ಮತ್ತೆ ಯುದ್ಧವಿಮಾನ ಏರಿದ ವಾಯುಪಡೆ ಹೀರೋ!

ರಾಜಸ್ಥಾನದಲ್ಲಿ ಮಿಗ್‌ 21 ಚಾಲನೆಗೆ ಶುರು ಮಾಡಿದ ಅಭಿನಂದನ್‌

Team Udayavani, Aug 21, 2019, 10:51 PM IST

ಹೊಸದಿಲ್ಲಿ: ಬಾಲಾಕೋಟ್‌ ದಾಳಿ ಬಳಿಕ ಪಾಕಿಸ್ಥಾನದ ವಾಯುಪಡೆಯ ಎಫ್ 16 ಯುದ್ಧ ವಿಮಾನವನ್ನು ಹೊಡೆದುರುಳಿಸಿ ಸುದ್ದಿ ಮಾಡಿದ, ವಾಯುಪಡೆ ಸೂಪರ್‌ ಹೀರೋ ಪೈಲಟ್‌ ಅಭಿನಂದನ್‌ (36) ಇದೀಗ ಮತ್ತೆ ಮಿಗ್‌ 21 ವಿಮಾನ ಚಾಲನೆಗೆ ಸಿದ್ಧವಾಗಿದ್ದಾರೆ. ಅವರೀಗ ರಾಜಸ್ಥಾನದ ವಾಯುಪಡೆ ನೆಲೆಯಲ್ಲಿ ನಿಯೋಜಿತರಾಗಿದ್ದಾರೆ.

ಫೆ.27ರಂದು ಪಾಕ್‌ ವಾಯುಪಡೆಯೊಂದಿಗೆ ಹೋರಾಟದ ಬಳಿಕ ಅಭಿನಂದನ್‌ ವಿಮಾನ ಪತನಗೊಂಡಿದ್ದು, ಪಾಕ್‌ ಸೇನೆಗೆ ಸೆರೆ ಸಿಕ್ಕಿದ್ದರು. ಬಳಿಕ ಪಾಕ್‌ ಅಭಿನಂದನ್‌ ಅವರನ್ನು ಯುದ್ಧ ಕೈದಿ ಎಂದು ಪರಿಗಣಿಸಿ ಮರಳಿಸಿತ್ತು.

ವಿಮಾನದಿಂದ ಹೊರಗೆ ಹಾರಿದ್ದು, ಮತ್ತು ಸ್ಥಳೀಯರು, ಪಾಕ್‌ ಸೇನೆಯ ಹಿಂಸೆಯಿಂದಾಗಿ ಅಭಿನಂದನ್‌ಗೆ ಏಟಾಗಿದ್ದು ಬಳಿಕ ಅವರು ವಿಮಾನ ಚಾಲನೆಯಿಂದ ದೂರವಿದ್ದರು. ಈಗ 6 ತಿಂಗಳ ಬಳಿಕ ಮತ್ತೆ ಸಿದ್ಧರಾಗಿದ್ದಾರೆ.

ಬೆಂಗಳೂರಿನ ಏರೋಸ್ಪೇಸ್‌ ಮೆಡಿಸಿನ್‌ ಅಭಿನಂದನ್‌ ಅವರನ್ನು ಪೈಲಟ್‌ ಕೆಲಸಕ್ಕೆ ಫಿಟ್‌ ಆಗಿರುವುದಾಗಿ ಮೂರು ವಾರಗಳ ಹಿಂದೆ ಘೋಷಿಸಿದೆ.

ಶತ್ರುರಾಷ್ಟ್ರದ ಕೈಗೆ ಸೆರೆ ಸಿಕ್ಕರೂ, ಅಪ್ರತಿಮ ಧೈರ್ಯ ತೋರಿದ್ದಕ್ಕಾಗಿ ಮತ್ತು ಶತ್ರು ರಾಷ್ಟ್ರದ ಯುದ್ಧ ವಿಮಾನ ಪುಡಿಗಟ್ಟಿದ್ದಕ್ಕಾಗಿ ಅವರಿಗೆ ಇತ್ತೀಚಿಗೆ ವೀರ ಚಕ್ರ ಶೌರ್ಯ ಪದಕವನ್ನು ನೀಡಲಾಗಿತ್ತು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಭತ್ತದ ಸಸಿಗಳನ್ನು ನಾಟಿ ಮಾಡಲು ಹಲವು ಜನರ ಸಹಾಯ ಬೇಕಾಗುತ್ತದೆ. ಅಲ್ಲದೆ, ಅದಕ್ಕೆ ಸಮಯವೂ ವ್ಯಯವಾಗುತ್ತದೆ. ಈ ವೆಚ್ಚವನ್ನು ಮತ್ತು ಸಮಯವನ್ನು ಉಳಿಸಲು ರೈಸ್‌...

  • ಜಮನಾಪುರಿ ಮೇಕೆಗಳನ್ನು ಹಾಲು ಮತ್ತು ಮಾಂಸಕ್ಕಾಗಿ ಸಾಕುತ್ತಾರೆ. ಇವುಗಳ ಮಾಂಸದಲ್ಲಿ ಕೊಬ್ಬಿನಂಶ ಕಡಿಮೆ. ಮೂರು ವರ್ಷಗಳಲ್ಲಿ 120 ಕೆ.ಜಿ.ವರೆಗೂ ಬೆಳೆಯುವ ಇವುಗಳು,...

  • ನಾಯಿ ನಿಯತ್ತಿನ ಪ್ರಾಣಿ. ಈ ಚಿತ್ರದಲ್ಲಿ ಕಾಣುತ್ತಿರುವುದು ರೋಬೋಟ್‌ ನಾಯಿ. ಮನುಷ್ಯ ಹೇಳಿದಷ್ಟನ್ನು ಮಾತ್ರವೇ ಮಾಡುವುದರಿಂದ ಇದು ಜೀವಂತ ನಾಯಿಗಿಂತಲೂ ಹೆಚ್ಚು...

  • ಬೆಂಗಳೂರು: "ಇವನಾರವ ಇವನಾರವ ಎಂದೆನಿಸದಿರಯ್ಯ, ಇವ ನಮ್ಮವ ಇವ ನಮ್ಮವ...' ಎಂಬುದು ಸಮಾಜದ ಪ್ರಸ್ತುತ ಮೂಲಮಂತ್ರ ಆಗಬೇಕು. ಆ ಮೂಲಕ ಲೋಕ ಕಲ್ಯಾಣಕ್ಕೆ ಕಂಕಣ ತೊಡಬೇಕು... ನಗರದ...

  • ಅತ್ತ ಸರ್ಕಾರ ಮಾರ್ಚ್‌ 5ರಂದು ಮಂಡನೆಯಾಗಲಿರುವ ರಾಜ್ಯ ಬಜೆಟ್‌ಗೆ ಸಜ್ಜಾಗುತ್ತಿದ್ದರೆ, ಇತ್ತ ಸ್ಥಳೀಯ ಸಂಸ್ಥೆಗಳು ಬೆಂಗಳೂರಿಗೆ ಏನೇನು ಅವಶ್ಯಕತೆ ಇದೆ ಎಂಬುದರ...