ಆಲೀಗಢ ಬಾಲಕಿ ಕೊಲೆ ಪ್ರಕರಣ: ಇನ್ನೂ ಇಬ್ಬರು ಅರೆಸ್ಟ್‌, ಬಂಧಿತರ ಸಂಖ್ಯೆ 4ಕ್ಕೆ

Team Udayavani, Jun 8, 2019, 7:14 PM IST

ಆಲೀಗಢ, ಉತ್ತರ ಪ್ರದೇಶ : ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿದ್ದ ಇಲ್ಲಿನ ಟಪ್ಪಲ್‌ ಪಟ್ಟಣದ ಎರಡೂವರೆ ವರ್ಷ ಪ್ರಾಯದ ಬಾಲಕಿಯ ಅಮಾನುಷ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಇಂದು ಇನ್ನೂ ಇಬ್ಬರನ್ನು ಬಂಧಿಸಿದರು.

ಇಬ್ಬರು ಬಂಧಿತರಲ್ಲಿ ಒಬ್ಬನು ಈಚಿನ ವರ್ಷಗಳಲ್ಲಿ ಮಕ್ಕಳನ್ನು ಗುರಿ ಇರಿಸಿ ಹಲವು ಲೈಂಗಿಕ ಅಪರಾಧ ಎಸಗಿದವನಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಳೆದ ಮಂಗಳವಾರ ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿತನಾಗಿದ್ದ ಝಾಹಿದ್‌ನ ಸಹೋದರ ಮತ್ತು ಪತ್ನಿಯಾಗಿರುವ ಶಗುಫ್ತಾ ಮತ್ತು ಮೆಹಂದಿ ಹಸನ್‌ ಇವರನ್ನು ವಿಶೇಷ ತನಿಖಾ ತಂಡದವರು ವಶಕ್ಕೆ ತೆಗೆದಕೊಂಡು ಅನಂತರ ಬಂಧಿಸಿದರು.

ಇದರೊಂದಿಗೆ ಟಪ್ಪಲ್‌ ಪಟ್ಟಣದಲ್ಲಿ ನಡೆದ ಬಾಲಕಿಯ ಅಮಾನುಷ ಕೊಲೆಗೆ ಸಂಬಂಧಿಸಿ ಈ ತನಕ ಬಂಧಿತರಾದವರ ಸಂಖ್ಯೆ ನಾಲ್ಕಕ್ಕೇರಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ