ಎಕ್ಸಾಂನಲ್ಲಿ ನಟಿ ಸನ್ನಿ ಪಾಸ್!
Team Udayavani, Feb 22, 2019, 12:30 AM IST
ಪಾಟ್ನಾ: ಸನ್ನಿ ಲಿಯೋನ್, ಬಿಹಾರ ಸಾರ್ವಜನಿಕ ಆರೋಗ್ಯ ಎಂಜಿನಿಯರಿಂಗ್ ವಿಭಾಗದ ಕಿರಿಯ ಎಂಜಿನಿಯರ್…! ಯಾಕೆ ಡೌಟ್ ಬಂತಾ? ನಿಜಕ್ಕೂ ಇಂಥದ್ದು ಆದದು ಹೌದು. ಸನ್ನಿಲಿಯೋನ್ ಎಂಬ ಹೆಸರಿನಲ್ಲಿ ಬಿಹಾರ ಸಾರ್ವಜನಿಕ ಆರೋಗ್ಯ ಎಂಜಿನಿಯರಿಂಗ್ ವಿಭಾಗದ ಕಿರಿಯ ಎಂಜಿನಿಯರ್ ಹುದ್ದೆಗಳ ಪರೀಕ್ಷೆ ಬರೆಯಲಾಗಿದೆ. ಜತೆಗೆ ಅವರು ಉತ್ತಮ ಅಂಕಗಳಲ್ಲಿ ಉತ್ತೀರ್ಣರಾಗಿದ್ದಾರೆ. ಅವರಿಗೆ ಶೇ.98.5ರಷ್ಟು ಅಂಕಗಳೂ ಬಂದಿವೆ. ಶೈಕ್ಷಣಿಕ ವಿಭಾಗದಲ್ಲಿ ಶೇ. 73.5, ಪ್ರಾಯೋಗಿಕ ವಿಭಾಗದಲ್ಲಿ ಶೇ.25ರಷ್ಟು ಅಂಕಗಳು ಪ್ರಾಪ್ತವಾಗಿದೆ ಎಂದು ಪರೀಕ್ಷೆ ನಡೆಸಿದ ಪ್ರಾಧಿಕಾರದ ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿರುವ ಫಲಿತಾಂಶದಲ್ಲಿ ಗೊತ್ತಾಗಿದೆ. ಫೆ.15ರಂದು ಫಲಿತಾಂಶ ಪ್ರಕಟಿಸಲಾಗಿದೆ. ಬಾಲಿವುಡ್ ನಟಿ ಸನ್ನಿ ಲಿಯೋನ್ರ ತಂದೆಯ ಹೆಸರನ್ನು ಲಿಯೋನಾ ಲಿಯೋನ್ ಎಂದು ಪ್ರಸ್ತಾಪಿಸಲಾಗಿದೆ. ಅವರ ಅರ್ಜಿ ಸಂಖ್ಯೆ ಜೆಇಸಿ/0031211, ಐಡಿ ಸಂಖ್ಯೆ 2ಎವಿಆರ್ಸಿಡಬ್ಲೂಸಿಟಿ.
ಈ ಎಡವಟ್ಟಿನ ಬಗ್ಗೆ ಪ್ರಕ್ರಿಯೆ ನೀಡಿರುವ ಬಿಹಾರ ಸಾರ್ವಜನಿಕ ಆರೋಗ್ಯ ಎಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು ಪ್ರಾಥಮಿಕ ಹಂತದ ಪರೀಕ್ಷೆಯ ಫಲಿತಾಂಶ ಕಂಪ್ಯೂಟರ್ ಆಧಾರಿತ ಫಲಿತಾಂಶ ಎಂದು ಹೇಳಿದ್ದಾರೆ. “ಬಿವಿಸಿಎಕ್ಸ್ ಝಡ್ಬಿಎನ್ಎನ್ಬಿ’ ಎಂಬ ಹೆಸರಿನ ವ್ಯಕ್ತಿಗೆ ಶೇ.92.89 ಅಂಕಗಳು ಬಂದಿವೆ. ನಟಿ ಸನ್ನಿ ಲಿಯೋನ್ ಈ ಬಗ್ಗೆ ಟ್ವೀಟ್ ಮಾಡಿ “ಹ ಹಾ ನನ್ನಂತೇ ಇರುವ ಇತರ ವ್ಯಕ್ತಿ ಉತ್ತಮ ಫಲಿತಾಂಶದಿಂದ ತೇರ್ಗಡೆಯಾಗಿದ್ದಾರೆ. ಕೇಳಿ ಖುಶಿಯಾಯಿತು’ ಎಂದು ಬರೆದುಕೊಂ ಡಿದ್ದಾರೆ.
ಕಂಪ್ಯೂಟರ್ ಆಧಾರಿತ ಫಲಿತಾಂಶವೆಂದ ಇಲಾಖೆ
ಸಂತೋಷವಾಯಿತೆಂದು ಟ್ವೀಟ್ ಮಾಡಿದ ಸನ್ನಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ex-IPS officer ಸಂಜೀವ್ ಭಟ್ಗೆ 1996 ರ ಡ್ರಗ್ಸ್ ಕೇಸ್ ನಲ್ಲಿ 20 ವರ್ಷ ಜೈಲು ಶಿಕ್ಷೆ
Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ
Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ
Mangaluru;ಮನೆಯಲ್ಲೇ ಅಕ್ರಮ ಕಸಾಯಿಖಾನೆ:ಗೋಮಾಂಸ ಸಹಿತ ಮೂವರ ಬಂಧನ
Kolkata ವಿಮಾನ ನಿಲ್ದಾಣದಲ್ಲಿ ಸ್ವಯಂ ಗುಂಡಿಟ್ಟುಕೊಂಡು ಯೋಧ ಆತ್ಮಹತ್ಯೆ
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ