ಗೋವಾದಲ್ಲೂ ಯಶಸ್ವೀ ಆಪರೇಷನ್‌!

Team Udayavani, Jul 11, 2019, 6:00 AM IST

ಪಣಜಿ: ಕರ್ನಾಟಕದಲ್ಲಿ ನಡೆಯುತ್ತಿದ್ದ ‘ಆಪರೇಷನ್‌’ ನೆರೆಯ ಗೋವಾಗೂ ತಲುಪಿದೆ. ಕಾಂಗ್ರೆಸ್‌ನ 15 ಶಾಸಕರ ಪೈಕಿ 10 ಮಂದಿ ಶಾಸಕರು ಬಿಜೆಪಿ ಸೇರಿದ್ದಾರೆ. ವಿಶೇಷವೆಂದರೆ ವಿಪಕ್ಷ ನಾಯಕ ಕವಲೇಕರ್‌ ನೇತೃತ್ವದಲ್ಲೇ ಇವರೆಲ್ಲರೂ ಬಿಜೆಪಿಗೆ ಸೇರಿ ರುವುದಾಗಿ ಘೋಷಿಸಿದ್ದಾರೆ. ಮೂರನೇ ಎರಡರಷ್ಟು ಶಾಸಕರು ಪಕ್ಷ ತ್ಯಜಿಸಿದ್ದರಿಂದ ಅವರ ಸ್ಥಾನಕ್ಕೆ ಚ್ಯುತಿಯಿಲ್ಲ, ರಾಜೀನಾಮೆಯ ಅಗತ್ಯವಿಲ್ಲ.

ಬುಧವಾರ ಸ್ಪೀಕರ್‌ ಭೇಟಿ ಮಾಡಿದ ವಿಪಕ್ಷ ನಾಯಕ ಚಂದ್ರಕಾಂತ ಕವಲೇಕರ್‌ ನೇತೃತ್ವದ ಕಾಂಗ್ರೆಸ್‌ ಶಾಸಕರ ತಂಡ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರುವ ಬಗ್ಗೆ ಮಾಹಿತಿ ನೀಡಿತು. 2017ರ ಚುನಾ ವಣೆಯಲ್ಲಿ ಅತೀ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದ್ದ ಕಾಂಗ್ರೆಸ್‌ನಲ್ಲಿ ಈಗ ಕೇವಲ 5 ಶಾಸಕರು ಉಳಿದಿದ್ದಾರೆ. 40 ಸದಸ್ಯರ ವಿಧಾನಸಭೆಯಲ್ಲಿ ಈಗ ಬಿಜೆಪಿ ಸ್ಪಷ್ಟ ಬಹುಮತ ಪಡೆದಿದ್ದು, ಸದಸ್ಯ ಬಲ 27ಕ್ಕೆ ಏರಿಕೆಯಾಗಿದೆ.

ಕಾಂಗ್ರೆಸ್‌ ಶಾಸಕರು ತಮ್ಮ ಕ್ಷೇತ್ರದ ಅಭಿವೃದ್ಧಿಗಾಗಿ ಬಿಜೆಪಿ ಸೇರಿದ್ದಾರೆ. ಯಾವುದೇ ಷರತ್ತನ್ನು ವಿಧಿಸಿಲ್ಲ. ಸ್ವಯಂ ಪ್ರೇರಿತವಾಗಿ ಸೇರ್ಪಡೆಗೊಂಡಿದ್ದಾರೆ ಎಂದು ಗೋವಾ ಸಿಎಂ ಪ್ರಮೋದ್‌ ಸಾವಂತ್‌ ಹೇಳಿದ್ದಾರೆ.

·  ವಿಪಕ್ಷ ನಾಯಕ ಕವಲೇಕರ್‌ ಸಹಿತ 10 ಶಾಸಕರು ಬಿಜೆಪಿಗೆ

·  ಈಗ ಕಾಂಗ್ರೆಸ್‌ನಲ್ಲಿ ಉಳಿದಿರುವುದು ಐವರು ಶಾಸಕರು ಮಾತ್ರ


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ