ಹುರಿಯತ್ಗೆ ಬೆದರಿಕೆ ಹಾಕಿ ದೂರ ಸರಿದ ಹಿಜ್ಬುಲ್ ಕಮಾಂಡರ್ ಮೂಸಾ
Team Udayavani, May 13, 2017, 5:16 PM IST
ಜಮ್ಮು : “ಇಸ್ಲಾಂ ಗಾಗಿ ನಾವು ನಡೆಸುತ್ತಿರುವ ಹೋರಾಟದಲ್ಲಿ ನೀವು ತಲೆ ಹಾಕಿದರೆ ನಿಮ್ಮ ತಲೆ ಕಡಿದು ಲಾಲ್ ಚೌಕದಲ್ಲಿ ನೇತು ಹಾಕುತ್ತೇನೆ’ ಎಂದು ಹುರಿಯತ್ ನಾಯಕರಿಗೆ ಆಡಿಯೋ ಟೇಪ್ ಬೆದರಿಕೆ ಹಾಕಿದ ಒಂದು ದಿನದ ತರುವಾಯ ಹಿಜ್ಬುಲ್ ಮುಜಾಹಿದೀನ್ ಕಮಾಂಡರ್ ಝಾಕೀರ್ ಮೂಸಾ ಇಂದು ಶನಿವಾರ ಹೊಸ ವಿಡಿಯೋ ಬಿಡುಗಡೆ ಮಾಡಿ “ನಾನು ಹಿಜ್ಬುಲ್ ಸಂಘಟನೆಯಲ್ಲಿ ಇಲ್ಲ’ ಎಂದು ಸಾರಿದ್ದಾನೆ.
“ಹಿಜ್ಬುಲ್ ನನ್ನನ್ನು ಓರ್ವ ಸದಸ್ಯನೆಂದು ಪರಿಗಣಿಸದಿದ್ದರೆ ನಾನು ಅದನ್ನು ಪ್ರತಿನಿಧಿಸುವುದಿಲ್ಲ ಎಂದು ಹೇಳಬಯಸುತ್ತೇನೆ’ ಎಂಬುದಾಗಿ ಮೂಸಾ ಹೇಳಿದ್ದಾನೆ. ಆದರೆ ತನ್ನ ಈ ಹಿಂದಿನ ಆಡಿಯೋ ಟೇಪ್ ಸಂದೇಶದಲ್ಲಿ “ಹುರಿಯತ್ ನಾಯಕರ ತಲೆ ಕಡಿದು ಲಾಲ್ ಚೌಕದಲ್ಲಿ ನೇತು ಹಾಕುವ’ ತನ್ನ ನಿಲುವಿಗೆ ತಾನು ಬದ್ಧನಾಗಿದ್ದೇನೆ ಎಂದು ಮತ್ತೂಮ್ಮೆ ಗುಡುಗಿದ್ದಾನೆ.
ನಿನ್ನೆ ಮೂಸಾ ಬಿಡುಗಡೆ ಮಾಡಿದ್ದ ಆಡಿಯೋ ಟೇಪ್ ಸಂದೇಶ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆದ ಬಳಿಕ ಹಿಜ್ಬುಲ್ ಮುಜಾಹಿದೀನ್ ವಕ್ತಾರ ಸಲೀಂ ಹಶ್ಮೀ ಹೇಳಿಕೆಯೊಂದು ಬಿಡುಗಡೆ ಮಾಡಿ, “ಮೂಸಾ ಹೇಳಿಕೆಗೂ ಹಿಜ್ಬುಲ್ ಸಂಘಟನೆಗೂ ಯಾವುದೇ ಸಂಬಂಧವಿಲ್ಲ; ಮೇಲಾಗಿ ಆತನ ಹೇಳಿಕೆ ನಮಗೆ ಸ್ವೀಕಾರಾರ್ಹವಾದುದಲ್ಲ; ಅದು ಕೇವಲ ಆತನ ವೈಯಕ್ತಿಕ ಅಭಿಪ್ರಾಯ; ಆ ರೀತಿಯ ಯಾವುದೇ ಹೇಳಿಕೆ ಅಥವಾ ಕ್ರಮದಿಂದ ಉಂಟಾಗುವ ಗೊಂದಲವು ನಮ್ಮ ಹೋರಾಟಕ್ಕೆ ಮರಣಗಂಟೆಯಾದೀತು’ ಎಂದು ಹೇಳಿದ್ದ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Doordarshan; ವ್ಯಾಪಕ ಟೀಕೆಗೆ ಕಾರಣವಾದ ಡಿಡಿ ನ್ಯೂಸ್ ಹೊಸ ಲೋಗೋ
ಅಂಡಾಶಯದ ಕ್ಯಾನ್ಸರ್ ನಿಂದ 30 ರ ಹರೆಯದಲ್ಲಿ ಖ್ಯಾತ ಫ್ಯಾಷನ್ ಇನ್ ಫ್ಲುಯೆನ್ಸರ್ ನಿಧನ
Lok Sabha Election 2024: ಝಾರ್ಖಂಡ್, ಛತ್ತೀಸ್ಗಢದಲ್ಲಿ ಗೆಲುವು ಯಾರಿಗೆ?
ಗ್ಯಾಂಗ್ ಸ್ಟರ್ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್ ಮನೆಯಿಂದ ಕ್ಯಾಬ್ ಬುಕ್: ಯುವಕ ಅರೆಸ್ಟ್
Snake: 50 ಅಡಿ ಉದ್ದದ ದೈತ್ಯ ಹಾವು “ವಾಸುಕಿ’!
MUST WATCH
ಹೊಸ ಸೇರ್ಪಡೆ
ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್
Love Jihad ಹೆಸರಲ್ಲಿ ಒಂದು ಗುಂಪಿಗೆ ತರಬೇತಿ: ಜಗದೀಶ್ ಶೆಟ್ಟರ್ ಗಂಭೀರ ಆರೋಪ
Ramnagar: ಜಿಲ್ಲೆಯಲ್ಲಿ 25 ಕೋಟಿ ರೂ. ಅಕ್ರಮ ವಸ್ತು ಪತ್ತೆ
Department of Health: ಜನರಿಗೆ ಅರಿವಿನ ಟಾನಿಕ್ ನೀಡುತ್ತಿರುವ ಆರೋಗ್ಯ ಇಲಾಖೆ
Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ