
ಬಿಜೆಪಿ ಸೇರಿದ ‘ರಾಮಾಯಣ’ ಧಾರಾವಾಹಿಯ ರಾಮನ ಪಾತ್ರಧಾರಿ ನಟ ಅರುಣ್
ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ‘ರಾಮಾಯಣ’ ಧಾರಾವಾಹಿಯಲ್ಲಿ ಅರುಣ್ ರಾಮನ ಪಾತ್ರ ನಿಭಾಯಿಸಿದ್ದರು.
Team Udayavani, Mar 18, 2021, 6:20 PM IST

ನವದೆಹಲಿ : ನಟ ಅರುಣ್ ಗೋವಿಲ್ ರಾಜಕೀಯಕ್ಕೆ ಧುಮುಕಿದ್ದಾರೆ. ಇಂದು (ಮಾರ್ಚ್ 18) ನವದೆಹಲಿಯಲ್ಲಿ ಅವರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ‘ರಾಮಾಯಣ’ ಧಾರಾವಾಹಿಯಲ್ಲಿ ಅರುಣ್ ರಾಮನ ಪಾತ್ರ ನಿಭಾಯಿಸಿದ್ದರು. ತಮ್ಮ ಮನೋಜ್ಞ ನಟನೆಯಿಂದ ರಾಮನ ಪಾತ್ರಕ್ಕೆ ಜೀವಕಳೆ ತುಂಬಿದ್ದರು. ಸಾಕ್ಷಾತ್ ರಾಮನಂತೆಯೇ ಅಭಿನಯಿಸಿ ಜನಮನ ಗೆದ್ದಿದ್ದರು.
ಇಂದು ನವದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಕೇಂದ್ರ ಸಚಿವೆ ದೇಬಶ್ರೀ ಚೌದರಿ ಹಾಗೂ ಹಿರಿಯ ನಾಯಕರ ಸಮ್ಮುಖದಲ್ಲಿ ನಟ ಅರುಣ್ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು, ಅಸ್ಸಾಂ ಹಾಗೂ ಕೇಂದ್ರಾಡಳಿತ ಪ್ರದೇಶ ಪುದುಚೇರಿಗೆ ವಿಧಾನ ಸಭೆ ಚುನಾವಣೆ ಘೋಷಣೆಯಾಗಿದೆ. ಪಂಚರಾಜ್ಯಗಳ ಚುನಾವಣೆಗೆ ಕಣ ರಂಗೇರುತ್ತಿರುವಾಗಲೇ ಹಲವು ಸಿನಿಮಾ ತಾರೆಯರು ರಾಜಕೀಯ ಅಂಗಳಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಈಗಾಗಲೇ ಸಾಕಷ್ಟು ತಾರೆಯರು ರಾಜಕೀಯ ಪ್ರವೇಶಿಸಿದ್ದಾರೆ. ಇದೀಗ ಅವರ ಸಾಲಿಗೆ ಅರುಣ್ ಗೊವಿಲ್ ಹೊಸ ಸೇರ್ಪಡೆ.
ಇನ್ನು ಅರುಣ್ ಗೋವಿಲ್ ಅವರು ಈ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆಯೇ? ಅವರನ್ನು ಬಿಜೆಪಿ ಯಾವ ಕ್ಷೇತ್ರದಲ್ಲಿ ಕಣಕ್ಕೆ ಇಳಿಸಲಿದೆ ಎಂಬುದರ ಕುರಿತು ಸದ್ಯಕ್ಕೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
Actor Arun Govil, best known for playing lord Ram in Ramayan TV series, joins Bharatiya Janata Party (BJP) in Delhi. pic.twitter.com/ddEfyQGFS2
— ANI (@ANI) March 18, 2021
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಕಾಫಿನಾಡಲ್ಲಿ ಮುಂದುವರಿದ ಮತದಾನ ಬಹಿಷ್ಕಾರದ ಕೂಗು

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan
ಹೊಸ ಸೇರ್ಪಡೆ

ಶ್ರೀಲಂಕಾದಂತೆಯೇ ದಿವಾಳಿಯಾಗುವಂಚಿಗೆ ಪಾಕ್

ಸರಕಾರಕ್ಕೆ ನಾಚಿಕೆಗೇಡು; ಸಮವಸ್ತ್ರ ,ಶೂ ನೀಡದಿರುವುದಕ್ಕೆ ಹೈಕೋರ್ಟ್ ತರಾಟೆ

ಯುಯುಸಿಎಂಎಸ್ ವಿಫಲವಾದಲ್ಲಿ ವಿ.ವಿ.ಯೇ ಫಲಿತಾಂಶ ಪ್ರಕಟಿಸಲಿದೆ

ರಾಶಿ ಫಲ: ಪರರಿಗೆ ಸಹಾಯ ಮಾಡಿದ ತೃಪ್ತಿ, ಉದ್ಯೋಗ ಪಾಲುಗಾರಿಕಾ ವ್ಯವಹಾರಗಳಲ್ಲಿ ಪ್ರಗತಿ

ಮತದಾರ ಪಟ್ಟಿ ಮತ್ತಷ್ಟು ಖಚಿತ; 170 ಕ್ಷೇತ್ರಗಳಲ್ಲಿ ಮತ್ತೆ ಪರಿಶೀಲನೆಗೆ ನಿರ್ಧಾರ