ಪಂಜಾಬ್‌ ಚುನಾವಣೆಯನ್ನು ಗೆದ್ದರೂ ಕೇಜ್ರಿ ದಿಲ್ಲಿಯಲ್ಲೇ: ಆಪ್‌ ವರಸೆ

Team Udayavani, Jan 11, 2017, 11:13 AM IST

ಹೊಸದಿಲ್ಲಿ : ಪಂಜಾಬ್‌ ವಿಧಾನಸಭಾ ಚುನಾವಣೆಯನ್ನು ಆಮ್‌ ಆದ್ಮಿ ಪಕ್ಷ ಗೆದ್ದರೂ ಅರವಿಂದ ಕೇಜ್ರಿವಾಲ್‌ ದಿಲ್ಲಿ ಮುಖ್ಯಮಂತ್ರಿಯಾಗಿಯೇ ಮುಂದುವರಿಯುತ್ತಾರೆ ಎಂದು ಪಕ್ಷವು ಹೇಳಿದೆ.

ಆಮ್‌ ಆದ್ಮಿ ಪಕ್ಷದ ಪಂಜಾಬ್‌ ನಡೆಯನ್ನು ವಿಪಕ್ಷಗಳು ತೀವ್ರವಾಗಿ ಟೀಕಿಸಿದ ಬಳಿಕ ಪಂಜಾಬ್‌ ಚುನಾವಣೆಯನ್ನು ಆಪ್‌ ಗೆದ್ದಲ್ಲಿ ಅರವಿಂದ ಕೇಜ್ರಿವಾಲ್‌ ಅವರು ಪಂಜಾಬ್‌ ಮುಖ್ಯಮಂತ್ರಿಯಾಗುವರೆಂಬ ಸುಳಿವನ್ನು ನಿನ್ನೆಯಷ್ಟೇ ದಿಲ್ಲಿ ಉಪ ಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ನೀಡಿದ್ದರು. ಇದಕ್ಕೆ ಪ್ರತಿಪಕ್ಷಗಳು ಆಮ್‌ ಆದ್ಮಿ ಪಕ್ಷವನ್ನು ತೀವ್ರವಾಗಿ ಟೀಕಿಸಿದ್ದವು. 

“ಅರವಿಂದ ಕೇಜ್ರಿವಾಲ್‌ ಅವರು ಪಂಜಾಬ್‌ ಚುನಾವಣೆಯಲ್ಲಿ ಆಪ್‌ನ ಮುಖವಾಗಿರುತ್ತಾರೆ ಎಂದ ಮಾತ್ರಕ್ಕೆ ಅವರೇ ಪಂಜಾಬ್‌ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಅರ್ಥವಲ್ಲ. ಆಮ್‌ ಆದ್ಮಿ ಪಕ್ಷ ಪಂಜಾಬ್‌ ಚುನಾವಣೆಯನ್ನು ಗೆದ್ದರೂ ಕೇಜ್ರಿವಾಲ್‌ ಅವರು ದಿಲ್ಲಿ ಮುಖ್ಯಮಂತ್ರಿಯಾಗಿಯೇ ಮುಂದುವರಿಯಲಿದ್ದಾರೆ’ ಎಂದು ಪಕ್ಷದ ನಾಯಕ ಆತಿಶಿ ಮರಿಯಾನಾ ಹೇಳಿದ್ದಾರೆ. 


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ನೆಲ್ಲೂರು: ಬಾಹ್ಯಾಕಾಶ ಸಂಶೋಧನ ಸಂಸ್ಥೆ ಇಸ್ರೋ ಪಿಎಸ್‌ಎಲ್‌ವಿ ಸಿ 46 ಉಪಗ್ರಹ ಉಡಾವಣೆಯನ್ನು ಇಂದು ಬುಧವಾರ ಆಂಧ್ರ ಪ್ರದೇಶದ ಶ್ರೀಹರಿಕೋಟದಿಂದ ಯಶಸ್ವಿಯಾಗಿ...

  • ನರೇಗಲ್ಲ: ಬರಗಾಲ ಹಿನ್ನೆಲೆಯಲ್ಲಿ ಸರಕಾರ ಅಲ್ಲಲ್ಲಿ ಮೇವು ಬ್ಯಾಂಕ್‌ ಸ್ಥಾಪಿಸಿದೆ. ಆದರೆ ಅಲ್ಲಿರುವ ಮೇವು ಖರೀದಿಸಲು ರೈತರು ಹಿಂದೇಟು ಹಾಕುತ್ತಿದ್ದು, ಬ್ಯಾಂಕ್‌ನಲ್ಲಿ...

  • ಚಿತ್ರದುರ್ಗ: ಹಾದಿ ಬೀದಿಯಲ್ಲಿನ ಚಿಂದಿ, ಪ್ಲಾಸ್ಟಿಕ್‌ ಮತ್ತಿತರ ಘನ ತ್ಯಾಜ್ಯ ವಸ್ತುಗಳನ್ನು ಆಯುವ ಮೂಲಕ ಪರಿಸರಕ್ಕೆ ತಮಗೆ ಅರಿವಿಲ್ಲದಂತೆ ಅಪಾರ ಕೊಡುಗೆ...

  • ಚಿತ್ರದುರ್ಗ: ಲೋಕಸಭೆ ಚುನಾವಣೆಯ ಮತ ಎಣಿಕೆ ಕಾರ್ಯ ನಗರದ ಸರ್ಕಾರಿ ವಿಜ್ಞಾನ ಕಾಲೇಜಿನ ನೂತನ ಕಟ್ಟಡದಲ್ಲಿ ಮೇ 23 ರಂದು ಬೆಳಿಗ್ಗೆ 8 ಗಂಟೆಗೆ ಪ್ರಾರಂಭವಾಗಲಿದ್ದು,...

  • ಚಿಕ್ಕಮಗಳೂರು: ವಿಶಾಲ ದೃಷ್ಟಿಕೋನದೊಂದಿಗೆ ಭಾರತದ ಸಾರ್ವಭೌಮತ್ವದ ಮಹತ್ವವನ್ನು ಜಗತ್ತಿಗೆ ಸಾರಿ ಹೇಳುವ ಉದ್ದೇಶದೊಂದಿಗೆ ಸಂವಿಧಾನ ರಚನೆ ಮೂಲಕ ಎಲ್ಲಾ ವರ್ಗದ...

  • ಚಿಕ್ಕಮಗಳೂರು: ಅಡುಗೆ ಅನಿಲವನ್ನು ಸರಿಯಾಗಿ ಪೂರೈಕೆ ಮಾಡದಿರುವುದನ್ನು ಖಂಡಿಸಿ ಮಂಗಳವಾರ ಬೆಳಗ್ಗೆ ಗ್ರಾಹಕರು ಅಡುಗೆ ಅನಿಲ ಸಿಲಿಂಡರ್‌ಗಳನ್ನು ಜಿಲ್ಲಾಧಿಕಾರಿ...