ಮುಂಬೈ ಸಮೀಪ ತಲೆಎತ್ತಲಿದೆ “ಅಕ್ರಮ ವಲಸಿಗರ ನಿರಾಶ್ರಿತರ ಕೇಂದ್ರ? ವರದಿ

Team Udayavani, Sep 9, 2019, 10:44 AM IST

ಮಹಾರಾಷ್ಟ್ರ: ಅಸ್ಸಾಂನಲ್ಲಿ ಕಳೆದ ವಾರ ರಾಷ್ಟ್ರೀಯ ಪೌರತ್ವ ನೋಂದಣಿ(ಎನ್ ಆರ್ ಸಿ) ಅಂತಿಮ ಪಟ್ಟಿ ಬಿಡುಗಡೆಯಾಗಿದ್ದು, ಸುಮಾರು 19 ಲಕ್ಷ ಮಂದಿ ಅಸ್ಸಾಂ ನಿವಾಸಿಗಳಲ್ಲ ಎಂದು ತಿಳಿಸಿತ್ತು. ಇದೀಗ ಮುಂಬೈಯಲ್ಲಿ ಅಕ್ರಮ ವಲಸಿಗರನ್ನು ಬಂಧಿಸಿಡುವ ಶಿಬಿರ ನಿರ್ಮಾಣ ಮಾಡಲು ಜಾಗ ನೀಡುವಂತೆ ಮಹಾರಾಷ್ಟ್ರ ಗೃಹಸಚಿವಾಲಯ ನವಿ ಮುಂಬೈ ಯೋಜನಾ ಪ್ರಾಧಿಕಾರಕ್ಕೆ ಪತ್ರ ಬರೆದಿದೆ.

ಮೂಲಗಳ ಪ್ರಕಾರ, ಮುಂಬೈನ ನೇರ್ಲು ಪ್ರದೇಶದಲ್ಲಿ 2ರಿಂದ 3ಎಕರೆ ಜಾಗ ನೀಡುವಂತೆ ಕೋರಿ ಮಹಾರಾಷ್ಟ್ರ ನಗರ ಮತ್ತು ಇಂಡಸ್ಟ್ರೀಯಲ್ ಡೆವಲಪ್ ಮೆಂಟ್ ಕಾರ್ಪೋರೇಶನ್(ಸಿಐಡಿಸಿಒ) ಗೆ ಪತ್ರ ಬರೆದಿದೆ. ಮುಂಬೈನಿಂದ 20 ಕಿಲೋ ಮೀಟರ್ ದೂರದಲ್ಲಿರುವ ನವಿ ಮುಂಬೈ ಸಮೀಪದಲ್ಲಿದೆ ನೇರ್ಲು ಪ್ರದೇಶ.

ಆದರೆ ಮಹಾರಾಷ್ಟ್ರ ಗೃಹ ಸಚಿವಾಲಯ ಪತ್ರ ಬರೆದಿರುವ ವರದಿಯನ್ನು ತಳ್ಳಿಹಾಕಿದೆ. ಆದರೆ ಕೇಂದ್ರ ಸರಕಾರ ಅಕ್ರಮ ವಲಸಿಗರ ಶಿಬಿರ ನಿರ್ಮಾಣದ ಕುರಿತು ನಿಯಮಾವಳಿಯನ್ನು ಬಿಡುಗಡೆ ಮಾಡಿತ್ತು. ದೇಶದ ಪ್ರಮುಖ ನಗರದಲ್ಲಿ ವಲಸಿಗರ ಕೇಂದ್ರಗಳನ್ನು ನಿರ್ಮಿಸಬೇಕೆಂದು ಸೂಚಿಸಿತ್ತು ಎಂದು ವರದಿ ವಿವರಿಸಿದೆ.

ಅಸ್ಸಾಂನಲ್ಲಿನ ಮೂಲ ನಿವಾಸಿಗಳನ್ನು ಗುರುತಿಸುವ ಸಮಸ್ಯೆಯನ್ನು ಎನ್ ಆರ್ ಸಿ ಬಗೆಹರಿಸಿಕೊಳ್ಳಬೇಕಾದ ಅಗತ್ಯವಿದೆ. ನಾವ್ಯಾಕೆ ಎನ್ ಆರ್ ಸಿ ಪ್ರಕ್ರಿಯೆಯನ್ನು ಬೆಂಬಲಿಸಬೇಕು. ಮುಂಬೈಯಲ್ಲಿಯೂ ಅಕ್ರಮವಾಗಿ ವಾಸವಾಗಿರುವ ಬಾಂಗ್ಲಾದೇಶಿಗಳನ್ನು ಬಂಧಿಸಿಡುವ ಕೆಲಸ ಮಾಡಬೇಕು ಎಂದು ಶಿವಸೇನಾದ ಮುಖಂಡ ಅರವಿಂದ್ ಸಾವಂತ್ ಎಎನ್ ಐ ನ್ಯೂಸ್ ಏಜೆನ್ಸಿಗೆ ತಿಳಿಸಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ