ಚುಡಾಯಿಸಬೇಡಿ ಎಂದದ್ದಕ್ಕೆ ಆ್ಯಸಿಡ್‌

Team Udayavani, Aug 29, 2019, 5:00 AM IST

ಪಾಟ್ನಾ: ಕುಟುಂಬದ ಯುವತಿಯನ್ನು ಚುಡಾಯಿಸಿದ ಯುವಕರ ಗುಂಪೊಂದಕ್ಕೆ ಬೈದು ಬುದ್ಧಿ ಹೇಳಿದ್ದಕ್ಕೆ ಆ ಕುಟುಂಬದ 16 ಸದಸ್ಯರ ಮೇಲೆ ಬುಧವಾರ ಆ್ಯಸಿಡ್‌ ದಾಳಿ ನಡೆದಿರುವ ಘಟನೆ ಬಿಹಾರದ ವೈಶಾಲಿ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದಿದೆ. ಈ ಪೈಕಿ 8 ಜನರ ಸ್ಥಿತಿ ಗಂಭೀರವಾಗಿದ್ದು, ಹಾಜೀಪುರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಗಳವಾರ, ನಂದಕಿಶೋರ್‌ ಎಂಬುವರ ಕುಟುಂಬಕ್ಕೆ ಯುವತಿಯನ್ನು ಚುಡಾಯಿಸಿದ ಯುವಕರ ತಂಡದೊಂದಿಗೆ ಕುಟುಂಬದ ಇತರ ಸದಸ್ಯರ ವಾಗ್ವಾದ ನಡೆದಿತ್ತು. ಇದರ ಪರಿಣಾಮ, ಬುಧವಾರ, ನಂದಕಿಶೋರ್‌ ಮನೆಗೆ ನುಗ್ಗಿದ ಯುವಕರ ಗುಂಪು ಸಿಕ್ಕಸಿಕ್ಕವರ ಮೇಲೆ ಆ್ಯಸಿಡ್‌ ಎರಚಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ