ಮೊದಲ ಬಾರಿ ʼಆಂಡ್ರಾಯ್ಡ್ 10′ ಬಿಡುಗಡೆ

Team Udayavani, Aug 23, 2019, 7:40 PM IST

ಮಣಿಪಾಲ: ಈ ತನಕ ವಿಶಿಷ್ಟ ಹೆಸರಿನೊಂದಿಗೆ ತನ್ನ ಆವೃತ್ತಿಗಳನ್ನು ಬಿಡುಗಡೆಗೊಳಿಸುತ್ತಿದ್ದ ಆಂಡ್ರಾಯ್ಡ್ ಗುರುವಾರ ಆಂಡ್ರಾಯ್ಡ 10 ಅನ್ನು ಬಿಡುಗಡೆ ಮಾಡಿದೆ. ಗೂಗಲ್ನ ಈ ಆ್ಯಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ಹೊಸತಾಗಿದೆ. ಈ ಮೂಲಕ ʼಸ್ವೀಟ್’ಗಳ ಹೆಸರಿನೊಂದಿಗೆ ಬರುತ್ತಿದ್ದ ಆವೃತ್ತಿಗಳಿಗೆ ಬ್ರೇಕ್ ನೀಡಿದೆ. ಅತ್ಯಾಧುನಿಕವಾದ ತಾಂತ್ರಿಕ ಹಾಗೂ ವಿಶಿಷ್ಟ್ಯಪೂರ್ಣ ಫೀಚರ್ಗಳನ್ನು ಇದು ಹೊಂದಿದೆ.

ಇನ್ನು ಮುಂದೆ ಬರುವ ಹೊಸ ನೋಕಿಯಾ ಫೋನ್ಗಳಿಗೆ ಮಾತ್ರ ಸದ್ಯ ಲಭ್ಯವಿದೆ. ನೋಕಿಯಾ 7.1, ನೋಕಿಯಾ 8.1, ನೋಕಿಯಾ 9 ಮೊಬೈಲ್ಗಳಿಗೆ ಅಕ್ಟೋಬರ್ ಡಿಸೆಂಬರ್ ತಿಂಗಳಲ್ಲಿ ದೊರೆಯಲಿದೆ. 2020ರ ವೇಳೆಗೆ ಎಲ್ಲಾ ನೋಕಿಯಾ ಫೋನ್ಗಳಿಗೆ ಲಭ್ಯವಾಗಲಿದೆ. ಬಳಿಕ ಇತರ ಪೋನ್ಗಳಿಗೆ ಅಪ್ಡೇಟ್ ದೊರೆಯುವ ಸಾಧ್ಯತೆ ಇದೆ.

ಆ್ಯಂಡ್ರಾಯ್ಡ 10 ಆವೃತ್ತಿಯನ್ನು ಆ್ಯಂಡ್ರಾಯ್ಡ ಕ್ಯೂ ಎಂದೂ ಕರೆಯಲಾಗುತ್ತದೆ. ಈ ಆವೃತ್ತಿಯ ಆ್ಯಂಡ್ರಾಯ್ಡನ ಸ್ಕ್ರೀನ್ನಲ್ಲಿ “ಕಿ ಕಾಣಿಸಿಕೊಳ್ಳಲಿದೆ. ಇದು ಆ್ಯಂಡ್ರಾಯ್ಡನ ಬಹು ಮುಖ್ಯದ 10 ಆಪರೇಟಿಂಗ್ ಸಿಸ್ಟಂ ಆಗಿದ್ದು, 17ನೇ ವರ್ಷನ್ ಆಗಿದೆ. ಜಿಂಜರ್ ಬ್ರೆಡ್ ಆ್ಯಂಡ್ರಾಯ್ಡನ ಮೊದಲ ವರ್ಷನ್ ಆಗಿದೆ. ಬಳಿಕ ಹನಿಕೊಂಬ್, ಐಸ್ಕ್ರೀಂ ಸ್ಯಾಡ್ವಿಚ್, ಜೆಲ್ಲಿ ಬೀನ್, ಕಿಟ್ಕ್ಯಾಟ್, ಲಾಲಿಪಪ್, ಮಾರ್ಷಮಲ್ಲೋ, ನಾಗೌಟ್, ಓರಿಯೋ, ಪೈ ವರ್ಷನ್ಗಳು ಈ ತನಕ ಬಿಡುಗಡೆಯಾಗಿತ್ತು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ