ವಿಮಾನಗಳಲ್ಲಿ ಹಿಂದಿ ಪತ್ರಿಕೆ, ಮ್ಯಾಗಜಿನ್ ಇರಲೇಬೇಕು!
Team Udayavani, Jul 27, 2017, 7:15 AM IST
ಹೊಸದಿಲ್ಲಿ: ಕರ್ನಾಟಕ ಸಹಿತ ದಕ್ಷಿಣ ಭಾರತದಲ್ಲಿ ಆಯಾ ರಾಜ್ಯ ಭಾಷೆಗಳ ಮೇಲೆ ಹಿಂದಿ ಹೇರಿಕೆ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿರುವಂತೆಯೇ ಏರ್ ಇಂಡಿಯಾ ಮತ್ತು ಇತರ ವಿಮಾನ ಸಂಸ್ಥೆಗಳಲ್ಲಿ ಹಿಂದಿ ಪತ್ರಿಕೆ ಮತ್ತು ಇತರ ಮ್ಯಾಗಜಿನ್ಗಳು ಕಡ್ಡಾಯವಾಗಿ ಲಭ್ಯವಿರಬೇಕು ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯ ಸೂಚಿಸಿದೆ. ಪ್ರಯಾಣದ ಅವಧಿಯಲ್ಲಿ ಪ್ರಯಾಣಿಕರು ಹಿಂದಿ ಮತ್ತು ಇಂಗ್ಲಿಷ್ ಎರಡೂ ಭಾಷೆಗಳ ಪತ್ರಿಕೆ, ಮ್ಯಾಗಜಿನ್ಗಳನ್ನು ಓದಲು ಅನುಕೂಲವಾಗಲಿ ಎಂಬ ಕಾರಣದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಡಿಜಿಸಿಎಯ ಜಂಟಿ ಮಹಾನಿರ್ದೇಶಕ ಲಲಿತ್ ಗುಪ್ತಾ ಹೇಳಿದ್ದಾರೆ.
ಇದು ಕಡ್ಡಾಯ ನಿರ್ದೇಶನವಾಗಿದ್ದು, ತಪ್ಪಿದಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆಯನ್ನೂ ನೀಡಿದ್ದಾರೆ. ಈ ಕ್ರಮದ ವಿರುದ್ಧ ಹರಿಹಾಯ್ದ ಕಾಂಗ್ರೆಸ್ ಸಂಸದ ಶಶಿ ತರೂರ್, ಜತೆಗೆ ಸಸ್ಯಾಹಾರಿ ಊಟವೂ ಲಭ್ಯವೇ ಎಂದು ವ್ಯಂಗವಾಡಿದ್ದಾರೆ. ಇನ್ನು ವಿಮಾನಗಳಲ್ಲಿ ಹಿಂದಿ ಭಾಷೆಯ ಮ್ಯಾಗಜಿನ್ಗಳು, ಪತ್ರಿಕೆಗಳು ಸಿಗುತ್ತವೆ ಎಂದು ಟ್ವೀಟ್ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು
Lok Sabha 1 Phase: ನಿತಿನ್ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…
Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ