ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಮಾತ್ರ ದೇಶಕ್ಕೆ ಅಚ್ಚೇದಿನ್; ರಾಹುಲ್
Team Udayavani, Jan 11, 2017, 1:42 PM IST
ಹೊಸದಿಲ್ಲಿ: ನೋಟು ಅಪನಗದೀಕರಣದ ವಿರುದ್ಧ ಕಾಂಗ್ರೆಸ್ ಪಕ್ಷ ಬುಧವಾರ ದೆಹಲಿಯಲ್ಲಿ ‘ಜನ್ ವೇದನಾ’ ಎಂಬ ಹೆಸರಿನಲ್ಲಿ ಬೃಹತ್ ರ್ಯಾಲಿ ಆಯೋಜಿಸಿ ಸರಕಾರದ ವಿರುದ್ಧ ಬಲ ಪ್ರದರ್ಶನ ನಡೆಸಿತು.
ಜನರನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ,ಪ್ರಧಾನಿ ನರೇಂದ್ರ ಮೋದಿ ಮತ್ತು ಸರಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
‘ಬಿಜೆಪಿ ಮತ್ತು ನಮ್ಮ ಪ್ರಧಾನಿಗೆ 70 ವರ್ಷಗಳಲ್ಲಿ ಕಾಂಗ್ರೆಸ್ ಏನು ಮಾಡಿದೆ ಎಂದು ಕೇಳುವ ಹವ್ಯಾಸ ಇದೆ. ನಾವು ಏನು ಮಾಡಿದ್ದೇವೆ ಎಂದು ಜನರಿಗೆ ಗೊತ್ತಿದೆ’ಎಂದರು.
‘ಮೋದಿ ಮತ್ತು ಆರ್‌ಎಸ್‌ಎಸ್ ಆರ್‌ಬಿಐ ನಂತಹ ಸಂಸ್ಥೆಗಳನ್ನು ದುರ್ಬಲಗೊಳಿಸಿದ್ದಾರೆ. ಆಟೋ ಮೊಬೈಲ್ ಕ್ಷೇತ್ರದಲ್ಲಿ ಮಾರಾಟ 60% ಕುಸಿದಿದೆ. ನಾವು 16 ವರ್ಷ ಕೆಳಕ್ಕೆ ಹೋಗಿದ್ದೇವೆ. ಇದೇ ಮೊದಲ ಬಾರಿ ಭಾರತದ ಪ್ರಧಾನ ಮಂತ್ರಿಯೊಬ್ಬರು ನೋಟು ನಿಷೇಧ ಮಾಡಿ ವಿಶ್ವದಾದ್ಯಂತ ಅಪಹಾಸ್ಯಕ್ಕೊಳಗಾಗಿದ್ದಾರೆ’.
‘ದೇಶದ ಜನ ‘ಅಚ್ಛೇ ದಿನ್’ಗಾಗಿ ಎದುರು ನೋಡುತ್ತಿದ್ದಾರೆ.ನಾನು ಅವರಿಗೆ ಭರವಸೆ ನೀಡುತ್ತೇನೆ ಮತ್ತೆ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಾಗ ಅದು ಸಾಧ್ಯವಾಗುತ್ತದೆ’ ಎಂದರು.