ತಾನು ಬದುಕಿದ್ದೇನೆ ಎಂದು ಪತ್ನಿಗೆ ತಿಳಿಸಲು ಭಾರತೀಯ ಯೋಧನ 100 ರೂ. ಟ್ರಿಕ್!

Team Udayavani, Oct 7, 2019, 8:00 AM IST

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಶ್ರೀನಗರ: ದೂರದ ಊರಿನಲ್ಲಿ ಕೆಲಸದಲ್ಲಿರುವವರು ತಮ್ಮ ಕ್ಷೇಮ ಸಮಾಚಾರವನ್ನು ತಮ್ಮ ಮನೆಯವರಿಗೆ ತಿಳಿಸಲು ಮೊಬೈಲ್ ಫೋನ್, ಪತ್ರ ವ್ಯವಹಾರ ಅಥವಾ ಇನ್ನಿತರ ಮಾಧ್ಯಮಗಳನ್ನು ಬಳಸಿಕೊಳ್ಳುವ ಈ ಕಾಲದಲ್ಲಿ ಇಲ್ಲೊಬ್ಬ ಯೋಧ ತಾನು ಸುರಕ್ಷಿತವಾಗಿದ್ದೇನೆ ಎಂದು ತನ್ನ ಪತ್ನಿಗೆ ತಿಳಿಸಲು ನೂರು ರೂಪಾಯಿ ನೋಟನ್ನು ಬಳಸುತ್ತಿದ್ದಾರೆ. ಆಶ್ಚರ್ಯವಾಗುತ್ತಿದೆಯೇ? ಹೌದು, ಆಶ್ಚರ್ಯವಾದರೂ ನೀವಿದನ್ನು ನಂಬಲೇಬೇಕು.

ಜಮ್ಮು ಕಾಶ್ಮೀರದಲ್ಲಿ 370ನೇ ವಿಧಿ ರದ್ಧತಿ ಬಳಿಕ ಕಣಿವೆ ರಾಜ್ಯದಲ್ಲಿ ಅನಿರ್ಧಷ್ಟಾವಧಿ ಕರ್ಫ್ಯೂ ವಿಧಿಸಲಾಗಿದೆ ಮಾತ್ರವಲ್ಲದೇ ಮೊಬೈಲ್ ಸಂಪರ್ಕ ಸಹಿತ ಎಲ್ಲಾ ರೀತಿಯ ಸಂವಹನ ವ್ಯವಸ್ಥೆಗಳನ್ನು ಸ್ಥಗಿತಗೊಳಿಸಲಾಗಿದೆ.

ಇದರ ಬಿಸಿ ಅಲ್ಲಿನ ಸ್ಥಳಿಯರಿಗೆ ಮಾತ್ರವಲ್ಲದೇ ಆ ಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಭಾರತೀಯ ಯೋಧರಿಗೂ ತಟ್ಟಿದೆ. ಕಣಿವೆ ರಾಜ್ಯದ ವಿವಿಧ ಕಡೆಗಳಲ್ಲಿ ರಕ್ಷಣಾ ಕಾರ್ಯದಲ್ಲಿ ನಿರತರಾಗಿರುವ ಯೋಧರು ತಮ್ಮ ಕುಟುಂಬ ಸದಸ್ಯರನ್ನು ಸಂಪರ್ಕಿಸಲು ಸಾಧ್ಯವಾಗದೇ ಪರದಾಡುವಂತಾಗಿದೆ. ಇದಕ್ಕೆ ಯೋಧರೊಬ್ಬರು ವಿಶಿಷ್ಟ ಉಪಾಯ ಒಂದನ್ನು ಕಂಡುಕೊಂಡಿದ್ದಾರೆ.

ಬಾರಾಮುಲ್ಲಾದ ಖ್ವಾಜಾ ಭಾಗ್ ಪ್ರದೇಶದಲ್ಲಿ ಕರ್ತವ್ಯ ನಿರತರಾಗಿರುವ ಭಾರತೀಯ ಸೇನೆಯ ಯೋಧರೊಬ್ಬರು ಪ್ರತೀದಿನ ಎಟಿಎಂಗೆ ಹೋಗಿ ನೂರು ರೂಪಾಯಿಗಳನ್ನು ತೆಗೆಯುತ್ತಾರೆ. ಹೀಗೆ ಮಾಡುವುದರಿಂದ ಅವರ ಕುಟುಂಬದವರಿಗೆ ಈ ಯೋಧನ ಕ್ಷೇಮದ ಕುರಿತು ಹೇಗೆ ಮಾಹಿತಿ ಸಿಗುತ್ತದೆ ಎಂದು ಆಶ್ಚರ್ಯವಾಗುತ್ತಿದೆಯೇ?

ಹೌದು, ಆ ಯೋಧ ಕೊಟ್ಟ ಮಾಹಿತಿ ಪ್ರಕಾರ ಅವರ ಬ್ಯಾಂಕ್ ಖಾತೆಗೆ ಲಿಂಕ್ ಆಗಿರುವ ಮೊಬೈಲ್ ನಂಬರನ್ನು ಅವರ ಪತ್ನಿ ಬಳಸುತ್ತಿದ್ದಾರಂತೆ. ಹೀಗಾಗಿ ಪ್ರತೀ ದಿನ ಇವರು ಎಟಿಎಂನಿಂದ ಹಣ ತೆಗೆದ ಕೂಡಲೇ ಅವರ ಪತ್ನಿಯ ಮೊಬೈಲ್ ಗೆ ಸಂದೇಶ ಹೋಗುತ್ತದೆ. ಇದನ್ನು ನೋಡಿದ ತಕ್ಷಣ ಈ ಯೋಧನ ಪತ್ನಿಗೆ ಮತ್ತು ಅವರ ಕುಟುಂಬದವರಿಗೆ ಇವರು ಕ್ಷೇಮವಾಗಿದ್ದಾರೆ ಎಂಬ ಸಂದೇಶ ತಲುಪುತ್ತದೆ. ಎಟಿಂನಲ್ಲಿ ಕನಿಷ್ಠ 100 ರೂಪಾಯಿಗಳನ್ನು ತೆಗೆಯಲು ಸಾಧ್ಯವಾಗುವುದರಿಂದ ಇವರು ಪ್ರತೀ ದಿನ ಎಟಿಎಂಗೆ ಹೋಗಿ 100 ರೂಪಾಯಿಗಳನ್ನು ವಿತ್ ಡ್ರಾ ಮಾಡುತ್ತಾರೆ.

ಬಾಹ್ಯ ಜಗತ್ತಿನೊಂದಿಗೆ ಸಂಪರ್ಕವನ್ನು ಕಳೆದುಕೊಂಡಿರುವ ಕಾಶ್ಮೀರ ಕಣಿವೆಯಲ್ಲಿ ಸಂವಹನ ಎಷ್ಟು ಕಷ್ಟಸಾಧ್ಯವಾಗಿದೆ ಎಂಬುದನ್ನು ಈ ಒಂದು ಘಟನೆ ಸಾರಿ ಹೇಳುತ್ತಿದೆ. ಮನೆಯವರಿಗೆ ತನ್ನ ಕ್ಷೇಮ ಸಮಾಚಾರವನ್ನು ತಿಳಿಸಲು ಈ ಯೋಧ ಅನುಸರಿಸಿರುವ ಈ ವಿಶಿಷ್ಟ ವಿಧಾನವನ್ನು ಕೇಳಿ ಎಟಿಎಂ ಭದ್ರತಾ ಸಿಬ್ಬಂದಿ ಮತ್ತು ಅಲ್ಲಿದ್ದ ಸ್ಥಳೀಯರು ಒಂದರೆಕ್ಷಣ ಭಾವುಕರಾಗಿದ್ದಾರೆ. ‘ಇಂಡಿಯನ್ ಆರ್ಮಿ ಫ್ಯಾನ್ಸ್’ ಎಂಬ ಫೇಸ್ಬುಕ್ ಪುಟದಲ್ಲಿ ಈ ಘಟನೆಯನ್ನು ಹಂಚಿಕೊಳ್ಳಲಾಗಿದೆ. ಮತ್ತು ಈ ಪೋಸ್ಟ್ ಅನ್ನು 7 ಸಾವಿರ ಮಂದಿ ಶೇರ್ ಮಾಡಿಕೊಂಡಿದ್ದಾರೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ನವದೆಹಲಿ: ಇತ್ತೀಚೆಗಷ್ಟೇ ರಾಜ್ಯಸಭೆ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದ ಕೆ.ಸಿ.ರಾಮಮೂರ್ತಿ ಈಗ ಬಿಜೆಪಿಗೆ ಸೇರಿದ್ದಾರೆ. ಇವರನ್ನು ಕರ್ನಾಟಕದಿಂದ ರಾಜ್ಯಸಭೆಗೆ...

  • ಹೊಸದಿಲ್ಲಿ: ಕೇಂದ್ರ ಸರಕಾರದ ಉದ್ಯೋಗಿಗಳು ಪಡೆಯಬಹುದಾದ ಉಡುಗೊರೆಗಳ ಮೌಲ್ಯದ ಮಿತಿಯನ್ನು ಹೆಚ್ಚಿಸಲಾಗಿದೆ. ಈಗ ಎ ಮತ್ತು ಬಿ ವರ್ಗದ ಉದ್ಯೋಗಿಗಳು 5 ಸಾವಿರ ರೂ.ವರೆಗಿನ...

  • ಹೊಸದಿಲ್ಲಿ: ಕರ್ನಾಟಕದಲ್ಲಿ ಜನರು ಸೈಬರ್‌ ಅಪರಾಧದ ಸಂತ್ರಸ್ತರಾದರೆ ಅವರಿಗೆ ನ್ಯಾಯ ಸಿಗುವುದು ದೂರದ ಮಾತು. 2017ರಲ್ಲಿ ಯಾವ ಸೈಬರ್‌ ಕ್ರೈಂನಲ್ಲಿಯೂ ಯಾವೊಬ್ಬರಿಗೂ...

  • ತಿರುವನಂತಪುರ: ರೇಪ್‌ ಬಗ್ಗೆ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಹಾಕಿದ್ದಕ್ಕೆ ಕೇರಳದ ಸಂಸದ ಹಿಬಿ ಎಡೆನ್‌ ಪತ್ನಿ ಈಗ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಟೀಕೆ ಎದುರಿಸುವಂತಾಗಿದೆ....

  • ಹೊಸದಿಲ್ಲಿ: ಬ್ಯಾಂಕ್‌ಗಳ ವಿಲೀನ ಮತ್ತು ಠೇವಣಿ ಬಡ್ಡಿ ದರ ಇಳಿಕೆಯನ್ನು ವಿರೋಧಿಸಿ ರಾಷ್ಟ್ರೀಕೃತ ಬ್ಯಾಂಕ್‌ ನೌಕರರು ಮಂಗಳವಾರ ಪ್ರತಿಭಟನೆ ನಡೆಸಿದ್ದರಿಂದ,...

ಹೊಸ ಸೇರ್ಪಡೆ