ಆಡಳಿತ-ವಿಪಕ್ಷದ ನಡುವೆ ಸ್ವಿಸ್‌ ವಾಗ್ವಾದ

Team Udayavani, Jun 30, 2018, 6:00 AM IST

ಹೊಸದಿಲ್ಲಿ: ಕೇಂದ್ರ ಸರಕಾರ ಕಪ್ಪುಹಣದ ವಿರುದ್ಧ ಕ್ರಮ ಕೈಗೊಂಡಿದ್ದರೂ ಸ್ವಿಟ್ಸರ್ಲಂಡ್‌ ಬ್ಯಾಂಕ್‌ಗಳಲ್ಲಿ ಭಾರತೀಯರ ಠೇವಣಿ ಪ್ರಮಾಣ ಏರಿಕೆಯಾಗಿದ್ದು, ಕೇಂದ್ರ ಸರಕಾರ ಹಾಗೂ ವಿಪಕ್ಷಗಳ ನಡುವಿನ ವಾಗ್ಯುದ್ಧಕ್ಕೆ ಕಾರಣವಾಗಿದೆ. ಸ್ವಿಟ್ಸರ್ಲಂಡ್‌ನಿಂದ ಕಪ್ಪು ಹಣಕ್ಕೆ ಸಂಬಂಧಿಸಿದ ಎಲ್ಲ ವಿವರಗಳನ್ನೂ ಪಡೆಯಲಾಗುತ್ತದೆ. 2018ರ ಜನವರಿ 1ರಿಂದ 2018 ಡಿಸೆಂಬರ್‌ ವರೆಗಿನ ಎಲ್ಲ ಮಾಹಿತಿಯೂ ನಮಗೆ ಸಿಗಲಿದೆ. ಈಗ ಸ್ವಿಸ್‌ ಬ್ಯಾಂಕ್‌ನಲ್ಲಿ ಭಾರತೀಯರು ಸಂಗ್ರಹಿಸಿದ ಹಣದ ಮೊತ್ತ 7 ಸಾವಿರ ಕೋಟಿಯಲ್ಲಿ ಎಲ್ಲವೂ ಕಪ್ಪು ಹಣ ಎಂದು ಭಾವಿಸಬೇಕಿಲ್ಲ ಎಂದೂ ಅವರು ಹೇಳಿದ್ದಾರೆ.

ಮನಮೋಹನ್‌ ಸಿಂಗ್‌ ಸರಕಾರವಿದ್ದಾಗ ಸ್ವಿಸ್‌ ಬ್ಯಾಂಕ್‌ನಲ್ಲಿನ ಠೇವಣಿ ಇಳಿಕೆಯಾಗು ತ್ತಿತ್ತು. ಈಗ ಏರಿಕೆಯಾಗಿದೆ. ಕಪ್ಪುಹಣ ವನ್ನು ವಾಪಸ್‌ ತರುವ ಮೋದಿ ಭರವಸೆ ಏನಾಯಿತು? ಸ್ವಿಸ್‌ ಬ್ಯಾಂಕ್‌ನಲ್ಲಿ ಕಪ್ಪುಹಣವಿಲ್ಲವೇ?
-ರಾಹುಲ್‌ ಗಾಂಧಿ, ಕಾಂಗ್ರೆಸ್‌ ಅಧ್ಯಕ್ಷ

ಭಾರತ ಹಾಗೂ ಸ್ವಿಟ್ಸರ್ಲಂಡ್‌ ಮಧ್ಯೆ ಹಣಕಾಸು ವಿವರ ಹಂಚಿಕೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಸ್ವಿಸ್‌ ಬ್ಯಾಂಕ್‌ಗಳಲ್ಲಿರುವ ಎಲ್ಲ ಮೊತ್ತವೂ ತೆರಿಗೆ ತಪ್ಪಿಸಿಕೊಂಡವರದ್ದು ಆಗಿರುವುದಿಲ್ಲ ಎಂಬುದು ಗೊತ್ತಿರಲಿ.
-ಅರುಣ್‌ ಜೇಟ್ಲಿ, ಹಣಕಾಸು ಸಚಿವ

ಈಗಾಗಲೇ ದೊಡ್ಡ ದೊಡ್ಡ ಉದ್ಯಮಿಗಳ ಕೋಟಿಗಟ್ಟಲೆ ಸಾಲವನ್ನು ಸರಕಾರ ಮನ್ನಾ ಮಾಡಿದೆ. ಸ್ವಿಸ್‌ ಬ್ಯಾಂಕ್‌ನಲ್ಲಿ ಭಾರತೀಯರ ಠೇವಣಿ ಹೆಚ್ಚಳವಾಗಿರುವುದರಲ್ಲಿ ಅಚ್ಚರಿ ಪಡುವಂಥದ್ದೇನೂ ಇಲ್ಲ.
- ಸೀತಾರಾಂ ಯೆಚೂರಿ, ಸಿಪಿಎಂ ಪ್ರಧಾನ ಕಾರ್ಯದರ್ಶಿ


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ