ಪೂರ್ವ ದಿಲ್ಲಿಯಲ್ಲಿ ಶಂಕಿತ ಅಲ್‌ ಕಾಯಿದಾ ಉಗ್ರ ಸೆರೆ

Team Udayavani, Sep 18, 2017, 3:04 PM IST

ಹೊಸದಿಲ್ಲಿ : ಶಂಕಿತ ಅಲ್‌ ಕಾಯಿದಾ ಉಗ್ರನೋರ್ವನನ್ನು  ಪೂರ್ವ ದಿಲ್ಲಿಯಲ್ಲಿ ಬಂಧಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.

ಶಂಕಿತ ಅಲ್‌ ಕಾಯಿದಾ ಉಗ್ರ, 27ರ ಹರೆಯದ ಶೌಮನ್‌ ಹಕ್‌ ಎಂಬಾತನನ್ನು ಪೂರ್ವ ದಿಲ್ಲಿಯ ವಿಕಾಸ್‌ ಮಾರ್ಗ್‌ನಲ್ಲಿ  ಖಚಿತ ಸುಳಿವಿನ ಮೇರೆಗೆ ದಿಲ್ಲಿ ಪೊಲೀಸ್‌ ವಿಶೇಷ ದಳದವರು ನಿನ್ನೆ ಭಾನುವಾರ ಬಂಧಿಸಿದರು ಎಂದು ಅಧಿಕಾರಿ ತಿಳಿಸಿದ್ದಾರೆ. 

ಹಕ್‌ನನ್ನು ಪ್ರಶ್ನಿಸಲಾಗುತ್ತಿದ್ದು ಆತನಿಂದ ಹೆಚ್ಚಿನ ಮಾಹಿತಿ ಹೊರಬರುವುದನ್ನು ನಿರೀಕ್ಷಿಸಲಾಗಿದೆ. 

ಕಳೆದ ತಿಂಗಳಲ್ಲಿ ಅಲ್‌ ಕಾಯಿದಾ ಜತೆಗೆ ನಂಟು ಇರುವ ಇಬ್ಬರು ಶಂಕಿತರನ್ನು ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಬಂಧಿಸಲಾಗಿತ್ತು. 

ಕಳೆದ ಆಗಸ್ಟ್‌ 9ರಂದು ಸೌದಿ ಅರೇಬಿಯಾದಿಂದ ಗಡೀಪಾರು ಮಾಡಲ್ಪಟ್ಟಿದ್ದ  29ರ ಹರೆಯದ ಸಯ್ಯದ್‌ ಮೊಹಮ್ಮದ್‌ ಜೀಶನ್‌ ಅಲಿ ಎಂಬಾತನನ್ನು ವಿಶೇಷ ದಳದವರು ಬಂಧಿಸಿದ್ದರು. 

ಆ.1ರಂದು 25ರ ಹರೆಯದ ರಜಾ ಉಲ್‌ ಅಹ್ಮದ್‌ ಎಂಬಾತನನ್ನು ಖಚಿತ ಮಾಹಿತಿಯ ಮೇರೆಗೆ ಪಶ್ಚಿಮ ಬಂಗಾಲ ಪೊಲೀಸರು ಸೆರೆ ಹಿಡಿದಿದ್ದರು.  

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ