ಆ್ಯಸಿಡ್‌ ಅಟ್ಯಾಕ್‌ ಕೇಸ್‌: ಅಪರಾಧಿಯನ್ನು ಕುಣಿಕೆಯಿಂದ ತಪ್ಪಿಸಿದ ಬಾಂಬೆ ಹೈಕೋರ್ಟ್‌

Team Udayavani, Jun 12, 2019, 4:00 PM IST

ಮುಂಬಯಿ : 2013ರ ಪ್ರೀತಿ ರತಿ ಆ್ಯಸಿಡ್‌ ಅಟ್ಯಾಕ್‌ ಕೇಸ್‌ನಲ್ಲಿ ಅಪರಾಧಿ ಎಂದು ವಿಶೇಷ ನ್ಯಾಯಾಲಯ ನೀಡಿದ್ದ ತೀರ್ಪನ್ನು ಬಾಂಬೆ ಹೈಕೋರ್ಟ್‌ ಇಂದು ಬುಧವಾರ ಎತ್ತಿ ಹಿಡಿದಿದೆ.

ಆದರೆ ಆರೋಪಿಗೆ ವಿಶೇಷ ನ್ಯಾಯಾಲಯವು ವಿಧಿಸಿದ್ದ ಮರಣ ದಂಡನೆಯನ್ನು ಬಾಂಬೆ ಹೈಕೋರ್ಟ್‌ ಜೀವಾವಧಿ ಶಿಕ್ಷೆಯನ್ನಾಗಿ ಪರಿವರ್ತಿಸಿ ತೀರ್ಪು ನೀಡಿದ್ದು ಆರೋಪಿ ಕುಣಿಕೆಯಿಂದ ಪಾರಾಗಿದ್ದಾನೆ.

ವಿಶೇಷ ನ್ಯಾಯಾಲಯ 2105ರಲ್ಲಿ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಅಪರಾಧಿ ಅಂಕುರ್‌ ಪನ್ವರ್‌  ಹೈಕೋರ್ಟಿಗೆ ಮೇಲ್ಮನವಿ ಸಲ್ಲಿಸಿದ್ದ. ಜಸ್ಟಿಸ್‌ ಬಿ ಪಿ ಧರ್ಮಾಧಿಕಾರಿ ಮತ್ತು ಪಿ ಡಿ ನಾಯಕ್‌ ಅವರನ್ನು ಒಳಗೊಂಡ ವಿಭಾಗೀಯ ಪೀಠ, ಅಪರಾಧಿಯ ಮೇಲ್ಮನವಿಯನ್ನು ಆಂಶಿಕವಾಗಿ ಪುರಸ್ಕರಿಸಿ, ಮರಣ ದಂಡನೆಯ ಶಿಕ್ಷೆಯನ್ನು ಜೀವಾವಧಿ ಜೈಲು ಶಿಕ್ಷೆಯನ್ನಾಗಿ ಪರಿವರ್ತಿಸಿತು.

ಆ್ಯಸಿಡ್‌ ಅಟ್ಯಾಕ್‌ ಕೇಸಿನಲ್ಲಿ ದೇಶದಲ್ಲೇ ಮೊದಲ ಬಾರಿಗೆ ಅಪರಾಧಿಗೆ ನ್ಯಾಯಾಲಯ ಮರಣ ದಂಡನೆ ನೀಡಿದ್ದ ಪ್ರಕರಣ ಇದಾಗಿತ್ತು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ