ಚುನಾವಣ ಪಡೆಯಿಂದ 21 ಟನ್ ಈರುಳ್ಳಿ ವಶ
Team Udayavani, Dec 23, 2019, 1:23 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಚೆನ್ನೈ: ಇದೇ 27ರಂದು ತಮಿಳುನಾಡಿನಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಗಳು ನಡೆಯಲಿದ್ದು, ಭಾನುವಾರ ಚುನಾವಣ ವಿಚಕ್ಷಣಾ ದಳ ನಡೆಸಿದ ಕಾರ್ಯಾಚರಣೆ ವೇಳೆ ವಾಹನವೊಂದರಲ್ಲಿ ಸಾಗಿಸಲಾಗುತ್ತಿದ್ದ 21 ಟನ್ ಈರುಳ್ಳಿಯನ್ನು ವಶಪಡಿಸಿಕೊಳ್ಳಲಾಗಿದೆ.
ಮಹಾರಾಷ್ಟ್ರದಿಂದ ಈರುಳ್ಳಿ ತರಲಾಗುತ್ತಿತ್ತು. ಚಾಲಕ ಪೂರಕ ದಾಖಲೆ ನೀಡಲು ವಿಫಲವಾದ ಕಾರಣ ಜಪ್ತಿ ಮಾಡಲಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.