ಆ್ಯಂಡ್ರಾಯ್ಡ್ ಪೈ ಬಿಡುಗಡೆ
Team Udayavani, Aug 8, 2018, 6:15 AM IST
ಹೊಸದಿಲ್ಲಿ: ವರ್ಷದ ಕುತೂಹಲದ ಬಳಿಕ ಆ್ಯಂಡ್ರಾಯ್ಡ್ ತನ್ನ 9ನೇ ಸರಣಿಯ ವರ್ಶನ್ ಅನ್ನು ಬಿಡುಗಡೆ ಮಾಡಿದ್ದು, ಇದಕ್ಕೆ ಅಧಿಕೃತವಾಗಿ ‘ಪೈ’ ಎಂಬ ಹೆಸರನ್ನಿಟ್ಟಿದೆ. ಕೆಲವು ದಿನಗಳ ಹಿಂದೆ ಬೇಟಾ ವರ್ಶನ್ ಬಿಡುಗಡೆ ಮಾಡಿದ್ದ ಗೂಗಲ್ ಇದೀಗ, ಅಧಿಕೃತ ವರ್ಶನ್ ಅನ್ನೇ ಬಿಡುಗಡೆ ಮಾಡಿದೆ. ಈಗಾಗಲೇ 1,40,000 ಮಂದಿ ಬೇಟಾ ವರ್ಶನ್ ಡೌನ್ ಲೋಡ್ ಮಾಡಿಕೊಂಡು ಈ ಆ್ಯಂಡ್ರಾಯ್ಡ್ ಪೈ ಅನ್ನು ಪರೀಕ್ಷಿಸಿದ್ದಾರೆ. ಇದು ಆ್ಯಂಡ್ರಾಯ್ಡ್ ಒರಿಯೋನ ಅನಂತರದ ರೂಪ.
ಗೂಗಲ್ನ ಪಿಕ್ಸಲ್, ಪಿಕ್ಸಲ್ ಎಕ್ಸ್.ಎಲ್, ಪಿಕ್ಸಲ್ 2 ಮತ್ತು ಪಿಕ್ಸಲ್ 2ಪ್ಲಸ್ ನಲ್ಲಿ ಆರಂಭದಲ್ಲಿ ಬಿಡುಗಡೆಯಾಗಲಿದೆ. ಈ ಮೊಬೈಲ್ ಫೋನ್ಗಳನ್ನು ಹೊಂದಿರುವವರು ಈ ವರ್ಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ. ಆ್ಯಂಡ್ರಾಯ್ಡ್ ಪೈನಲ್ಲಿ ನೂತನ ರೀತಿಯ ನೆವಿಗೇಶನ್ ವ್ಯವಸ್ಥೆ ಬಂದಿದೆ. ಅಲ್ಲದೇ ಸಿಂಗಲ್ ಹೋಮ್ ಬಟನ್ ಕೂಡ ಇರಲಿದೆ. ಅಂದರೆ, ಆ್ಯಪಲ್ ಐಫೋನ್ ಎಕ್ಸ್ ರೀತಿಯಲ್ಲೇ ವಿನ್ಯಾಸ ಮಾಡಲಾಗಿದೆ. ಅಲ್ಲದೆ ಅಡಾಪ್ಟೀವ್ ಬ್ಯಾಟರಿ ಮತ್ತು ಅಡಾಪ್ಟೀವ್ ಬ್ರೈಟ್ನೆಸ್ ಅನ್ನೂ ಸೇರಿಸಲಾಗಿದೆ. ಆದರೆ ಈ ಫೀಚರ್ ಗಳನ್ನು ಬಳಕೆದಾರರ ಆಯ್ಕೆಗೆ ಬಿಡಲಾಗಿದೆ. ಅವರು ಬೇಕೆಂದಲ್ಲಿ ಮಾತ್ರ ಇದನ್ನು ಉಪಯೋಗಿಸಬಹುದಾಗಿದೆ.
ಏನಿದು ‘ಪೈ’?: ಇದು ಬ್ರೆಡ್ ರೀತಿಯಲ್ಲೇ ಬೇಯಿಸಿದ ಒಂದು ಸಿಹಿ ಖಾದ್ಯ. ಇದನ್ನು ಪೇಸ್ಟ್ರಿಯ ಹಿಟ್ಟಿನಿಂದ ತಯಾರಿಸಲಾಗುತ್ತದೆ. ಇದರ ಒಳಗೆ ಸಿಹಿ ಮತ್ತು ಹುಳಿಯ ಹೂರಣ ಇರುತ್ತದೆ. ಇದಕ್ಕೆ ಬೇರೆ ಬೇರೆ ಹಣ್ಣುಗಳ ಹೂರಣವನ್ನೂ ಬಳಕೆ ಮಾಡಲಾಗುತ್ತದೆ. ಹೆಚ್ಚು ಕಡಿಮೆ ಇದು ಈಜಿಪ್ಟ್ ಮೂಲದ್ದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು
Odisha: ಎನ್ಕೌಂಟರ್; ಇಬ್ಬರು ನಕ್ಸಲರ ಹತ್ಯೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
MUST WATCH
ಹೊಸ ಸೇರ್ಪಡೆ
IPL: ಎಲ್ಲೆ ಮೀರಿ ವಿಕೆಟ್ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್ ಸಲಾಂಗೆ ಛೀಮಾರಿ
IPL: ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ಅಕ್ಷರ್ ಪಟೇಲ್ ಕೂಡ ವಿರೋಧ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ