ಹಕ್ಕಿ ಢಿಕ್ಕಿ:ಏರ್ ಅರೇಬಿಯಾ ವಿಮಾನ ಲಕ್ನೋದಲ್ಲಿ ತುರ್ತು ಲ್ಯಾಂಡಿಂಗ್
Team Udayavani, Mar 25, 2017, 7:50 PM IST
ಲಕ್ನೋ : 182 ಪ್ರಯಾಣಿಕರು ಮತ್ತು ಚಾಲಕ ಸಿಬಂದಿಗಳನ್ನು ಒಳಗೊಂಡು ಕಾಠ್ಮಂಡುವಿನಿಂದ ಶಾರ್ಜಾಗೆ ಹೋಗುತ್ತಿದ್ದ ಏರ್ ಅರೇಬಿಯ ವಿಮಾನಕ್ಕೆ ಹಕ್ಕಿ ಢಿಕ್ಕಿ ಹೊಡೆದ ಪರಿಣಾಮವಾಗಿ ಅದು ಲಕ್ನೋ ವಿಮಾನ ನಿಲ್ದಾಣದಲ್ಲಿ ತುರ್ತು ಅವತರಣ ನಡೆಸಿರುವುದು ವರದಿಯಾಗಿದೆ.
ತುರ್ತು ಲ್ಯಾಂಡಿಂಗ್ ಮಾಡಿದ ಹೊರತಾಗಿಯೂ ಎಲ್ಲ ವಿಮಾನ ಪ್ರಯಾಣಿಕರು ಸುರಕ್ಷಿತರಿದ್ದಾರೆ ಎಂದು ವಿಮಾನಯಾನ ಸಂಸ್ಥೆ ಹೇಳಿದೆ.
ಹಕ್ಕಿ ಹೊಡೆತಕ್ಕೆ ಗುರಿಯಾದ ಕಾರಣ ವಿಮಾನದ ಇಂಜಿನ್ನ ಕೆಲವು ಬ್ಲೇಡ್ಗಳು ಹಾನಿಗೀಡಾಗಿದ್ದು ವಿಮಾನದ ತಾತ್ಕಾಲಿಕ ನಿಲುಗಡೆ ಅನಿವಾರ್ಯವಾಯಿತೆಂದು ವಿಮಾನಯಾನ ಸಂಸ್ಥೆ ಹೇಳಿದೆ.
ವಿಮಾನದ ಎಲ್ಲ ಪ್ರಯಾಣಿಕರಿಗೆ ಹೊಟೇಲ್ ವಾಸ್ತವ್ಯ ಕಲ್ಪಿಸಲಾಗಿದೆ. ಏರ್ಬಸ್ ಎ320 ಈಗ ದುರಸ್ತಿಗೆ ಒಳಪಟ್ಟಿದೆ. ಆದರೆ ಸದ್ಯಕ್ಕಂತೂ ಅದು ಹಾರಾಟಕ್ಕೆ ಅರ್ಹವಾಗುವ ಸಾಧ್ಯತೆಗಳಿಲ್ಲ ಎಂದು ಸಂಸ್ಥೆಯು ಹೇಳಿದೆ.