ಶಿರೋಮಣಿ ಅಕಾಲಿದಳ ಮುಖಂಡನಿಗೆ ಗುಂಡಿಕ್ಕಿ ಹತ್ಯೆ: ಎರಡೂ ಕಾಲು ಕತ್ತರಿಸಿ ಸೇಡು ತೀರಿಸಿಕೊಂಡರು

Team Udayavani, Nov 19, 2019, 6:18 PM IST

ನವದೆಹಲಿ:ಶಿರೋಮಣಿ ಅಕಾಲಿ ದಳದ ಮುಖಂಡನನ್ನು ಗುಂಡಿಕ್ಕಿ ಹತ್ಯೆಗೈದ ಬಳಿಕ ಕಾಲುಗಳನ್ನು ಕತ್ತರಿಸಿ ಹಾಕಿರುವ ಬರ್ಬರ ಘಟನೆ ಪಂಜಾಬ್ ನ ಗುರುದಾಸ್ ಪುರ್ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

51 ವರ್ಷದ ದಲ್ಬೀರ್ ಸಿಂಗ್ ಧಿಲ್ವಾನ್ ಹತ್ಯೆಯ ಹಿಂದೆ ರಾಜಕೀಯ ಇದೆ ಎಂಬ ಆರೋಪವನ್ನು ಬಾಟ್ಲಾ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಓಪಿಂದರ್ ಜಿತ್ ಸಿಂಗ್ ಗುಮಾನ್ ತಳ್ಳಿಹಾಕಿದ್ದಾರೆ. ನೆರೆಮನೆಯವರ ಜತೆಗಿನ ವ್ಯಾಜ್ಯವೇ ಈ ಕೊಲೆಗೆ ಕಾರಣ ಎಂದು ಹೇಳಿರುವುದಾಗಿ ವರದಿ ವಿವರಿಸಿದೆ.

ದಲ್ಬೀರ್ ಗುರುದಾಸ್ ಪುರ್ ಶಾಖೆಯ ಶಿರೋಮಣಿ ಅಕಾಲಿ ದಳದ  ಉಪಾಧ್ಯಕ್ಷರಾಗಿದ್ದರು. ಅಲ್ಲದೇ ಎರಡು ಬಾರಿ ಪಂಚಾಯತ್ ಅಧ್ಯಕ್ಷರಾಗಿದ್ದರು. ಈ ಘಟನೆ ಸೋಮವಾರ ಸಂಜೆ ಡೇರಾ ಬಾಬಾ ನಾನಕ್ ಪ್ರದೇಶದ ಧಿಲ್ವಾನ್ ಗ್ರಾಮದಲ್ಲಿ ನಡೆದಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಕೂಲಿಯೊಬ್ಬನನ್ನು ಗೊತ್ತುಪಡಿಸಿಕೊಳ್ಳುವ ವಿಚಾರದಲ್ಲಿ ದಲ್ಬೀರ್ ಸಿಂಗ್ ಮತ್ತು ನೆರೆ ಮನೆಯ ಬಲ್ವಿಂದರ್ ಸಿಂಗ್ ನಡುವೆ ಮಾತಿನ ಚಕಮಕಿ ಆರಂಭವಾಗಿತ್ತು. ಏತನ್ಮಧ್ಯೆ ಸ್ಥಳೀಯರ ಮಧ್ಯಪ್ರವೇಶದಿಂದ ಇಬ್ಬರ ನಡುವೆ ರಾಜಿ ಸಂಧಾನ ಮಾಡಿಸಿದ್ದರು.

ಸೋಮವಾರ ಸಂಜೆ ದಲ್ಬೀರ್ ಸಿಂಗ್ ಮತ್ತು ಆತನ ಇಬ್ಬರ ಮಕ್ಕಳ ಜತೆ ಗ್ರಾಮದ ಹೊರಭಾಗದಲ್ಲಿ ತಿರುಗಾಟಕ್ಕೆ ಹೋಗಿದ್ದ ಸಂದರ್ಭದಲ್ಲಿ ಬಲ್ವಿಂದರ್ ಸಿಂಗ್ ನ ಇಬ್ಬರು ಮಕ್ಕಳಾದ ಮಜೋರ್ ಸಿಂಗ್ (25ವರ್ಷ) ಮತ್ತು ಮನ್ ದೀಪ್ ಸಿಂಗ್ (24ವರ್ಷ) ದಾರಿಯಲ್ಲಿ ಅಡ್ಡಗಟ್ಟಿದ್ದರು. ನಂತರ ದಲ್ಬೀರ್ ಸಿಂಗ್ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಇದಾದ ನಂತರ ಬಲ್ವಿಂದರ್ ಸಿಂಗ್, ದಲ್ಬೀರ್ ಸಿಂಗ್ ನ ಕಾಲುಗಳನ್ನು ಕತ್ತರಿಸಿಹಾಕಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಆರೋಪಿಗಳು ತಲೆಮರೆಸಿಕೊಂಡಿದ್ದು, ಬಂಧನಕ್ಕಾಗಿ ವಿಶೇಷ ಪೊಲೀಸ್ ತಂಡ ರಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ