ಪಶ್ಚಿಮ ಬಂಗಾಳದಲ್ಲಿ ಬಿಜೆಪಿ 100 ಸ್ಥಾನ ಗೆಲ್ಲಲ್ಲ ಎಂದಿದ್ದ ಪ್ರಶಾಂತ್ ಕಿಶೋರ್!
ಬೇರೆಯವರಿಗೆ ಹೊಣೆಗಾರಿಕೆ ಒಪ್ಪಿಸಲು ಇದಕ್ಕಿಂತ ಉತ್ತಮವಾದ ಸಮಯ ಇನ್ನೊಂದಿಲ್ಲ ಎಂದು ಕಿಶೋರ್ ಹೇಳಿದರು.
Team Udayavani, May 2, 2021, 5:19 PM IST
ಕೋಲ್ಕತಾ: ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನೂರು ಸ್ಥಾನಗಳಲ್ಲಿ ಗೆಲ್ಲುವುದಿಲ್ಲ ಎಂದು ಹೇಳಿದ್ದ ಪ್ರಶಾಂತ್ ಕಿಶೋರ್ ನುಡಿದಿದ್ದ ಭವಿಷ್ಯ ನಿಜವಾಗಿದ್ದು, ಪಶ್ಚಿಮಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಪಕ್ಷ ಪ್ರಚಂಡ ಜಯಭೇರಿ ಬಾರಿಸಿದೆ. ಏತನ್ಮಧ್ಯೆ ರಾಜಕೀಯ ಪಕ್ಷಗಳಿಗೆ ಕಾರ್ಯತಂತ್ರ ರೂಪಿಸುತ್ತಿದ್ದ ಪ್ರಶಾಂತ್ ಕಿಶೋರ್ ತಮ್ಮ ಕೆಲಸದಿಂದ ನಿವೃತ್ತಿ ಹೊಂದುವುದಾಗಿ ಘೋಷಿಸಿದ್ದಾರೆ.
ಇದನ್ನೂ ಓದಿ:ಬೆಳಗಾವಿ ವಿಜಯಮಾಲೆ ಯಾರಿಗೆ? ರೋಚಕತೆಯತ್ತ ಸಾಗುತ್ತಿದೆ ಫಲಿತಾಂಶ
ಇಂಡಿಯಾ ಟುಡೇ ಜತೆ ಮಾತನಾಡಿರುವ ಪ್ರಶಾಂತ್ ಕಿಶೋರ್, ನಾನು ದೀರ್ಘಸಮಯದಿಂದ ಈ ಕೆಲಸವನ್ನು ಬಿಡಬೇಕೆಂದು ಚಿಂತಿಸುತ್ತಿದ್ದೆ ಹಾಗೂ ಕೊನೆಯ ಅವಕಾಶಕ್ಕಾಗಿ ಕಾಯುತ್ತಿದ್ದಾಗ ನನಗೆ ಪಶ್ಚಿಮಬಂಗಾಳ ಆ ಅವಕಾಶವನ್ನು ಒದಗಿಸಿಕೊಟ್ಟಿದೆ ಎಂದು ತಿಳಿಸಿದ್ದಾರೆ.
ರಾಜಕೀಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ನಿಮ್ಮ ಗುರಿ ಏನು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ರಾಜಕಾರಣಿಯಾಗಿ ಅದರಲ್ಲಿ ಸೋಲು ಕಂಡಿದ್ದೇನೆ. ಹೀಗಾಗಿ ಮತ್ತೆ ಅದರ ಬಗ್ಗೆ ಆಸಕ್ತಿ ಹೊಂದಿಲ್ಲ. ಈ ನಿಟ್ಟಿನಲ್ಲಿ ನಾನೇನು ಮಾಡಿದರೆ ಉತ್ತಮ ಎಂಬ ಬಗ್ಗೆ ಪುನರ್ ವಿಮರ್ಶೆ ಮಾಡುತ್ತಿದ್ದೇನೆ.
ಚುನಾವಣಾ ರಾಜಕೀಯ ತಂತ್ರಜ್ಞನಾಗಿ ಕಾರ್ಯನಿರ್ವಹಿಸಿದ್ದ ನಾನೀಗ ವಿಶ್ರಾಂತಿ ಪಡೆಯಲು ಬಯಸುತ್ತೇನೆ. ನನ್ನೊಂದಿಗೆ ಶ್ರಮಪಟ್ಟು ದುಡಿದವರಿಗೆ ಹೊಣೆಗಾರಿಕೆಯನ್ನು ವಹಿಸುತ್ತೇನೆ. ಬೇರೆಯವರಿಗೆ ಹೊಣೆಗಾರಿಕೆ ಒಪ್ಪಿಸಲು ಇದಕ್ಕಿಂತ ಉತ್ತಮವಾದ ಸಮಯ ಇನ್ನೊಂದಿಲ್ಲ ಎಂದು ಕಿಶೋರ್ ಹೇಳಿದರು.
ಇನ್ಮುಂದೆ ರಾಜಕೀಯ ಪಕ್ಷಗಳಿಗೆ ಚುನಾವಣಾ ತಂತ್ರಜ್ಞನಾಗಿ ಕೆಲಸ ನಿರ್ವಹಿಸುವುದನ್ನು ತ್ಯಜಿಸಿ, ಕುಟುಂಬದ ಜತೆ ಕೆಲ ಸಮಯ ಕಾಲಕಳೆಯಬೇಕೆಂಬ ಇಚ್ಚೆಯನ್ನು ಪ್ರಶಾಂತ್ ಕಿಶೋರ್ ವ್ಯಕ್ತಪಡಿಸಿರುವುದಾಗಿ ವರದಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಿಸ್ ಇಂಡಿಯಾ ಕಿರೀಟ ಗೆದ್ದ ಉಡುಪಿಯ ಸಿನಿ ಶೆಟ್ಟಿ
ಗೋಧ್ರಾ ರೈಲು ಹತ್ಯಾಕಾಂಡದ ರೂವಾರಿ ರಫೀಕ್ಗೆ ಜೀವಾವಧಿ ಶಿಕ್ಷೆ
ಎನ್ಡಿಎ ಅಭ್ಯರ್ಥಿಗೆ ಪಟ್ಟ? ಆ. 16ಕ್ಕೆ ಉಪರಾಷ್ಟ್ರಪತಿ ಚುನಾವಣೆ; ಬಿಜೆಪಿ ಬಳಿ 395 ಮತ
ಮಹಾಕ್ಕೆ ನರ್ವೇಕರ್ ಯುವ ಸಭಾಧ್ಯಕ್ಷ: ಸಿಎಂ ಶಿಂಧೆಗೆ ಇಂದು ವಿಶ್ವಾಸ ಪರೀಕ್ಷೆ
ಜಾಲತಾಣಗಳಿಗೆ ಕಾನೂನು ನಿಯಂತ್ರಣ ಅಗತ್ಯ: ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಜೆ.ಬಿ.ಪರ್ದಿವಾಲಾ