ಭಾರತೀಯ ರಕ್ಷಣಾ ಸೌಕರ್ಯಗಳ ಮೇಲೆ ಚೀನ ರಹಸ್ಯ ಸೇನೆಯ ಸೈಬರ್ ದಾಳಿ ?
Team Udayavani, Nov 8, 2018, 3:51 PM IST
ಹೊಸದಿಲ್ಲಿ : ಚೀನದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಇದರ ರಹಸ್ಯ ಸೇನಾ ಘಟಕ ಸಂಖ್ಯೆ 61398, ಭಾರತದ ಅತ್ಯಂತ ಪ್ರಮುಖ ಹಾಗೂ ಮಹತ್ವದ ರಕ್ಷಣಾ ಸೌಕರ್ಯಗಳ ಮೇಲೆ ಸೈಬರ್ ಸಮರ ಹೂಡುವ ಸಾಧ್ಯತೆ ಇದೆ ಎಂದು ಭಾರತೀಯ ಗುಪ್ತಚರ ದಳ ಎಚ್ಚರಿಸಿದೆ.
ಚೀನದ ಈ ರಹಸ್ಯ ಸೇನಾ ದಳವು ಸೈಬರ್ ಸಮರಕ್ಕೆ ಕುಪ್ರಸಿದ್ಧವಾಗಿದ್ದು ಅದರ ಕಾಕದೃಷ್ಟಿಗೆ ಈಗ ಭಾರತದ ಸೇನಾ ಸೌಕರ್ಯಗಳು ಗುರಿಯಾಗಿರುವುದಾಗಿ ಗುಪ್ತಚರ ದಳ ಮಾಹಿತಿ ನೀಡಿದೆ.
ಭಾರತೀಯ ಗುಪ್ತಚರ ದಳವು ಚೀನ ಸೇನೆಯ ರಹಸ್ಯ ಘಟಕದ ಈ ಹುನ್ನಾರವನ್ನು ಸೈಬರ್ ಸ್ಪೇಸ್, ಇಂಟರ್ ಸೆಪ್‌ಶನ್ ಮತ್ತು ವಿಶ್ವಾದ್ಯಂತದ ಡಿಜಿಟಲ್ ಕಮ್ಯುನಿಕೇಶನ್ ಸಂಕೇತಗಳನ್ನು ಬಿಡಿಸುವ ಮೂಲಕ ಬಯಲಿಗೆಳೆದಿದೆ ಎಂದು ವರದಿಗಳು ತಿಳಿಸಿವೆ.
ಚೀನದ ರಹಸ್ಯ ಸೇನಾ ಘಟಕವು ಭಾರತೀಯ ಸೇನಾ ಸೌಕರ್ಯಗಳ ಮೇಲೆ ಸೈಬರ್ ಸಮರ ಎಸಗುವುದಕ್ಕಾಗಿ ಐಸ್ ಬ್ಯಾಗ್, ಹಿಡನ್ ಲೈನಕ್ಸ್ ಮತ್ತು ಎಪಿಟಿ ಮಾತ್ರವಲ್ಲದೆ, ವಿಭಿನ್ನ ಬಗೆಯ ಟ್ರೋಜಾನ್ ಮಾಲ್-ವೇರ್‌ಗಳನ್ನು ಬಳಸಿಕೊಳ್ಳಲಿದೆ ಎಂಬ ಎಚ್ಚರಿಕೆಯನ್ನು ಭಾರತೀಯ ಗುಪ್ತಚರ ದಳ ನೀಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Doordarshan; ವ್ಯಾಪಕ ಟೀಕೆಗೆ ಕಾರಣವಾದ ಡಿಡಿ ನ್ಯೂಸ್ ಹೊಸ ಲೋಗೋ
ಅಂಡಾಶಯದ ಕ್ಯಾನ್ಸರ್ ನಿಂದ 30 ರ ಹರೆಯದಲ್ಲಿ ಖ್ಯಾತ ಫ್ಯಾಷನ್ ಇನ್ ಫ್ಲುಯೆನ್ಸರ್ ನಿಧನ
Lok Sabha Election 2024: ಝಾರ್ಖಂಡ್, ಛತ್ತೀಸ್ಗಢದಲ್ಲಿ ಗೆಲುವು ಯಾರಿಗೆ?
ಗ್ಯಾಂಗ್ ಸ್ಟರ್ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್ ಮನೆಯಿಂದ ಕ್ಯಾಬ್ ಬುಕ್: ಯುವಕ ಅರೆಸ್ಟ್
Snake: 50 ಅಡಿ ಉದ್ದದ ದೈತ್ಯ ಹಾವು “ವಾಸುಕಿ’!
MUST WATCH
ಹೊಸ ಸೇರ್ಪಡೆ
Dharwad; ಚುನಾವಣೆ ಕರ್ತವ್ಯದಲ್ಲಿದ್ದ ಸೆಕ್ಟರ್ ಅಧಿಕಾರಿ ಹೃದಯಾಘಾತದಿಂದ ಸಾವು
PM ಮೋದಿ ಸಾಗುತ್ತಿದ್ದ ವೇಳೆ ‘ಚೊಂಬು’ ತೋರಿಸಲೆತ್ನಿಸಿದ ಮೊಹಮ್ಮದ್ ನಲಪಾಡ್
Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ ಸಾವು
Udupi: ನಿಟ್ಟೂರಿನಲ್ಲಿ ಬಸ್ ಢಿಕ್ಕಿಯಾಗಿ ಬೈಕ್ ಸವಾರ ದಾರುಣ ಸಾವು
Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ