ಅಪರಿಚಿತ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದ 10ನೇ ತರಗತಿ ಬಾಲಕಿಯ ಸಾವು
Team Udayavani, Dec 20, 2018, 12:22 PM IST
ಹೊಸದಿಲ್ಲಿ : ಬೈಕ್ನಲ್ಲಿ ಬಂದಿದ್ದ ಅಪರಿಚಿತ ದುಷ್ಕರ್ಮಿಗಳಿಬ್ಬರು ಎರಡು ದಿನಗಳ ಹಿಂದೆ ನಡು ರಸ್ತೆಯಲ್ಲಿ ತಡೆದು ನಿಲ್ಲಿಸಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ ಆಗ್ರಾ ಶಾಲೆಯ ಹತ್ತನೇ ತರಗತಿಯ15ರ ಬಾಲಕಿ ಇಲ್ಲಿನ ಸಫ್ದರ್ ಜಂಗ್ ಆಸ್ಪತ್ರೆಯಲ್ಲಿ ಇಂದು ಗುರುವಾರ ಕೊನೆಯುಸಿರೆಳೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಈ ಬಾಲಕಿಯನ್ನು ಅಪರಿಚಿತ ದುಷ್ಕರ್ಮಿಗಳು ಯಾಕಾಗಿ ಕೊಂದರು ಎಂಬುದು ಇನ್ನೂ ಗೊತ್ತಾಗಿಲ್ಲ. ಮಾತ್ರವಲ್ಲ ಅಪರಿಚಿತ ದುಷ್ಕರ್ಮಿಗಳನ್ನು ಸೆರೆ ಹಿಡಿಯುವ ಪೊಲೀಸರ ಯತ್ನವೂ ಈ ವರೆಗೆ ಫಲ ಕಂಡಿಲ್ಲ ಎಂದು ವರದಿಗಳು ತಿಳಿಸಿವೆ.