಗಳ ಕುಂದುಕೊರತೆ ಬಗ್ಗೆ ಸಿಜೆಐ ರಮಣ ದನಿ

ಕೋರ್ಟ್‌ಗಳ ಕುಂದುಕೊರತೆ ಬಗ್ಗೆ ಸಿಜೆಐ ರಮಣ ದನಿ

MUST WATCH

udayavani youtube

3 ವರ್ಷದಲ್ಲಿ ಫಲ ಬರುವ ತೆಂಗಿನಕಾಯಿ ಇಲ್ಲಿದೆ ನೋಡಿ

udayavani youtube

ರಾಜ್ಯದ ಪಾಲಿಟೆಕ್ನಿಕ್‌ ಶಿಕ್ಷಣದಲ್ಲಿ ಆಮೂಲಾಗ್ರ ಬದಲಾವಣೆ : ಸಚಿವ ಡಾ. ಅಶ್ವತ್ಥನಾರಾಯಣ

udayavani youtube

11 ಮಂದಿ ಚಾರಣಿಗರು ಸಾವು, 17,000 ಅಡಿ ಎತ್ತರದಲ್ಲಿ ವಾಯುಪಡೆ ಕಾರ್ಯಾಚರಣೆ

udayavani youtube

ಮುಂದುವರೆದ ಒಂಟಿ ಸಲಗದ ದಾಂಧಲೆ ಕಾಂಪೌಂಡ್, ಮನೆಯ ಮೇಲ್ಚಾವಣಿ ಪುಡಿಪುಡಿ

udayavani youtube

ಕೃಷಿಕರ ಬದುಕಿಗೆ ಆಶಾಕಿರಣವಾಗಿರುವ MO4 ಭತ್ತದ ತಳಿಯನ್ನು ಯಾಕೆ ಬೆಳೆಯಬೇಕು?

ಹೊಸ ಸೇರ್ಪಡೆ

10kaalubaayi

ಕಾಲು-ಬಾಯಿ ರೋಗಕ್ಕೆ ಲಸಿಕೆಯೇ ಪರಿಹಾರ

yogi

ರಾಮದ್ರೋಹಿಗಳು ರಾಜ್ಯವನ್ನು ಗಲಭೆಯ ಬೆಂಕಿಗೆ ನೂಕಿದರು : ಸಿಎಂ ಯೋಗಿ

ಭಾಗ್ಯವಂತರು ಮರು ಬಿಡುಗಡೆ

ಭಾಗ್ಯವಂತರು ಮರು ಬಿಡುಗಡೆ

The city police commissioner Kamalpant received the public’s plea

ಅಕ್ರಮ ಚಟುವಟಿಕೆಗಳಿಗೆ ಕಡಿವಾಣ

ಡಾ.ಅಂಬೇಡ್ಕರ್ ಗೆ ಅಪಮಾನ ಮಾಡಿದ ಕಾಂಗ್ರೆಸ್ ಸೋಲಿಸಿ : ಕಾರಜೊಳ

ಡಾ.ಅಂಬೇಡ್ಕರ್ ಗೆ ಅಪಮಾನ ಮಾಡಿದ ಕಾಂಗ್ರೆಸ್ ಸೋಲಿಸಿ : ಕಾರಜೊಳ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.