ಕರ್ನಾಟಕದಂತೆ ಸೀಟು ಹಂಚಿಕೆ ಅಸಾಂವಿಧಾನಿಕ: ಸುಪ್ರೀಂ ತೀರ್ಪು

Team Udayavani, Apr 5, 2018, 6:00 AM IST

ಹೊಸದಿಲ್ಲಿ: ವೈದ್ಯಕೀಯ, ದಂತ ವೈದ್ಯಕೀಯ ಸ್ನಾತಕೋತ್ತರ ಕೋರ್ಸ್‌ಗಳಿಗೆ ಕರ್ನಾಟಕ ಮೂಲದ ಆಧಾರದಲ್ಲಿ ಸೀಟು ನೀಡುವುದು ಅಸಾಂವಿಧಾನಿಕ ಎಂದು ಸುಪ್ರೀಂ ಕೋರ್ಟ್‌ ತೀರ್ಪು ನೀಡಿದೆ. ಇರುವ ಮಾಹಿತಿ ಪರಿಷ್ಕರಿಸಿ ಹೊಸದಾಗಿ ಪ್ರಕಟನೆ ಹೊರಡಿಸಬೇಕು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮತ್ತು ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯಕ್ಕೆ ನ್ಯಾಯಪೀಠ ಆದೇಶಿಸಿದೆ. ಈ ಬಗ್ಗೆ 2014ರಲ್ಲಿ ನೀಡಿದ್ದ ಇದೇ ಮಾದರಿಯ ತೀರ್ಪನ್ನು ನ್ಯಾಯಪೀಠ ಉಲ್ಲೇಖೀಸಿದೆ.

ಕರ್ನಾಟಕ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯ ಮತ್ತು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಕರ್ನಾಟಕ ಮೂಲ ಎಂಬ ಆಧಾರದಲ್ಲಿ ನೀಡುತ್ತಿರುವ ಆದ್ಯತೆ ವಿರೋಧಿಸಿ ಡಾ| ಕೃತಿ ಲಖೀನಾ ದೂರು ದಾಖಲಿಸಿದ್ದರು. 2018 ಮಾ.10ರಂದು ಹೊರಡಿಸಿರುವ ಅಧಿಸೂಚನೆಯ ಪ್ರಕಾರ ಹತ್ತು ವರ್ಷಗಳವರೆಗೆ ಕರ್ನಾಟಕದಲ್ಲಿ ವ್ಯಾಸಂಗ ಮಾಡಿದ್ದರೆ ಮಾತ್ರವೇ ಸ್ನಾತ ಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ಅರ್ಜಿ ಸಲ್ಲಿಸಲು ಅರ್ಹರಾಗುತ್ತಾರೆ ಎಂದು ಸೂಚಿಸಿತ್ತು. ವೈದ್ಯ ಪಿಜಿ ಪದವಿಗೆ ರಾಷ್ಟ್ರಮಟ್ಟದ ಅರ್ಹತಾ ಪರೀಕ್ಷೆಯಲ್ಲಿ ಒಟ್ಟು 44 ಮಂದಿ ಎಂಬಿಬಿಎಸ್‌, ಬಿಡಿಎಸ್‌ ಪದವೀಧರರು ತೇರ್ಗಡೆಯಾಗಿದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ