ಜಡ್ಜ್ ಗಳ ವೇತನ ಶೇ.200ರಷ್ಟು ಹೆಚ್ಚಳ; ಕೇಂದ್ರ ಒಪ್ಪಿಗೆ
Team Udayavani, Mar 27, 2017, 3:45 AM IST
ನವದೆಹಲಿ: ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್ ನ್ಯಾಯಮೂರ್ತಿಗಳ ವೇತನ ಶೀಘ್ರದಲ್ಲೇ ಶೇ.200ರಷ್ಟು ಹೆಚ್ಚಳವಾಗಲಿದೆ. ವೇತನ ಹೆಚ್ಚಳಕ್ಕೆ ಸಂಬಂಧಿಸಿ ಸುಪ್ರೀಂ ಕಳುಹಿಸಿದ್ದ ಪ್ರಸ್ತಾಪಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದೆ.ಕೆಲವು ತಿಂಗಳ ಹಿಂದಷ್ಟೇ ಸುಪ್ರೀಂ ಕೋರ್ಟ್ನ ಮೂವರು ಜಡ್ಜ್ಗಳ ಸಮಿತಿಯು ನ್ಯಾಯಮೂರ್ತಿಗಳ ವೇತನ ಹೆಚ್ಚಳ ಮಾಡುವಂತೆ ಕೇಂದ್ರಕ್ಕೆ ಶಿಫಾರಸು ಮಾಡಿದ್ದರು. 7ನೇ ವೇತನ ಆಯೋಗದ ಶಿಫಾರಸು ಜಾರಿಗೊಂಡ ಬೆನ್ನಲ್ಲೇ ಈ ಶಿಫಾರಸು ಸಲ್ಲಿಸಲಾಗಿತ್ತು. ಸದ್ಯದಲ್ಲೇ ಈ ಕುರಿತ ಸಂಪುಟ ಟಿಪ್ಪಣಿ ಸಿದ್ಧಪಡಿಸಿ, ಅದಕ್ಕೆ ಕೇಂದ್ರ ಸಂಪುಟದ ಒಪ್ಪಿಗೆ ಪಡೆಯಲಾಗುತ್ತದೆ.
ನ್ಯಾಯಾಂಗದಲ್ಲಿ ಅತಿ ಹೆಚ್ಚು ವೇತನ ಪಡೆಯುತ್ತಿರುವವರೆಂದರೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ. ಅವರು ಸದ್ಯ ತುಟ್ಟಿ ಹಾಗೂ ಇತರೆ ಭತ್ಯೆ ಹೊರತುಪಡಿಸಿ ಮಾಸಿಕ 1 ಲಕ್ಷ ರೂ. ವೇತನ ಪಡೆಯುತ್ತಾರೆ. ಇನ್ನು ಮುಂದೆ ಇವರ ವೇತನ 2.8 ಲಕ್ಷ ರೂ. ಆಗಲಿದೆ. ಇದಲ್ಲದೆ ಅಧಿಕೃತ ನಿವಾಸ, ಕಾರುಗಳು, ಸಿಬ್ಬಂದಿ ಮತ್ತು ಭತ್ಯೆಗಳೂ ಸಿಗಲಿವೆ. ಇವರಲ್ಲದೆ, ಸುಪ್ರೀಂ ಕೋರ್ಟ್ ಹಾಗೂ 24 ಹೈಕೋರ್ಟ್ ಜಡ್ಜ್ಗಳ ವೇತನ 2.5 ಲಕ್ಷ ರೂ.ಗೆ ಏರಿಕೆಯಾಗಲಿದೆ. ಅಂದರೆ, ಕೇಂದ್ರ ಸರ್ಕಾರದ ಕಾರ್ಯದರ್ಶಿ ಮಟ್ಟದ ಅಧಿಕಾರಿಗಳ ವೇತನಕ್ಕೆ ಇದು ಸಮವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ
Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ
Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!
SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು
Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ