ವಕೀಲರ ಸಮ್ಮುಖದಲ್ಲೇ ಆದೇಶ: ಸುಪ್ರೀಂ ಕೋರ್ಟ್‌

ಅರ್ಜಿ ವಾಪಸ್‌ಗೆ ಅವಕಾಶ ಕೋರಿದ ಇಬ್ಬರು ಪಕ್ಷೇತರ ಶಾಸಕರು

Team Udayavani, Jul 25, 2019, 5:13 AM IST

supreme-court-800

ಹೊಸದಿಲ್ಲಿ: ಕೂಡಲೇ ವಿಶ್ವಾಸಮತ ಸಾಬೀತಿಗೆ ಸ್ಪೀಕರ್‌ ರಮೇಶ್‌ಕುಮಾರ್‌ಗೆ ಆದೇಶಿಸ ಬೇಕೆಂದು ಕೋರಿ ತಾವು ಸಲ್ಲಿಸಿದ್ದ ಅರ್ಜಿಯನ್ನು ವಾಪಸ್‌ ಪಡೆಯಲು ಅವಕಾಶ ನೀಡುವಂತೆ ಬುಧವಾರ ಸುಪ್ರೀಂ ಕೋರ್ಟ್‌ಗೆ ಪಕ್ಷೇತರ ಶಾಸಕರಿಬ್ಬರು ಮನವಿ ಮಾಡಿದ್ದಾರೆ.

ಮಂಗಳವಾರವೇ ಸಿಎಂ ಕುಮಾರಸ್ವಾಮಿ ಅವರು ವಿಶ್ವಾಸಮತ ಪ್ರಕ್ರಿಯೆ ಪೂರ್ಣಗೊಳಿಸಿರುವ ಕಾರಣ ಅರ್ಜಿ ವಾಪಸ್‌ ಪಡೆಯುತ್ತಿರುವುದಾಗಿ ಪಕ್ಷೇತರ ಶಾಸಕರಾದ ಆರ್‌.ಶಂಕರ್‌ ಮತ್ತು ಎಚ್.ನಾಗೇಶ್‌ ಪರ ವಕೀಲರು ಕೋರಿಕೊಂಡರು.

ಆದರೆ ಬುಧವಾರದ ವಿಚಾರಣೆ ವೇಳೆ ವಕೀಲರಾದ ಅಭಿಷೇಕ್‌ ಮನು ಸಿಂಘ್ವಿ ಮತ್ತು ಮುಕುಲ್ ರೋಹrಗಿ ಇಬ್ಬರೂ ಗೈರಾಗಿದ್ದರು. ಅವರ ಗೈರು ಹಾಜರಿ ಕುರಿತು ಪ್ರಶ್ನಿಸಿದ ಸಿಜೆಐ ರಂಜನ್‌ ಗೊಗೋಯ್‌ ನೇತೃತ್ವದ ನ್ಯಾಯಪೀಠ, ಮುಕುಲ್ ರೋಹrಗಿ ಅವರೆಲ್ಲಿ? ಎ.ಎಂ.ಸಿಂಘ್ವಿ ಅವರೆಲ್ಲಿ? ಈ ಪ್ರಕರಣದಲ್ಲಿ ವಾದ ಮಂಡಿಸಲು ಈ ಇಬ್ಬರು ಹಿರಿಯ ವಕೀಲರೂ ಕೋರ್ಟ್‌ನ ಸಾಕಷ್ಟು ಸಮಯವನ್ನು ವ್ಯಯಿಸಿದ್ದಾರೆ. ಹಾಗಾಗಿ ನಾವು ಏನೇ ಆದೇಶ ನೀಡುವುದಿದ್ದರೂ ಅವರ ಸಮ್ಮುಖದಲ್ಲೇ ನೀಡುತ್ತೇವೆ ಎಂದು ಹೇಳಿತು.

ಒಂದಲ್ಲ ಒಂದು ದಿನ ಬಿಜೆಪಿಗೆಅರಿವಾಗಲಿದೆ: ಪ್ರಿಯಾಂಕಾ
ಕರ್ನಾಟಕದ ಸಮ್ಮಿಶ್ರ ಸರಕಾರದ ಪತನ ಕುರಿತು ಬುಧವಾರ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ, ಎಲ್ಲವನ್ನೂ ಖರೀದಿಸಲಾಗುವುದಿಲ್ಲ, ಎಲ್ಲರನ್ನೂ ಮೂರ್ಖರನ್ನಾಗಿಸಲು ಆಗುವುದಿಲ್ಲ ಮತ್ತು ಪ್ರತಿಯೊಂದು ಸುಳ್ಳು ಕೂಡ ಬಹಿರಂಗವಾಗಲೇಬೇಕು ಎಂಬ ಸತ್ಯವು ಒಂದಲ್ಲ ಒಂದು ದಿನ ಬಿಜೆಪಿಗೆ ಅರಿವಾಗಲಿದೆ. ಅಲ್ಲಿಯವರೆಗೆ ಬಿಜೆಪಿಯ ನಿರಂತರ ಭ್ರಷ್ಟಾಚಾರ, ಜನರ ಹಿತಾಸಕ್ತಿ ಕಾಪಾಡಬೇಕಾದಂಥ ಸಂಸ್ಥೆಗಳ ವ್ಯವಸ್ಥಿತ ನಾಶ, ಹಲವು ದಶಕ ಗಳ ಪರಿಶ್ರಮ ಮತ್ತು ತ್ಯಾಗದಿಂದ ಕಟ್ಟಿರುವಂಥ ಪ್ರಜಾಪ್ರಭುತ್ವ ವ್ಯವಸ್ಥೆ ಯನ್ನೇ ದುರ್ಬಲಗೊಳಿಸುವಂಥ ಪ್ರಕ್ರಿಯೆಯನ್ನು ನಮ್ಮ ದೇಶದ ನಾಗರಿಕರು ಸಹಿಸಿಕೊಳ್ಳಲೇಬೇಕಾಗು ತ್ತದೆ ಎಂದು ಟ್ವೀಟ್ ಮಾಡಿದ್ದಾರೆ.

ಪಟ್ಟಭದ್ರರ ದುರಾಸೆಯೇ
ಗೆದ್ದಿತು: ರಾಹುಲ್

ಕರ್ನಾಟಕದ ಬೆಳವಣಿಗೆಗಳ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ನಾಯಕ ರಾಹುಲ್ ಗಾಂಧಿ, ಅಧಿ ಕಾರಕ್ಕೆ ಬಂದ ಮೊದಲ ದಿನ ದಿಂದಲೇ ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರಕಾರವನ್ನು ಪಟ್ಟಭದ್ರ ಹಿತಾಸಕ್ತಿಗಳು ಟಾರ್ಗೆಟ್ ಮಾಡ ಲಾರಂಭಿಸಿದ್ದವು. ಒಳಗಿರುವವರು ಮತ್ತು ಹೊರಗಿರುವ ಪಟ್ಟಭದ್ರರು ಅಧಿಕಾರದ ಕಡೆಗಿನ ತಮ್ಮ ನಡಿಗೆಗೆ ಸಮ್ಮಿಶ್ರ ಸರಕಾರವೇ ಅಡ್ಡಿ ಎಂದು ಭಾವಿಸಿದ್ದರು. ಅವರ ದುರಾಸೆ ಕೊನೆಗೂ ಗೆದ್ದಿತು. ಆದರೆ ಪ್ರಜಾತಂತ್ರ, ಪ್ರಾಮಾಣಿಕತೆ ಮತ್ತು ಕರ್ನಾಟಕದ ಜನರು ಸೋತರು ಎಂದು ಟ್ವೀಟ್ ಮಾಡಿದ್ದಾರೆ. ಇದು ಸರಕಾರ ಉರುಳಲು ಪಕ್ಷದ ನಾಯಕರೂ ಕಾರಣ ಎಂದು ಪರೋಕ್ಷವಾಗಿ ಉಲ್ಲೇಖೀಸಿದಂತಿದೆ .

ಟಾಪ್ ನ್ಯೂಸ್

1ra

ಗೋವಾದಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅಬ್ಬರದ ಪ್ರಚಾರ

Covid test

ಇಂದೂ ರಾಜ್ಯದಲ್ಲಿ 50  ಸಾವಿರದ ಸನಿಹದಲ್ಲಿ ಕೋವಿಡ್ ಕೇಸ್ : 22 ಸಾವು

1-fdsfsdf

35 ಯೂ ಟ್ಯೂಬ್ ಚಾನಲ್‌ಗಳನ್ನು ಬ್ಲಾಕ್ ಮಾಡಿದ ಭಾರತ ಸರಕಾರ

1-asfsd

ಬಂಡಾಯ ಅಭ್ಯರ್ಥಿಯಾದ ಪರ್ರಿಕರ್ ಪುತ್ರ : ನಾಚಿಕೆಗೇಡು ಎಂದ ಉತ್ಪಲ್

ರೈತರಿಗೆ ನ್ಯಾಯ ಒದಗಿಸುವ ವಿಚಾರದಲ್ಲಿ ಯಾವುದೇ ಕಾರಣಕ್ಕೂ ರಾಜಿಯಿಲ್ಲ

ರೈತರಿಗೆ ನ್ಯಾಯ ಒದಗಿಸುವ ವಿಚಾರದಲ್ಲಿ ಯಾವುದೇ ಕಾರಣಕ್ಕೂ ರಾಜಿಯಿಲ್ಲ: ಸಚಿವ ಭಗವಂತ್ ಖೂಬಾ

congress

ವೀಕೆಂಡ್ ಕರ್ಫ್ಯೂ ವಾಪಸ್ : ಟ್ವೀಟ್ ಮೂಲಕ ಕಾಂಗ್ರೆಸ್ ಆಕ್ರೋಶ

nirani

ಹೌದು,ನಾನು ಸೂಟ್ ಹೊಲಿಸಿಕೊಂಡಿದ್ದೇನೆ:ಯತ್ನಾಳ್ ಗೆ ನಿರಾಣಿ ತಿರುಗೇಟು



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1ra

ಗೋವಾದಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅಬ್ಬರದ ಪ್ರಚಾರ

1-fdsfsdf

35 ಯೂ ಟ್ಯೂಬ್ ಚಾನಲ್‌ಗಳನ್ನು ಬ್ಲಾಕ್ ಮಾಡಿದ ಭಾರತ ಸರಕಾರ

1-asfsd

ಬಂಡಾಯ ಅಭ್ಯರ್ಥಿಯಾದ ಪರ್ರಿಕರ್ ಪುತ್ರ : ನಾಚಿಕೆಗೇಡು ಎಂದ ಉತ್ಪಲ್

court

ಬಾಂಬೆ ಹೈಕೋರ್ಟ್‌ ನ್ಯಾಯಾಧೀಶರ ಕೊಠಡಿಯಲ್ಲಿ ಹಾವು ಪ್ರತ್ಯಕ್ಷ

ನಿಮಗೆ ಬೇರೆ ಮುಖ ಕಾಣಿಸುತ್ತಿದೆಯೇ..ಉತ್ತರಪ್ರದೇಶದಲ್ಲಿ ನಾನೇ ಸಿಎಂ ಅಭ್ಯರ್ಥಿ: ಪ್ರಿಯಾಂಕಾ

ನಿಮಗೆ ಬೇರೆ ಮುಖ ಕಾಣಿಸುತ್ತಿದೆಯೇ..ಉತ್ತರಪ್ರದೇಶದಲ್ಲಿ ನಾನೇ ಸಿಎಂ ಅಭ್ಯರ್ಥಿ: ಪ್ರಿಯಾಂಕಾ

MUST WATCH

udayavani youtube

‘ಯೂಸ್ ಅಂಡ್ ಥ್ರೋ’ ಕೇಜ್ರಿವಾಲ್‍ಗಿಂತ ಚೆನ್ನಾಗಿ ಯಾರೂ ಮಾಡಲಾರರು

udayavani youtube

ತ್ಯಾಜ್ಯದಿಂದ ಗೊಬ್ಬರ ಹಲವು ಲಾಭ

udayavani youtube

ವಿದ್ಯುತ್ ದರ ಏರಿಕೆ ಅನಿವಾರ್ಯ: ಇಂಧನ ಸಚಿವ ಸುನಿಲ್ ಕುಮಾರ್

udayavani youtube

ಸಿಮೆಂಟ್ ರಿಂಗ್ ಬಳಸಿ ಯಶಸ್ವಿ ದಾಳಿಂಬೆ ಕೃಷಿ

udayavani youtube

‘ಅಮರ್ ಜವಾನ್ ಜ್ಯೋತಿ’ ರಾಷ್ಟ್ರೀಯ ಯುದ್ಧ ಸ್ಮಾರಕ ಜ್ವಾಲೆಯೊಂದಿಗೆ ವಿಲೀನಗೊಳ್ಳಲಿದೆ|

ಹೊಸ ಸೇರ್ಪಡೆ

arrested

ಮಂಗಳೂರು: ಕರ್ತವ್ಯ ನಿರತ ಪೊಲೀಸರ ಮೇಲೆ ಹಲ್ಲೆ; ಇಬ್ಬರ ಬಂಧನ

1-rwr

ಭಟ್ಕಳ : ಕಂಟೈನರ್ ಗೆ ಹಿಂಬದಿಯಿಂದ ಢಿಕ್ಕಿಯಾದ ಅಂಬುಲೆನ್ಸ್ ;ರೋಗಿ ಪಾರು

ಎರತಯುಇಒಇಕಜಹಗ್

ಐತಿಹಾಸಿಕ ನೆಲೆಗಳ ಸಂರಕ್ಷ ಣೆ ಅಗತ್ಯ: ಎಡಿಸಿ ಬಾಲಕೃಷ್ಣ

eಟತಯುಯರಹ

ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸ್ಥಳ ಪರಿಶೀಲನೆ

1ra

ಗೋವಾದಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅಬ್ಬರದ ಪ್ರಚಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.