ಬಿಜೆಪಿ ಸೇರಿದ ಅಲ್ಪೇಶ್‌, ಬೆಂಗಾಲಿ ನಟಿಯರು

Team Udayavani, Jul 19, 2019, 5:00 AM IST

ನವದೆಹಲಿ: ಗುಜರಾತ್‌ ಮತ್ತು ಪಶ್ಚಿಮ ಬಂಗಾಳಗಳಲ್ಲಿ ರಾಜಕೀಯ ಮತ್ತು ಸಿನಿಮಾ ಕ್ಷೇತ್ರದ ಪ್ರಮುಖರು ಬಿಜೆಪಿ ಸೇರಿದ್ದಾರೆ. ಗಾಂಧಿನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಧನಪುರ ಕ್ಷೇತ್ರದ ಕಾಂಗ್ರೆಸ್‌ ಮಾಜಿ ಶಾಸಕ ಅಲ್ಪೇಶ್‌ ಠಾಕೂರ್‌ ಮತ್ತು ಬಯಾಡ್‌ ಕ್ಷೇತ್ರದ ಮಾಜಿ ಶಾಸಕ ಧವಳ ಸಿಂಗ್‌ ಝಾಲಾ ಗುಜರಾತ್‌ ಬಿಜೆಪಿ ಅಧ್ಯಕ್ಷ ಜಿತು ವಘಾನಿ ಸಮ್ಮುಖದಲ್ಲಿ ಪಕ್ಷ ಸೇರ್ಪಡೆಯಾಗಿದ್ದಾರೆ.

ಅಲ್ಪೇಶ್‌ ಲೋಕಸಭೆ ಚುನಾವಣೆಗೆ ಮೊದಲು ಕಾಂಗ್ರೆಸ್‌ನ ಎಲ್ಲ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದರು. ಜು.5ರಂದು ರಾಜ್ಯಸಭೆ ಚುನಾವಣೆ ನಡೆಯಲಿರು ವಂತೆಯೇ ಇಬ್ಬರು ನಾಯಕರು ಪಕ್ಷ ತೊರೆದಿದ್ದರು. 182 ಸದಸ್ಯರಿರುವ ಗುಜರಾತ್‌ ವಿಧಾನಸಭೆಯಲ್ಲಿ ಬಿಜೆಪಿ 104, ಕಾಂಗ್ರೆಸ್‌ 71 ಸದಸ್ಯರನ್ನು ಹೊಂದಿದೆ.

ಪ.ಬಂಗಾಳದಲ್ಲಿ ಕೇಸರಿ ಪಕ್ಷಕ್ಕೆ ತಾರಾ ಮೆರುಗು
ಪಶ್ಚಿಮ ಬಂಗಾಳದ ನಟ-ನಟಿಯರಾಗಿರುವ ರಿಶಿ ಕೌಶಿಕ್‌, ಕಾಂಚನ ಮೊಯಿತ್ರಾ, ರೂಪಾಂಜನಾ ಮಿತ್ರಾ ಮತ್ತು ಬಿಸ್ವಜಿತ್‌ ಗಂಗೂಲಿ ಸೇರಿದಂತೆ ಪ್ರಮುಖರು ನವದೆಹಲಿಯಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಇದರ ಜತೆಗೆ ಟಿಎಂಸಿ, ಸಿಪಿಎಂನಿಂದಲೂ ಕೆಲವರು ಪಕ್ಷ ಸೇರ್ಪಡೆಯಾಗಿದ್ದಾರೆ. ಇನ್ನೊಂದೆಡೆ, ಮಹಾರಾಷ್ಟ್ರದಲ್ಲೂ ಇಂಥದ್ದೇ ಬೆಳವಣಿಗೆ ಸದ್ಯದಲ್ಲೇ ನಡೆಯಲಿದ್ದು, ಕಾಂಗ್ರೆಸ್‌-ಎನ್‌ಸಿಪಿಯ ಕೆಲವು ಶಾಸಕರು 10 ದಿನಗಳ ಒಳಗಾಗಿ ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಚಂದ್ರಕಾಂತ್‌ ಪಾಟೀಲ್ ತಿಳಿಸಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ